Wrestler Mruder Case: ಪರಾರಿಯಾದ ಪೈಲ್ವಾನ್ ಸುಶೀಲ್ ಕುಮಾರ್ ವಿರುದ್ಧ ದೆಹಲಿ ಪೋಲೀಸರ Lookout Notice
Wrestler Murder Case : ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಜಗಳದ ಬಳಿಕ ನಡೆದ ಓರ್ವ ಪೈಲ್ವಾನ್ ಹತ್ಯೆಯ ಬಳಿಕ ಪರಾರಿಯಾಗಿರುವ ಒಲಂಪಿಕ್ ಪದಕ ವಿಜೇತ (Olympic Medalist) ಪೈಲ್ವಾನ್ ಸುಶೀಲ್ ಕುಮಾರ್ (Wrestler Sushil Kumar) ವಿರುದ್ಧ ಲುಕ್ ಔಟ್ ನೋಟೀಸ್ ಜಾರಿಗೊಳಿಸಿದೆ.
Wrestler Murder Case : ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಜಗಳದ ಬಳಿಕ ನಡೆದ ಓರ್ವ ಪೈಲ್ವಾನ್ ಹತ್ಯೆಯ ಬಳಿಕ ಪರಾರಿಯಾಗಿರುವ ಒಲಂಪಿಕ್ ಪದಕ ವಿಜೇತ (Olympic Medalist) ಪೈಲ್ವಾನ್ ಸುಶೀಲ್ ಕುಮಾರ್ (Wrestler Sushil Kumar) ವಿರುದ್ಧ ಲುಕ್ ಔಟ್ ನೋಟೀಸ್ ಜಾರಿಗೊಳಿಸಿದೆ. ಸೋಮವಾರ ಈ ಕುರಿತು ಮಾಹಿತಿ ನೀಡಿರುವ ದೆಹಲಿ ಪೊಲೀಸ್ (Delhi Police) ನ ಹಿರಿಯ ಅಧಿಕಾರಿಯೊಬ್ಬರು, ಭಾನುವಾರ ಸಂಜೆಯ ಹೊತ್ತಿನಲ್ಲಿ ಈ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಜಗಳದಿಂದ ಸಂತ್ರಸ್ಥಗೊಂಡ ವ್ಯಕ್ತಿಯ ಹೇಳಿಕೆಯನ್ನು ಪೊಲೀಸರು ಈಗಾಗಲೇ ದಾಖಲಿಸಿಕೊಂಡಿದ್ದಾರೆ. ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿರುವ ಒಂದು ಫ್ಲಾಟ್ ಅನ್ನು ಖಾಲಿ ಮಾಡಿಸುವುದಕ್ಕೆ ಸಂಬಂಧಿದಂತೆ ಈ ಜಗಳ ನಡೆದಿತ್ತು ಎಂದು ಅವರು ಹೇಳಿದ್ದಾರೆ.
ಈ ವ್ಯಾಜ್ಯದಲ್ಲಿ ಈಗಾಗಲೇ ಸುಶೀಲ್ ಕುಮಾರ್ ವಿರುದ್ಧ ಈಗಾಗಲೇ FIR ದಾಖಲಿಸಲಾಗಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಯೋಬ್ಬರು ಮಾಹಿತಿ ನೀಡಿದ್ದು, ಸದ್ಯ ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದಿದ್ದಾರೆ. ಸುಶೀಲ್ ಕುಮಾರ್ ಅವರನ್ನು ಬಂಧಿಸಲು ದೆಹಲಿ-NCR ಸೇರಿದಂತೆ ಅಕ್ಕಪಕ್ಕದ ಪ್ರದೇಶಗಳಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಜಗಳದ ಸಂದರ್ಭದಲ್ಲಿ ದಾಳಿ ನಡೆದಾಗ ಆ ಸ್ಥಳದಲ್ಲಿ ಸುಶಿಲ್ ಕುಮಾರ್ ಉಪಸ್ಥಿತರಿದ್ದರು ಎಂದು ಸಂತ್ರಸ್ಥ ವ್ಯಕ್ತಿ ಆರೋಪಿಸಿದ್ದಾರೆ.
