India vs Australia Playing 11: ಈ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ ಟೀಮ್ ಇಂಡಿಯಾ.. ಭಾರತದ ಪ್ಲೇಯಿಂಗ್‌ 11 ಇದೇ.

Team India Playing 11: ಒಂದು ಬದಲಾವಣೆಯೊಂದಿಗೆ ಟೀಮ್ ಇಂಡಿಯಾ‌ ಫೈನಲ್‌ ಕದನಕ್ಕೆ ಸಜ್ಜಾಗುತ್ತಿದೆ. ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಲು ರೋಹಿತ್‌ ಪಡೆ ತಯಾರಾಗಿದೆ.  

Written by - Chetana Devarmani | Last Updated : Nov 18, 2023, 01:42 PM IST
  • ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್‌ 11
  • ಟೀಮ್ ಇಂಡಿಯಾ‌ ಫೈನಲ್‌ ಕದನಕ್ಕೆ ಸಜ್ಜಾಗುತ್ತಿದೆ
  • ಆಸ್ಟ್ರೇಲಿಯಾ ವಿರುದ್ಧ ಲುವು ದಾಖಲಿಸಲು ರೋಹಿತ್‌ ಪಡೆ ತಯಾರಿ
India vs Australia Playing 11: ಈ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ ಟೀಮ್ ಇಂಡಿಯಾ.. ಭಾರತದ ಪ್ಲೇಯಿಂಗ್‌ 11 ಇದೇ. title=
R Ashwin

India vs Australia Playing 11 : ವಿಶ್ವಕಪ್‌ 2023 ರ ಫೈನಲ್‌ ಪಂದ್ಯ  ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ನಡೆಯಲಿದೆ. ಈ ರೋಚಕ ಹಣಾಹಣಿಗೆ ಎರಡೂ ತಂಡಗಳೂ ಸಜ್ಜಾಗಿವೆ. ಕಾಂಗರೂ ಪಡೆಯನ್ನು ಕಟ್ಟಿಹಾಕಲು ಭಾರತ ತಂಡ ರಣತಂತ್ರ ರೂಪಿಸುತ್ತಿದೆ. ಫೈನಲ್ ಪಂದ್ಯದಲ್ಲೂ ಹಲವು ಸಮೀಕರಣಗಳು ಭಾರತದ ಪರವಾಗಿವೆ. ತಂಡದ ಪ್ರಸ್ತುತ ಫಾರ್ಮ್ ಮತ್ತು ತವರಿನ ಪರಿಸ್ಥಿತಿಗಳನ್ನು ನೋಡಿದರೆ, ಭಾರತದ ವಿಶ್ವಕಪ್‌ ಗೆಲ್ಲುವ ಕನಸು ನನಸಾಗುವ ಸನಿಹದಲ್ಲಿದೆ. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಅದ್ಭುತ ಗೆಲುವು ದಾಖಲಿಸಿದೆ. ಆದರೆ, ರೋಹಿತ್ ಬ್ರಿಗೇಡ್ ಒಂದು ಬದಲಾವಣೆಯೊಂದಿಗೆ ಫೈನಲ್ ಪ್ರವೇಶಿಸಬಹುದು‌ ಎನ್ನಲಾಗ್ತಿದೆ. ಶುಕ್ರವಾರ ಭಾರತ ತಂಡದ ಅಭ್ಯಾಸದ ವೇಳೆ ಇದರ ಸೂಚನೆಗಳು ದೊರೆತಿವೆ.

ಶುಕ್ರವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಕ್ರಿಕೆಟ್ ತಂಡ ಅಭ್ಯಾಸ ನಡೆಸಿತು. ಈ ವೇಳೆ ನಾಯಕ ರೋಹಿತ್ ಶರ್ಮಾ ಸ್ಲಿಪ್ ಫೀಲ್ಡಿಂಗ್ ನಲ್ಲಿ ಸಾಕಷ್ಟು ಅಭ್ಯಾಸ ನಡೆಸಿದರು. ಇದರಿಂದಾಗಿ ಅಂತಿಮ ಪಂದ್ಯದಲ್ಲಿ ಸ್ಪಿನ್ನರ್‌ಗಳಿಗೆ ಪಿಚ್ ಅನುಕೂಲಕರವಾಗಿರಬಹುದು ಎಂಬ ಊಹಾಪೋಹಗಳು ಶುರುವಾಗಿವೆ. ಇದಲ್ಲದೆ, ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಬೌಲಿಂಗ್ ಅಭ್ಯಾಸ ಮಾಡಿದರು.

