Rahul-Kohli Biggest Partnership: ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ನ 5ನೇ ಪಂದ್ಯದಲ್ಲಿ ಭಾರತದ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ಅತಿ ದೊಡ್ಡ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಒಂದಲ್ಲ, ಎರಡಲ್ಲ ಹಲವು ಅದ್ಭುತ ದಾಖಲೆಗಳನ್ನು ಮುರಿದಿದ್ದಾರೆ. ಈ ಮೂಲಕ ಕೊಹ್ಲಿ ಏಷ್ಯಾದ ನಂಬರ್-1ಬ್ಯಾಟ್ಸ್‌ಮನ್ ಸ್ಥಾನಕ್ಕೆ ಏರಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ದೊಡ್ಡ ದಾಖಲೆಯನ್ನು  ಕೂಡಾ ಕೊಹ್ಲಿ ಬದಿಗಟ್ಟಿದ್ದಾರೆ.  


COMMERCIAL BREAK
SCROLL TO CONTINUE READING

ವಿರಾಟ್ ಕೊಹ್ಲಿ ಏಷ್ಯಾದ ನಂಬರ್ 1 ಬ್ಯಾಟ್ಸ್‌ಮನ್ : 
ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 116 ಎಸೆತಗಳನ್ನು ಎದುರಿಸಿ 85 ರನ್‌ಗಳನ್ನು ಬಾರಿಸಿದ್ದಾರೆ. 6 ಬೌಂಡರಿಗಳ ನೆರವಿನಿಂದ ಕೊಹ್ಲಿ ಈ ರನ್ ಗಳಿಸುವುದು ಸಾಧ್ಯವಾಯಿತು. ಈ ರನ್‌ಗಳೊಂದಿಗೆ, ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಹೆಸರನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿಗೆ ಸೇರಿಸಿದ್ದಾರೆ. ಕೊಹ್ಲಿ ಇದೀಗ ಏಷ್ಯಾದಲ್ಲೇ ಅತಿ ವೇಗವಾಗಿ 15,000 ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 


ಇದನ್ನೂ ಓದಿ : World cup 2023 : ಮೊದಲ ಗೆಲುವಿನ ನಂತರ ತಂಡಕ್ಕೆ ದೊಡ್ಡ ಆಘಾತ! ಈ ಮ್ಯಾಚ್ ವಿನ್ನರ್ ಮುಂದಿನ ಪಂದ್ಯದಿಂದ ಔಟ್


ರಾಹುಲ್ ಜೊತೆಗೂಡಿ ಈ ದಾಖಲೆ :
ಏಷ್ಯಾದಲ್ಲಿ ನಂಬರ್-1 ಆಗುವುದರೊಂದಿಗೆ ರಾಹುಲ್ ಜೊತೆಗೆ ಕೊಹ್ಲಿ ಮತ್ತೊಂದು ದೊಡ್ಡ ದಾಖಲೆಯನ್ನೂ ಮಾಡಿದ್ದಾರೆ. ವಾಸ್ತವವಾಗಿ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮತ್ತು ರಾಹುಲ್ ಜೋಡಿ ನಾಲ್ಕನೇ ವಿಕೆಟ್‌ಗೆ 165 ರನ್‌ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟ ನೀಡಿತ್ತು. ಇದರೊಂದಿಗೆ ಈ ಜೋಡಿ ವಿಶ್ವಕಪ್ ಇತಿಹಾಸದಲ್ಲಿ ಅತಿ ದೊಡ್ಡ ಜೊತೆಯಾಟದ ಜೋಡಿ ಎನಿಸಿಕೊಂಡಿದೆ.  


 ಈ ದಿಗ್ಗಜ್ಜರನ್ನು ಹಿಂದಿಕ್ಕಿ ಹೊಸ ದಾಖಲೆ : 
165 ರನ್‌ಗಳ ಜೊತೆಯಾಟದಲ್ಲಿ ಕೊಹ್ಲಿ-ರಾಹುಲ್ ಅಜಯ್ ಜಡೇಜಾ ಮತ್ತು ರಾಬಿನ್ ಸಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ. ಜಡೇಜಾ-ರಾಬಿನ್ ಜೋಡಿ 1999ರಲ್ಲಿ 141 ರನ್‌ಗಳ ಜೊತೆಯಾಟ ನೀಡಿದ್ದರೆ, 2019ರಲ್ಲಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ 127 ರನ್  ಬಾರಿಸಿದ್ದರು. ಆದರೆ ನಿನ್ನೆಯ ಪಂದ್ಯದಲ್ಲಿ ನಾಲ್ಕನೇ ವಿಕೆಟ್‌ಗೆ ರಾಹುಲ್-ಕೊಹ್ಲಿ ನೀಡಿದ ಜೊತೆಯಾಟವು ವಿಶ್ವಕಪ್‌ನಲ್ಲಿ ಎರಡನೇ ಅತಿದೊಡ್ಡ ಜೊತೆಯಾಟವಾಗಿದೆ. 2015 ರಲ್ಲಿ ಆಕ್ಲೆಂಡ್‌ನಲ್ಲಿ ಜಿಂಬಾಬ್ವೆ ವಿರುದ್ಧ ಅಜೇಯ 196 ರನ್‌ಗಳನ್ನು ಸೇರಿಸಿದ್ದ ಧೋನಿ ಮತ್ತು ರೈನಾ ಜೋಡಿ, ಜೊತೆಯಾಟದಲ್ಲಿ ಮೊದಲ ಸ್ಥಾನದಲ್ಲಿದೆ.


ಇದನ್ನೂ ಓದಿ : ಗೆದ್ದರೂ ಕಳಪೆ ದಾಖಲೆ ಬರೆದ ಭಾರತ: ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಮಾಡಿರದ ಕೆಟ್ಟ ರೆಕಾರ್ಡ್ ಇದು…!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.