Indian Player Hospitalized : ಭಾರತ ತಂಡವು 2023 ರ ವಿಶ್ವಕಪ್ ಯಾನವನ್ನು ಗೆಲುವಿನೊಂದಿಗೆ ಪ್ರಾರಂಭಿಸಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯವನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ತಮ್ಮ ಛಾಪು ಮೂಡಿಸಿದೆ. ಆದರೆ ಅಫ್ಘಾನ್ ತಂಡದ ವಿರುದ್ಧದ ಪಂದ್ಯಕ್ಕೂ ಮುನ್ನವೇ ಭಾರತ ತಂಡ ದೊಡ್ಡ ಹಿನ್ನಡೆಯಾಗಿದೆ. ತಂಡದ ಸ್ಟಾರ್ ಬ್ಯಾಟ್ಸ್ ಮನ್ ಒಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಕ್ಟೋಬರ್ 14 ರಂದು ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಈ ಆಟಗಾರ ಅಲಭ್ಯ ಎಂದೇ ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಸ್ಟಾರ್ ಯಾಟ್ಸ್‌ಮನ್ ಆಸ್ಪತ್ರೆಗೆ ದಾಖಲು : 
2023ರಲ್ಲಿ ಟೀಂ ಇಂಡಿಯಾ ಪರ ನಿರಂತರವಾಗಿ ಮಾರಕ ಬ್ಯಾಟ್ಸ್‌ಮನ್ ಆಗಿದ್ದ ಶುಭ್‌ಮನ್ ಗಿಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ರಿಕ್‌ಬಜ್ ವರದಿ ಪ್ರಕಾರ, ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಶುಭಮನ್ ಗಿಲ್ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಬೆಳಗ್ಗೆ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಿಲ್ ಆರೋಗ್ಯದ ಬಗ್ಗೆ ವೈದ್ಯರೂ ತೀವ್ರ ನಿಗಾ ವಹಿಸಿದ್ದಾರೆ. ತಂಡದೊಂದಿಗೆ ಪ್ರಯಾಣಿಸುತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೈದ್ಯ ಡಾ.ರಿಜ್ವಾನ್ ಖಾನ್ ಕೂಡಾ ಗಿಲ್ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. 


ಇದನ್ನೂ ಓದಿ : "ಬದುಕಿನಲ್ಲಿ ಅತಿಯಾಗಿ ಕಾಡಿದ್ದೇ ಈ ನೋವು" - ಮನದ ಭಾರ ಹೊರಹಾಕಿದ ಕೆ ಎಲ್ ರಾಹುಲ್ !


ಗಿಲ್ ಪ್ಲೇಟ್ಲೆಟ್ ಕುಸಿತ: 
ಕಳೆದ ಕೆಲವು ದಿನಗಳಿಂದ ಶುಭಮನ್ ಗಿಲ್ ಗೆ ಚೆನ್ನೈ ಹೋಟೆಲ್‌ನಲ್ಲಿ ಡ್ರಿಪ್ಸ್ ಇಡಲಾಗಿತ್ತು. ಆದರೆ, ಇದೀಗ ಅವರ ಪ್ಲೇಟ್ಲೆಟ್ ಸಂಖ್ಯೆ 70,000 ಕ್ಕೆ ಇಳಿದಿದೆ. ಡೆಂಗ್ಯು ಸಂದರ್ಭದಲ್ಲಿ ಪ್ಲೇಟ್ಲೆಟ್  ಕೌಂಟ್ 1,00,000 ಕ್ಕಿಂತ ಕಡಿಮೆಯಾದರೆ, ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರ ಮೇಲ್ವಿಚಾರಣೆಯಲ್ಲಿರಬೇಕಾಗುತ್ತದೆ.  ಪ್ಲೇಟ್ಲೆಟ್  ಕೌಂಟ್ 100,000 ಕ್ಕಿಂತ ಹೆಚ್ಚಾದರೆ ಗಿಲ್ ಅನ್ನು ತಕ್ಷಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು  ಪ್ಲೇಟ್ಲೆಟ್  ಕೌಂಟ್ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಬಿಸಿಸಿಐ ಹೇಳಿದ್ದೇನು ?  :
'ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ಅಕ್ಟೋಬರ್ 9, 2023 ರಂದು ತಂಡದೊಂದಿಗೆ ದೆಹಲಿಗೆ ತೆರಳುವುದಿಲ್ಲ ಎಂದು ಸೋಮವಾರ ಬಿಸಿಸಿಐ ಮಾಹಿತಿ ನೀಡಿತ್ತು. ಡೆಂಗ್ಯು ಹಿನ್ನೆಲೆಯಲ್ಲಿ ಐಸಿಸಿ ವಿಶ್ವಕಪ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆದ ತಂಡದ ಮೊದಲ ಪಂದ್ಯದಲ್ಲಿಯೂ  ಗಿಲ್ ತಂಡದಿಂದ ಹೊರಗೆ ಉಳಿದಿದ್ದರು. ಅಫ್ಘಾನಿಸ್ತಾನ ವಿರುದ್ಧದ ತಂಡದ ಮುಂದಿನ ಪಂದ್ಯದಲ್ಲೂ ಗಿಲ್ ಆಡುವುದು ಸಾಧ್ಯವಾಗುವುದಿಲ್ಲ. ಗಿಲ್ ಚೆನ್ನೈನಲ್ಲಿಯೇ ಉಳಿಯಲಿದ್ದು,  ವೈದ್ಯಕೀಯ ತಂದ ಅವರ ಮೇಲ್ವಿಚಾರಣೆ ನಡೆಸಲಿದೆ. 


ಇದನ್ನೂ ಓದಿ : 128 ವರ್ಷಗಳ ನಂತರ ಒಲಿಂಪಿಕ್ಸ್’ಗೆ ಕ್ರಿಕೆಟ್ ಸೇರ್ಪಡೆ! ಐಸಿಸಿಯ 2 ವರ್ಷಗಳ ಪರಿಶ್ರಮಕ್ಕೆ ಸಿಕ್ಕೇಬಿಡ್ತು ಫಲ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.