Scam Alert : ಎಚ್ಚರ! WhatsApp ನಲ್ಲಿ ಬರುವ ಈ ಲಿಂಕ್‌ ಕ್ಲಿಕ್ ಮಾಡಬೇಡಿ ಪೊಲೀಸರಿಂದ ಎಚ್ಚರಿಕೆ!

ಅಮೆಜಾನ್ ಪ್ರೈಮ್ ವಿಡಿಯೋ ಅಥವಾ ನೆಟ್‌ಫ್ಲಿಕ್ಸ್‌ನಂತಹ ವೀಡಿಯೊ ಸ್ಟ್ರೀಮಿಂಗ್ ಸೇವೆಗಳಿಗೆ ಉಚಿತ ಎಂಟ್ರಿ ನೀಡುವ ದುರುದ್ದೇಶಪೂರಿತ ಲಿಂಕ್‌

Last Updated : Apr 24, 2021, 11:41 AM IST
  • ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲು ಆನ್ ಲೈನ್ ಖದೀಮರು ಹೊಸ ಮಾರ್ಗ
  • ಅಮೆಜಾನ್ ಪ್ರೈಮ್ ವಿಡಿಯೋ ಅಥವಾ ನೆಟ್‌ಫ್ಲಿಕ್ಸ್‌ನಂತಹ ವೀಡಿಯೊ ಸ್ಟ್ರೀಮಿಂಗ್ ಸೇವೆಗಳಿಗೆ ಉಚಿತ ಎಂಟ್ರಿ ನೀಡುವ ದುರುದ್ದೇಶಪೂರಿತ ಲಿಂಕ್‌
  • ನಿಮ್ಮ ವಾಟ್ಸಾಪ್‌ನಲ್ಲಿ ನೀವು ಇದೇ ರೀತಿಯ ಮೆಸೇಜ್ ಲಿಂಕ್ ಗಳು ಬಂದಿರುತ್ತವೆ,
Scam Alert : ಎಚ್ಚರ! WhatsApp ನಲ್ಲಿ ಬರುವ ಈ ಲಿಂಕ್‌ ಕ್ಲಿಕ್ ಮಾಡಬೇಡಿ ಪೊಲೀಸರಿಂದ ಎಚ್ಚರಿಕೆ! title=

ನವದೆಹಲಿ: ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲು ಆನ್ ಲೈನ್ ಖದೀಮರು ಹೊಸ ಮಾರ್ಗಗಳನ್ನ ಹುಡುಕಿದ್ದಾರೆ. ಈ ಖದೀಮರು ಈಗ ಅಮೆಜಾನ್ ಪ್ರೈಮ್ ವಿಡಿಯೋ(Amazon Prime Video) ಅಥವಾ ನೆಟ್‌ಫ್ಲಿಕ್ಸ್‌(Netflix) ನಂತಹ ವೀಡಿಯೊ ಸ್ಟ್ರೀಮಿಂಗ್ ಸೇವೆಗಳಿಗೆ ಉಚಿತ ಎಂಟ್ರಿ ನೀಡುವ ದುರುದ್ದೇಶಪೂರಿತ ಲಿಂಕ್‌ಗಳನ್ನು ಕಳುಹಿಸುತ್ತಿದ್ದಾರೆ.

ನಿಮ್ಮ ವಾಟ್ಸಾಪ್‌(WhatsApp)ನಲ್ಲಿ ನೀವು ಇದೇ ರೀತಿಯ ಮೆಸೇಜ್ ಲಿಂಕ್ ಗಳು ಬಂದಿರುತ್ತವೆ, ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ನಿಮ್ಮ ವೈಯಕ್ತಿಕ ಡೇಟಾವನ್ನು ಖದೀಮರ ಕೈ ಸೇರುತ್ತದೆ ಎಚ್ಚರ. ಖದೀಮರು ಸಧ್ಯ ಈ ಮಾರ್ಗದ ಮೂಲಕ ನಿಮ್ಮ ಬ್ಯಾಂಕಿಂಗ್ ವಿವರಗಳನ್ನು ಸಹ ಕದಿಯಬಹುದು.

ಇದನ್ನೂ ಓದಿ : Xiaomi ಯಿಂದ Mi 11 Ultra ಫೋನ್ ಲಾಂಚ್, ಇದರಲ್ಲಿದೆ ಅತಿ ದೊಡ್ಡ ಕ್ಯಾಮೆರಾ ಸೆನ್ಸಾರ್

ಈ ಕುರಿತು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ದೆಹಲಿ ಪೊಲೀಸ್ ಸೈಬರ್ ಕ್ರೈಮ್(Delhi Police Cybercrime) ಒಂದು ಎಚ್ಚರಿಕೆಯ ಪೋಸ್ಟ್ ಮಾಡಿದೆ, ಈ ರೀತಿಯ ಅಂತಹ ಯಾವುದೇ ಲಿಂಕ್‌ಗಳನ್ನ ಕ್ಲಿಕ್ ಮಾಡಬೇಡಿ ಮತ್ತು ನಿಮ್ಮ ಸ್ನೇಹಿತರು, ಕುಟುಂಬದ ಸದಸ್ಯರಿಗೆ ಬೇರೆಯರಿಗೂ ಶೇರ್ ಅಥವಾ ಫಾರ್ವರ್ಡ್ ಮಾಡದಂತೆ ಎಚ್ಚರಿಕೆ ನೀಡಿ ಎಂದು ಕಾನೂನು ಜಾರಿ ಸಂಸ್ಥೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದೆ. ಈ ರೀತಿಯ ಬಹು ಆಂಟಿವೈರಸ್ ಎಂಜಿನ್‌ಗಳು ಈಗಾಗಲೇ ಲಿಂಕ್‌ಗಳನ್ನು ಪತ್ತೆ ಹಚ್ಚಿ ಅವುಗಳನ್ನ ಬಂದ್ ಮಾಡಲಾಗಿದೆ.

