13 ವರ್ಷಗಳ ಸುಖ-ದಾಂಪತ್ಯಕ್ಕೆ ಅಂತ್ಯ ಹಾಡಿದ ಖ್ಯಾತ ಕ್ರಿಕೆಟಿಗ: ವಿಚ್ಛೇದನಕ್ಕೆ ಮುಂದಾದ ಕ್ರೀಡಾ ಜೋಡಿ!

Sania Mirza-Shoaib Divorce Fact Check: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಸಂಬಂಧಿಸಿ ಕೆಲ ತಿಂಗಳುಗಳಿಂದ ಭಾರೀ ಊಹಾಪೋಹಗಳು ಸದ್ದು ಮಾಡಿವೆ.

Written by - Bhavishya Shetty | Last Updated : Oct 9, 2023, 07:14 PM IST
    • ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ವಿಚ್ಛೇದನದ ಗಾಸಿಪ್
    • ಕಳೆದ ವರ್ಷದಿಂದ ಇವರಿಬ್ಬರ ವಿಚ್ಛೇದನದ ಊಹಾಪೋಹಗಳು ಹರಿದಾಡುತ್ತಿದೆ
    • ಜೊತೆಗೆ ಸಾನಿಯಾ ಮಿರ್ಜಾ ನೀಡಿರುವ ಹೇಳಿಕೆಯೊಂದು ಸಖತ್ ಸದ್ದು ಮಾಡುತ್ತಿದೆ
13 ವರ್ಷಗಳ ಸುಖ-ದಾಂಪತ್ಯಕ್ಕೆ ಅಂತ್ಯ ಹಾಡಿದ ಖ್ಯಾತ ಕ್ರಿಕೆಟಿಗ: ವಿಚ್ಛೇದನಕ್ಕೆ ಮುಂದಾದ ಕ್ರೀಡಾ ಜೋಡಿ! title=
Sania Mirza and Shoaib Malik

Sania Mirza-Shoaib Divorce News Fact Check: ವಿಶ್ವದ ಸ್ಟಾರ್ ಟೆನಿಸ್ ಆಟಗಾರ್ತಿಯರಲ್ಲಿ ಒಬ್ಬರಾದ, ಭಾರತದ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ನಡುವಿನ ಸಂಬಂಧ ಮುರಿದುಬಿದ್ದಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಈ ಮಧ್ಯೆ ಶೋಯೆಬ್ ಮಲಿಕ್ ಮಾಡಿದ ಪೋಸ್ಟ್ ಒಂದು ವೈರಲ್ ಆಗಿದ್ದು, ಜೊತೆಗೆ ಸಾನಿಯಾ ಮಿರ್ಜಾ ನೀಡಿರುವ ಹೇಳಿಕೆಯೊಂದು ಸಖತ್ ಸದ್ದು ಮಾಡುತ್ತಿದೆ.

ಇದನ್ನೂ ಓದಿ:ವಿಶ್ವಕಪ್ ಟೂರ್ನಿ ಶುಭಾರಂಭ ಮಾಡಿದ ಭಾರತಕ್ಕೆ ಮುಂದಿನ ಎದುರಾಳಿ ಯಾರು? ಪಂದ್ಯ ಎಲ್ಲಿ-ಯಾವಾಗ?

ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಸಂಬಂಧಿಸಿ ಕೆಲ ತಿಂಗಳುಗಳಿಂದ ಭಾರೀ ಊಹಾಪೋಹಗಳು ಸದ್ದು ಮಾಡಿವೆ. ಕಳೆದ ವರ್ಷದಿಂದ ಇವರಿಬ್ಬರ ವಿಚ್ಛೇದನದ ಊಹಾಪೋಹಗಳು ಹರಿದಾಡುತ್ತಿದ್ದರೂ, ಇಬ್ಬರೂ ಕೂಡ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಪತಿಗಿಂತ ಮಗನನ್ನೇ ಆರಿಸಿದ ಸಾನಿಯಾ..!:

