ಸಂಕಷ್ಟದಲ್ಲಿದೆ ಈ ತಂಡ! ಕೊನೆಯ ಪಂದ್ಯ ಆಡದೆಯೇ ಹೊರಬೀಳುವ ಸಾಧ್ಯತೆ-ಪಾಕ್’ಗೆ ಸಿಗಲಿದೆ ಡೈರೆಕ್ಟ್ ಎಂಟ್ರಿ
World Cup 2023, Semifinal: ಕಿವೀಸ್ ತಂಡವು ತನ್ನ ಕೊನೆಯ ಲೀಗ್ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಗುರುವಾರ ಅಂದರೆ ನಾಳೆ ನವೆಂಬರ್ 9 ರಂದು ಆಡಲಿದೆ. ಮೊದಮೊದಲು ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಬಹುದು ಎಂದು ಕೊಂಡಿದ್ದ ನ್ಯೂಜಿಲೆಂಡ್ ತಂಡ ಇದೀಗ ಟಾಪ್ 4ರಲ್ಲಿ ಸ್ಥಾನಪಡೆಯಲು ಪರದಾಡುವಂತಾಗಿದೆ.
World Cup 2023, Semifinal: ಟೀಂ ಇಂಡಿಯಾ ವಿಶ್ವಕಪ್ 2023ರ ಸೆಮಿಫೈನಲ್’ಗೆ ಪ್ರವೇಶಿಸಿದ ಮೊದಲ ತಂಡವಾಗಿದೆ. ಆ ನಂತರ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಟಾಪ್ 4ರಲ್ಲಿ ಸ್ಥಾನ ಪಡೆದಿದೆ. ಈಗ ಉಳಿದಿರುವುದು ಕೊನೆಯ ಅಂದರೆ 4ನೇ ಸ್ಥಾನ. ಈ ಸ್ಥಾನವನ್ನು ಪಡೆದುಕೊಳ್ಳಲು ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ಕಾದಾಡುತ್ತಿದೆ.
ಇದನ್ನೂ ಓದಿ: “ನಾಚಿಕೆಯಾಗಬೇಕು… ನಾನ್ ಸೆನ್ಸ್”- ಮೊಹಮ್ಮದ್ ಶಮಿ ಶಾಕಿಂಗ್ ಹೇಳಿಕೆ ಕೊಟ್ಟಿದ್ದು ಯಾರಿಗೆ ಗೊತ್ತಾ?
ಕಿವೀಸ್ ತಂಡವು ತನ್ನ ಕೊನೆಯ ಲೀಗ್ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಗುರುವಾರ ಅಂದರೆ ನಾಳೆ ನವೆಂಬರ್ 9 ರಂದು ಆಡಲಿದೆ. ಮೊದಮೊದಲು ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಬಹುದು ಎಂದು ಕೊಂಡಿದ್ದ ನ್ಯೂಜಿಲೆಂಡ್ ತಂಡ ಇದೀಗ ಟಾಪ್ 4ರಲ್ಲಿ ಸ್ಥಾನಪಡೆಯಲು ಪರದಾಡುವಂತಾಗಿದೆ. ಇದಕ್ಕೆ ಕಾರಣ ಕಳೆದ ನಾಲ್ಕು ಪಂದ್ಯಗಳಲ್ಲಿ ಅನುಭವಿಸಿದ ಸತತ ಸೋಲುಗಳು.
ಇನ್ನು ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಗುರುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿ ಹೆಚ್ಚಾಗಿವೆ. ಈ ಪಂದ್ಯದ ವೇಳೆ ಬಹುತೇಕ ಪೂರ್ತಿ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಶೇ.50ರಷ್ಟಿದೆ. ಸ್ಪರ್ಧೆ ನಡೆದರೂ ಮಳೆ ಅಡ್ಡಿಪಡಿಸುವುದು ಖಚಿತ ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಈ ಪಂದ್ಯ ವಾಶ್ ಔಟ್ ಆದರೆ ಕಿವೀಸ್ ತಂಡ ಕೇವಲ 1 ಅಂಕ ಪಡೆದು ತೃಪ್ತಿಪಡಬೇಕಾಗುತ್ತದೆ.
ಸೆಮಿಫೈನಲ್ ಟಿಕೆಟ್ ಕಳೆದುಕೊಳ್ಳುವ ಭೀತಿ:
ಮಳೆ ಬಂದು ಪಂದ್ಯ ವಾಶ್ ಔಟ್ ಆದ್ರೆ ಶ್ರೀಲಂಕಾಗೆ ಯಾವುದೇ ನಷ್ಟ ಇಲ್ಲ. ಆದರೆ ನ್ಯೂಜಿಲೆಂಡ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡದೆಯೇ ಸೆಮಿಫೈನಲ್’ನಿಂದ ಹೊರಗುಳಿಯಬಹುದು. ಹೀಗಿರುವಾಗ ಸೆಮಿಫೈನಲ್’ಗೆ ಪಾಕಿಸ್ತಾನ ಲಗ್ಗೆ ಇಡುವ ಸಾಧ್ಯತೆ ಇದೆ. ಆದರೆ ಇಲ್ಲಿ ಅಂಕಪಟ್ಟಿಯಲ್ಲಿ 10 ಅಂಕಗಳನ್ನು ಹೊಂದಿರುವವರು ಮತ್ತು ಇತರ ಇಬ್ಬರಿಗಿಂತ (ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ) ಉತ್ತಮ ನೆಟ್ ರನ್ ರೇಟ್ ಹೊಂದಿರುವವರು ಸೆಮಿಫೈನಲ್’ಗೆ ಟಿಕೆಟ್ ಪಡೆಯಲು ಸಾಧ್ಯವಾಗುತ್ತದೆ. ಆದರೆ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಕೇವಲ ಒಂದು ಅಂಕ ಪಡೆದರೆ ಅದು ಔಟಾಗಲಿದೆ. ಅಂದರೆ ಕಿವೀಸ್ ತಂಡ ಈ ಪಂದ್ಯವನ್ನು ಹೇಗಾದರೂ ಗೆಲ್ಲಲೇಬೇಕು.
ಇದನ್ನೂ ಓದಿ: ಭಾರತದ ಜೊತೆ ಸೆಮಿಫೈನಲ್ ನಲ್ಲಿ ಸೆಣೆಸುವುದು ಇದೇ ತಂಡ ! ಟೀಂ ಇಂಡಿಯಾ ಮಾಜಿ ನಾಯಕನ ಭವಿಷ್ಯ
ಒಂದು ವೇಳೆ ನ್ಯೂಜಿಲೆಂಡ್ ಪಂದ್ಯವನ್ನಾಡದೆ ಟೂರ್ನಿಯಿಂದ ಹೊರಗುಳಿಯಬೇಕಾಗಬಹುದು. ಈ ವೇಳೆ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನವು ಸೆಮಿಫೈನಲ್’ಗೆ ಟಿಕೆಟ್ ಪಡೆಯುವ ಅವಕಾಶವನ್ನು ಹೊಂದಿರುತ್ತದೆ. ಪಾಕಿಸ್ತಾನ ತನ್ನ ಕೊನೆಯ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಲಿದ್ದು, ಈಗಾಗಲೇ ಕಂಡಿರುವ ಆಟದ ಆಧಾರದ ಮೇಲೆ ಬಾಬರ್ ಸೈನ್ಯಕ್ಕೆ ಸುಲಭವಾಗಿ ಜಯ ಸಿಗಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