ಇದನ್ನೂ ಓದಿ : IND vs AUS Final : ಭಾರತ ಈ ತಪ್ಪುಗಳನ್ನು ಮಾಡದಿದ್ದರೆ ಈ ಸಲ ವಿಶ್ವಕಪ್ ನಮ್ದೇ.. ಅವರಿಬ್ಬರನ್ನು ಔಟ್ ಮಾಡಿದರೆ ಸಾಕು! 

ರೋಹಿತ್ ಶರ್ಮಾ ಅವರ ಸ್ಲಿಪ್ ಫೀಲ್ಡಿಂಗ್ ಮತ್ತು ಅಶ್ವಿನ್ ಬೌಲಿಂಗ್ ನೋಡಿದ ನಂತರ ಭಾರತವು ಫೈನಲ್‌ ಪಂದ್ಯದಲ್ಲಿ ಮೂವರು ಸ್ಪಿನ್ನರ್‌ಗಳೊಂದಿಗೆ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಬಹುದು ಎಂದು ನಿರೀಕ್ಷಿಸಲಾಗಿದೆ. ಅಶ್ವಿನ್ ಪ್ಲೇಯಿಂಗ್‌ 11 ರಲ್ಲಿ ಸ್ಥಾನ ಪಡೆದರೆ, ಮೊಹಮ್ಮದ್ ಸಿರಾಜ್ ಹೊರಗುಳಿಯಬೇಕಾಗಬಹುದು. ಇದರ ಹೊರತಾಗಿ ತಂಡದಲ್ಲಿ ಯಾವುದೇ ಬದಲಾವಣೆಗಳನ್ನು ನಿರೀಕ್ಷಿಸಲಾಗಿಲ್ಲ. 

ಅಶ್ವಿನ್ ಅವರನ್ನು ಫೈನಲ್‌ನಲ್ಲಿ ಆಡಿಸಲು ಹಲವು ಕಾರಣಗಳಿವೆ. ವಾಸ್ತವವಾಗಿ, ಆಸ್ಟ್ರೇಲಿಯಾ ವಿರುದ್ಧ ಅಶ್ವಿನ್ ಅವರ ದಾಖಲೆ ಅತ್ಯುತ್ತಮವಾಗಿದೆ. ಇದಲ್ಲದೆ, ಅವರು ಡೇವಿಡ್ ವಾರ್ನರ್ ವಿರುದ್ಧವೂ ತುಂಬಾ ಪರಿಣಾಮಕಾರಿಯಾಗಿ ಬಾಲಿಂಗ್‌ ಮಾಡಬಹುದು. ಆಸ್ಟ್ರೇಲಿಯಾದ ಆರಂಭಿಕರಿಬ್ಬರೂ ಎಡಗೈ ಆಟಗಾರರು. ಭಾರತವು ಆಫ್‌ ಸ್ಪಿನ್ನರ್‌ನನ್ನು ತಂಡದಲ್ಲಿ ಸೇರಿಸಿಕೊಳ್ಳಲು ಇದೂ ಒಂದು ಕಾರಣವಾಗಿದೆ. 

ಇದನ್ನೂ ಓದಿ : IND vs AUS: ಅಹಮದಾಬಾದ್ ಪಿಚ್ ಹೇಗಿದೆ? ಫೈನಲ್‌ಗೆ ಮುನ್ನ ರಿಪೋರ್ಟ್ ಕಾರ್ಡ್ ತಿಳಿಯಿರಿ

ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್‌ 11 - ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ / ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ ಮತ್ತು ಜಸ್ಪ್ರಿತ್ ಬುಮ್ರಾ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News