ಇದನ್ನೂ ಓದಿ : Realme 8 5G Price in India: ಕೈಗೆಟಕುವ ದರದಲ್ಲಿ 5G ಸ್ಮಾರ್ಟ್‌ಫೋನ್‌ ಬಿಡುಗಡೆ, ಅದರ ವೈಶಿಷ್ಟ್ಯ ತಿಳಿಯಿರಿ

“ಈ ಮೆಸೇಜ್ ಗಳು URL / ಲಿಂಕ್‌ಗಳಿವೆ, ಇವುಗಳನ್ನು ಬಹು ಆಂಟಿವೈರಸ್ ಎಂಜಿನ್‌ ಫ್ಲ್ಯಾಗ್(Multiple Antivirus Engines) ಮಾಡಲಾಗಿದೆ. ಲಿಂಕ್‌ಗಳನ್ನು ನಿರ್ಬಂಧಿಸಲಾಗಿದೆ ಎಚ್ಚರಿಕೆ ಈ ರೀತಿಯ ಲಿಂಕ್‌ಗಳನ್ನು  ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ. ಯಾರಿಗೂ ಎಂದಿಗೂ ಫಾರ್ವರ್ಡ್ ಮಾಡಬೇಡಿ ”ಎಂದು ಡಿಸಿಪಿ ಸೈಬರ್‌ಸೈಮ್‌ನ ಟ್ವೀಟ್ ನಲ್ಲಿ ಬರೆದಿದ್ದರೆ.

ಇದನ್ನೂ ಓದಿ : Google Chrome:ಕಡಿಮೆ ಡೇಟಾದೊಂದಿಗೆ ಪಡೆಯಿರಿ ಈ ಎಲ್ಲಾ ಲಾಭ

ದೆಹಲಿ ಪೊಲೀಸರು(Delhi Police) ಈ ಕುರಿತು ವಾಟ್ಸಾಪ್ ನಲ್ಲಿ ಬಂದಿರುವ ಈ ಖದೀಮರ ಹೊಸ ಮಾರ್ಗದ ಲಿಂಕ್ ಗಳ  ಸ್ಕ್ರೀನ್ ಶಾಟ್ ಗಳನ್ನ  ಹಂಚಿಕೊಂಡಿದ್ದಾರೆ. ಲಿಂಕ್ ನಲ್ಲಿ  “60 ದಿನಗಳವರೆಗೆ ವಿಶ್ವದ ಎಲ್ಲಿಯಾದರೂ 2 ತಿಂಗಳ ಅಮೆಜಾನ್ ಪ್ರೀಮಿಯಂ ಉಚಿತ ಪಡೆಯಿರಿ. http://profilelist.xyz/?livestream ”ಅಂತಹ ಒಂದು ಸಂದೇಶವನ್ನು  ಕೂಡ ನೀಡಿದ್ದಾರೆ. 

ಇದನ್ನೂ ಓದಿ : Govt Giving Free Recharge ! ಸರ್ಕಾರ 10 ಕೋಟಿ ಗ್ರಾಹಕರಿಗೆ ಉಚಿತ ರಿಚಾರ್ಜ್ ನೀಡುತ್ತಿದೆ! ನಿಮಗೂ ಈ SMS ಬಂದಿದೆಯೇ?

ಇದು ಆನ್ಲೈನ್ ಖದೀಮರ ಕೆಲಸ ಎಂಬುವುದನ್ನು ನೀವು ತುಂಬಾ ಸರಳವಾಗಿ ಪತ್ತೆ ಹಚ್ಚಬಹುದು. ನಿಮಗೆ ಬಂದಿರುವ ಮೆಸೇಜ್ ನಲ್ಲಿ  ‘ಅಮೆಜಾನ್ ಪ್ರೈಮ್’(Amazon Prime) ಬದಲಿಗೆ ‘ಅಮೆಜಾನ್ ಪ್ರೀಮಿಯಂ’(Amazon Premium) ಎಂದು ಬರೆಯಲಾಗಿದೆ.

ಇದನ್ನೂ ಓದಿ : OLA Electric Scooter : ಜನರ ಮನಗೆದ್ದ 'OLA ಎಲೆಕ್ಟ್ರಿಕ್ ಸ್ಕೂಟರ್' : ಜುಲೈನಲ್ಲಿ ಮಾರಕಟ್ಟೆಗೆ!

ಅಲ್ಲದೆ, ನೀವು ಈ ಲಿಂಕ್ URL ನ ‘ಪ್ರೊಫೈಲ್ ಲಿಸ್ಟ್’(Profilelist) ಅನ್ನು ನೋಡಿದರೆ, ಈ ಲಿಂಕ್ ಆನ್ ಲೈನ್ ಖದೀಮರ ಕೆಲಸ ಎಂಬುವುದು ಗೊತ್ತಾಗುತ್ತದೆ.. ಗ್ಯಾಜೆಟ್ಸ್ ನೌ ವರದಿಯ ಪ್ರಕಾರ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳಂತಹ ನಿಮ್ಮ ಹಣಕಾಸಿನ ವಿವರಗಳನ್ನು ಒಳಗೊಂಡಂತೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲು ಈ ಖದೀಮರು ಪ್ರಯತ್ನಿಸುತ್ತಾರೆ ಎಚ್ಚರ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News