Shubman Gill health update : ಡೆಂಗ್ಯೂ ಹಿನ್ನೆಲೆಯಲ್ಲಿ  ಅಸ್ಪತ್ರೆಗೆ ದಾಖಲಾಗಿದ್ದ ಭಾರತ ತಂಡದ  ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರನ್ನು ಆಸ್ಪತ್ರೆಯಿಂದ  ಡಿಸ್ಚಾರ್ಜ್ ಮಾಡಲಾಗಿದೆ. ಡೆಂಗ್ಯೂ ಕಾರಣದಿಂದಾಗಿ  ಶುಭಮನ್ ಗಿಲ್ ಪ್ಲೇಟ್ಲೆಟ್  ಕೌಂಟ್ 1,00,000 ಕ್ಕಿಂತ ಕಡಿಮೆಯಾದ ಕಾರಣ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 


COMMERCIAL BREAK
SCROLL TO CONTINUE READING

ಶುಭ್‌ಮನ್‌ ಅವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಮುಂದಿನ ಎರಡು ಪಂದ್ಯಗಳಿಗೆ ಅಂದರೆ ನಾಳೆ ಅಫ್ಘಾನಿಸ್ತಾನ ವಿರುದ್ದ ನಡೆಯಲಿರುವ ಪಂದ್ಯ ಮತ್ತು ಅಕ್ಟೋಬರ್‌ 14ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಗಿಲ್ ಲಭ್ಯವಿರುವ ಸಾಧ್ಯತೆ ತೀರಾ ಕಡಿಮೆ. ‌ತಜ್ಞರ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ. 


ಇದನ್ನೂ ಓದಿ : ENG vs BAN: ವಿಶ್ವಕಪ್‌ನಲ್ಲಿ ಬಾಂಗ್ಲಾ ವಿರುದ್ಧ ಶತಕ ಬಾರಿಸಿದ ಡೇವಿಡ್ ಮಲನ್...!


ಗಿಲ್ ಆರೋಗ್ಯ ಹೇಗಿದೆ? :
ಗಿಲ್ ಪ್ಲೇಟ್‌ಲೆಟ್  ಕೌಂಟ್  70,000 ಕ್ಕಿಂತ ಕಡಿಮೆಯಾಗಿತ್ತು. ಡೆಂಗ್ಯೂ ಪ್ರಕರಣದಲ್ಲಿ  ಪ್ಲೇಟ್‌ಲೆಟ್  ಕೌಂಟ್ 100,000 ಕ್ಕಿಂತ ಕಡಿಮೆಯಿದ್ದರೆ, ಮುನ್ನೆಚ್ಚರಿಕೆ ಕ್ರಮವಾಗಿ  ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಶುಭಮನ್ ಅವರನ್ನು ಕೂಡಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಬಿಸಿಸಿಐ  ಮೂಲಗಳು ತಿಳಿಸಿವೆ.  


ಒಂದು ವೇಳೆ ಶುಭಮನ್ ಗಿಲ್ ಅಫ್ಘಾನಿಸ್ತಾನ ವಿರುದ್ಧ ಆಡಲು ಸಾಧ್ಯವಾಗದಿದ್ದರೆ ಟೀಂ ಇಂಡಿಯಾಗೆ ದೊಡ್ಡ ಹೊಡೆತ ಬೀಳಲಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ಶುಭಮನ್ ಗಿಲ್ ಮೈದಾನಕ್ಕೆ ಇಳಿಯುತ್ತಾರೆಯೋ ಇಲ್ಲವೋ ಎನ್ನುವುದು ಪ್ರಶ್ನಾರ್ಥಕ ಚಿಹ್ನೆ. ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಮಹತ್ವದ ಪಂದ್ಯ ನಡೆಯಲಿದೆ. 


ಇದನ್ನೂ ಓದಿ : ಟೀಂ ಇಂಡಿಯಾ ಬ್ರೇಕ್ ಮಾಡಿದ 31 ವರ್ಷಗಳಷ್ಟು ಹಳೆಯ ಆಸ್ಟ್ರೇಲಿಯಾ ತಂಡದ ಅಜೇಯ ದಾಖಲೆ ಯಾವುದು ಗೊತ್ತಾ?


ಶಿಖರ್ ಧವನ್ ಅಥವಾ ಯಶಸ್ವಿ ಜೈಸ್ವಾಲ್? :
ಶುಭಮನ್ ಗಿಲ್ ಅವರ ಆರೋಗ್ಯ ಸುಧಾರಿಸದಿದ್ದರೆ ಯಾವ ಆಟಗಾರರಿಗೆ ಅವಕಾಶ ಸಿಗಲಿದೆ ಎನ್ನುವುದು ಪ್ರಶ್ನೆ. ತಂಡದಲ್ಲಿ ಎಡಗೈ ಆಟಗಾರರ ಕೊರತೆ ಇರುವುದರಿಂದ ಶಿಖರ್ ಧವನ್ ಅಥವಾ ಯಶಸ್ವಿ ಜೈಸ್ವಾಲ್‌ಗೆ ಅವಕಾಶ ಸಿಗಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.