World Cup 2023: ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಭಾನುವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡದ ಬ್ಯಾಟ್ಸ್‌’ಮನ್ ಒಬ್ಬರು ವಿಫಲರಾಗಿ ನಾಯಕ ರೋಹಿತ್ ಶರ್ಮಾ ಮತ್ತು ತಂಡದ ಆಡಳಿತದ ವಿಶ್ವಾಸವನ್ನು ಒಡೆದಿದ್ದಾರೆ. ಭಾರತದ ಈ ಬ್ಯಾಟ್ಸ್‌ಮನ್‌’ಗೆ ತಂಡದ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗಲಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 13 ವರ್ಷಗಳ ಸುಖ-ದಾಂಪತ್ಯಕ್ಕೆ ಅಂತ್ಯ ಹಾಡಿದ ಖ್ಯಾತ ಕ್ರಿಕೆಟಿಗ: ವಿಚ್ಛೇದನಕ್ಕೆ ಮುಂದಾದ ಜೋಡಿ!


2023ರ ವಿಶ್ವಕಪ್‌’ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡವನ್ನು 6 ವಿಕೆಟ್‌’ಗಳಿಂದ ಸೋಲಿಸಿದ್ದರೂ, ಟೀಂ ಇಂಡಿಯಾ ಗೆಲುವನ್ನು ದಾಖಲಿಸುವುದು ಸುಲಭವಾಗಿರಲಿಲ್ಲ. ಆಸ್ಟ್ರೇಲಿಯಾ ಟೀಂ ಇಂಡಿಯಾಗೆ 200 ರನ್‌’ಗಳ ಗುರಿ ನೀಡಿತ್ತು. ಇದಕ್ಕುತ್ತರ ನೀಡಲು ಕಣಕ್ಕಿಳಿದಿದ್ದ ಭಾರತ ತಂಡ ಕೇವಲ 2 ರನ್ ಗಳಿಸುವಷ್ಟರಲ್ಲಿ ಮೊದಲ 3 ವಿಕೆಟ್ ಕಳೆದುಕೊಂಡಿತ್ತು. ಆರಂಭಿಕ ಇಶಾನ್ ಕಿಶನ್, ನಾಯಕ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಮೂವರೂ ಶೂನ್ಯಕ್ಕೆ ಪೆವಿಲಿಯನ್‌’ಗೆ ಮರಳಿದ್ದರು. ಶ್ರೇಯಸ್ ಅಯ್ಯರ್ ಅವರಿಗೆ 4ನೇ ಕ್ರಮಾಂಕದಲ್ಲಿ ಅತ್ಯಂತ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಲಾಯಿತು. ಆದರೆ ಅಸಹಾಯಕತೆ ತೋರಿ ಔಟ್ ಆದರು.


ಟೀಂ ಇಂಡಿಯಾ ಸ್ಕೋರ್ 1.3 ಓವರ್‌’ಗಳಲ್ಲಿ 2 ರನ್‌’ಗಳಿಗೆ 2 ವಿಕೆಟ್‌ ಆಗಿದ್ದಾಗ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌’ಗೆ ಬಂದರು. ವಿರಾಟ್ ಕೊಹ್ಲಿ ಜೊತೆಗೆ ಶ್ರೇಯಸ್ ಅಯ್ಯರ್ ಟೀಂ ಇಂಡಿಯಾ ಇನ್ನಿಂಗ್ಸ್ ಅನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ ಎಂದು ಭಾರತೀಯ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ (0 ರನ್) ಮತ್ತು ಇಶಾನ್ ಕಿಶನ್ (0 ರನ್) ಅವರಂತೆ ಶ್ರೇಯಸ್ ಅಯ್ಯರ್ ಪೆವಿಲಿಯನ್‌’ಗೆ ಮರಳುವ ಆತುರದಲ್ಲಿದ್ದರು ಎಂದನಿಸುತ್ತದೆ.


ಶ್ರೇಯಸ್ ಅಯ್ಯರ್ ಭಾರತೀಯ ಅಭಿಮಾನಿಗಳ ವಿಶ್ವಾಸವನ್ನು ಒಡೆದು 0 ರನ್‌’ಗೆ ಪೆವಿಲಿಯನ್‌ಗೆ ಮರಳಿದರು. ಶ್ರೇಯಸ್ ಆಸ್ಟ್ರೇಲಿಯದ ವೇಗದ ಬೌಲರ್‌’ಗಳ ಅಬ್ಬರದ ನಡುವೆಯೇ ಶ್ರೇಯಸ್ ಅಯ್ಯರ್ ಆಟ ನಡೆಯಲಿಲ್ಲ. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಶ್ರೇಯಸ್ ಅಯ್ಯರ್ ಟೀಂ ಇಂಡಿಯಾ ಸ್ಕೋರ್ ಸುಧಾರಿಸುವ ದೊಡ್ಡ ಜವಾಬ್ದಾರಿ ಹೊತ್ತಿದ್ದರು. ಸೂರ್ಯಕುಮಾರ್ ಯಾದವ್ ಅವರಂತಹ ಪ್ರತಿಭಾವಂತ ಬ್ಯಾಟ್ಸ್‌ಮನ್‌’ಗಳು ಹೊರಗೆ ತಮ್ಮ ಅವಕಾಶಗಳಿಗಾಗಿ ಕಾಯುತ್ತಿದ್ದರೂ ಸಹ ಅವರಿಗೆ ಸ್ಥಾನ ನೀಡಿಲಿಲ್ಲ.


ಇದನ್ನೂ ಓದಿ: ತೆಂಗಿನೆಣ್ಣೆ ಜೊತೆ ಈ ಗಿಡದ ಎಲೆಯನ್ನು ಬೆರೆಸಿ ತಲೆಗೆ ಹಚ್ಚಿ… ನಿಮಿಷಗಳಲ್ಲಿ ಶಾಶ್ವತವಾಗಿ ಕಪ್ಪಾಗುವುದು ಬಿಳಿಕೂದಲು!


ಇದೀಗ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ವಿಶ್ವಕಪ್ ಪಂದ್ಯವು 11 ಅಕ್ಟೋಬರ್ 2023 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬದಲಿಗೆ ಸೂರ್ಯಕುಮಾರ್ ಯಾದವ್’ಗೆ ಅವಕಾಶ ನೀಡುವ ಎಲ್ಲಾ ಸಾಧ್ಯತೆಗಳು ಇವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.