ಇತ್ತೀಚೆಗೆಯಷ್ಟೇ ಸೋಶಿಯಲ್ ಮೀಡಿಯಾ ಸಂದರ್ಶನವೊಂದರಲ್ಲಿ ನಿರೂಪಕಿ ಸಾನಿಯಾ ಬಳಿ ಒಂದು ಪ್ರಶ್ನೆಯನ್ನು ಕೇಳಿದ್ದರು. ಅದೇನೆಂದರೆ, “ನಿಮಗೆ ಶೋಯೆಬ್ ಮತ್ತು ನಿಮ್ಮ ಮಗನಲ್ಲಿ ಯಾರೆಂದರೆ ಇಷ್ಟ?” ಎಂಬುದಾಗಿತ್ತು, ಇದಕ್ಕೆ ಹಿಂದೂ ಮುಂದೂ ಯೋಚಿಸದೆ ಮಗನೇ ಇಷ್ಟ ಎಂದು ಹೇಳಿಕೆ ನೀಡಿದ್ದಾರೆ ಸಾನಿಯಾ. ಈ ಬೆನ್ನಲ್ಲೇ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ವಿಚ್ಛೇದನದ ಬಗ್ಗೆ ಮತ್ತೆ ಗಾಸಿಪ್ ಎದ್ದಿದೆ.

ಸಾನಿಯಾ ಮತ್ತು ಶೋಯೆಬ್ 2010 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಮದುವೆ ಎರಡೂ ದೇಶಗಳ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಸೃಷ್ಟಿ ಮಾಡಿತ್ತು.

ಇನ್‌ಸ್ಟಾಗ್ರಾಮ್ ಬಯೋ ಚೇಂಜ್!

ಇನ್ನೊಂದೆಡೆ ಶೋಯೆಬ್ ಮಲಿಕ್ ತನ್ನ ಇನ್‌’ಸ್ಟಾಗ್ರಾಂ ಬಯೋದಲ್ಲಿ ಸಾನಿಯಾ ಮಿರ್ಜಾ ಬಗ್ಗೆ ಬರೆದಿರುವ ಬರಹವನ್ನು ತೆಗೆದುಹಾಕಿದ್ದರು. ಇದು ವಿಚ್ಛೇದನದ ಗಾಸಿಪ್’ಗೆ ತುಪ್ಪ ಸುರಿದಂತೆ ಆಗಿದೆ.

41 ವರ್ಷದ ಮಲಿಕ್ ತಮ್ಮ ಇನ್‌ಸ್ಟಾಗ್ರಾಂ ಬಯೋದಿಂದ 'ಸೂಪರ್ ವುಮನ್ ಸಾನಿಯಾ ಮಿರ್ಜಾ ಪತಿ' ಎಂಬ ಬರಹವನ್ನು ತೆಗೆದುಹಾಕಿ, 'ಫಾದರ್ ಆಫ್ ಒನ್ ಟ್ರೂ ಬ್ಲೆಸ್ಸಿಂಗ್' ಎಂದು ಬರೆದಿದ್ದಾರೆ.

ಇದನ್ನೂ ಓದಿ: ವಿಶ್ವಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ದಾಖಲೆ ಬರೆದ ವಿರಾಟ್ ಕೊಹ್ಲಿ!

ಇನ್ನು ಅವರ ಆಪ್ತ ಮೂಲಗಳು ಹೇಳುವಂತೆ, “ಸಾನಿಯಾ ಮತ್ತು ಶೋಯೆಬ್ ವಿಚ್ಛೇದನ ವಿಚಾರ ಅವರ ವೈಯಕ್ತಿಕ ಜೀವನದ್ದಾಗಿದ್ದು, ಈ ಹಿನ್ನೆಲೆಯಲ್ಲಿಯೇ ಅವರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಲು ಬಯಸುವುದಿಲ್ಲ. ಅವರ ಖಾಸಗಿತನವನ್ನು ಗೌರವಿಸುವುದಾದರೆ ಅವರು ಕೃತಜ್ಞರಾಗಿರುತ್ತಾರೆ” ಎಂದು ಹೇಳಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News