ಇದನ್ನೂ ಓದಿ- ಕರೋನಾ ಲಸಿಕೆ ಹಾಕಿಸಿಕೊಂಡ ವಿರಾಟ್ ಕೊಹ್ಲಿ; ಅಭಿಮಾನಿಗಳೊಂದಿಗೆ ಫೋಟೋ ಶೇರ್ ಮಾಡಿಕೊಂಡ ಆಟಗಾರ
ಕಳೆದ ಮಂಗಳವಾರ ರಾತ್ರಿ ಛತ್ರಸಾಲ್ ಸ್ಟೇಡಿಯಂನಲ್ಲಿ ನಡೆದ ವ್ಯಾಜ್ಯದಲ್ಲಿ 23 ವರ್ಷ ವಯಸ್ಸಿನ ಪೈಲ್ವಾನ್ ಮೃತಪಟ್ಟಿದ್ದರು. ಸ್ಟೇಡಿಯಂನಲ್ಲಿ ಅವರ ಮೇಲೆ ಹಾಗೂ ಅವರಿಬ್ಬರೂ ಸಹಪಾಟಿಗಳ ಮೇಲೆ ಸ್ಟೇಡಿಯಂನಲ್ಲಿ ಉಪಸ್ಥಿತರಿದ್ದ ಇತರ ಪೈಲ್ವಾನ್ ಗಳು ದಾಳಿ ನಡೆಸಿದ್ದರು. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ವ್ಯಾಜ್ಯದಲ್ಲಿ ಸುಶೀಲ್ ಕುಮಾರ್, ಅಜಯ್, ಪ್ರಿನ್ಸ್ ದಲಾಲ್, ಸೋನು, ಸಾಗರ್ ಅಮಿತ ಹಾಗೂ ಇತರರು ಶಾಮೀಲಾಗಿದ್ದರು ಎನ್ನಲಾಗಿದೆ. ಮಾಡೆಲ್ ಟೌನ್ ಠಾಣೆಯಲ್ಲಿ IPC ಹಾಗೂ ಶಸ್ತ್ರಾಸ್ತ್ರ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಹರ್ಯಾಣದ ಝಜ್ಜರ್ ನಿವಾಸಿಯಾಗಿರುವ ದಲಾಲ್ (24)ನನ್ನು ಈಗಾಗಲೇ ಬಂಧಿಸಲಾಗಿದೆ.
ಇದನ್ನೂ ಓದಿ- ವಿರುಷ್ಕಾ Ketto campaign ಗೆ ಸಿಗುತ್ತಿದೆ ಭಾರೀ ಸ್ಪಂದನೆ ; 24 ಗಂಟೆಯಲ್ಲಿ 3.6 ಕೋಟಿ ಸಂಗ್ರಹ
ಏನಿದು ಲುಕ್ ಔಟ್ ನೋಟಿಸ್ ?
ಯಾವುದೇ ಒಂದು ಅಪರಾಧದಲ್ಲಿ ಉಲ್ಲೇಖಿತ ಗೊಂಡ ವ್ಯಕ್ತಿಯನ್ನು ಪ್ರಶ್ನಿಸಲು ತನಿಖಾ ಸಂಸ್ಥೆ ಕರೆದಾಗ, ಆ ವ್ಯಕ್ತಿಯು ಆ ತನಿಖಾ ಸಂಸ್ಥೆಯೊಂದಿಗೆ ಸಹಕರಿಸದಿದ್ದರೆ ಮತ್ತು ಅವನು ರಹಸ್ಯ ಸ್ಥಳದಲ್ಲಿ ಅಡಗಿಕೊಳ್ಳಲು ಪ್ರಯತ್ನಿಸಿದರೆ, ಅವನ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಗೊಳಿಸಲಾಗುತ್ತದೆ. ಲುಕ್ ಔಟ್ ನೋಟಿಸ್ ಆ ವ್ಯಕ್ತಿಯನ್ನು ದೇಶದಿಂದ ಪಲಾಯನಗೈಯದಂತೆ ತಡೆಯುತ್ತದೆ. ಈ ಸೂಚನೆಯ ಆಧಾರದ ಮೇಲೆ, ವ್ಯಕ್ತಿಯು ಜಲಮಾರ್ಗಗಳು ಮತ್ತು ವಾಯುಮಾರ್ಗಗಳಲ್ಲಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ಈ ಸೂಚನೆಯ ಆಧಾರದ ಮೇಲೆ, ತನಿಖಾ ಸಂಸ್ಥೆ ತನಿಖೆಯನ್ನು ಇನ್ನಷ್ಟು ತೀವ್ರವಾಗಿ ಮತ್ತು ಸಕ್ರಿಯವಾಗಿ ನಡೆಸುತ್ತದೆ.
ಇದನ್ನೂ ಓದಿ-ಉಳಿದಿರುವ ಐಪಿಎಲ್ ಪಂದ್ಯಗಳನ್ನು ನಡೆಸಲು ಸಿದ್ದವೆಂದ ಶ್ರೀಲಂಕಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.