ಸಚಿನ್ ತೆಂಡೂಲ್ಕರ್ ಪುತ್ರನಿಗೆ `ಕಲ್ಲಿದ್ದಲು` ಎಂದ ಯುವಿ ತಂದೆ ಯೋಗರಾಜ್!
Yograj Singh On Arjun Tendulkar: ಯೋಗರಾಜ್ ಸಿಂಗ್ರ ಬಳಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಸ್ವಲ್ಪ ಸಮಯದವರೆಗೆ ತರಬೇತಿ ಪಡೆದುಕೊಂಡಿದ್ದರು. ಸಚಿನ್ ಪುತ್ರನ ಕ್ರಿಕೆಟ್ ಕರಿಯರ್ ಬಗ್ಗೆ ಕೇಳಿದ ಪ್ರಶ್ನೆಗೆ ಯೋಗರಾಜ್ ಈ ರೀತಿ ಹೇಳಿದ್ದಾರೆ.
Yograj Singh On Arjun Tendulkar: ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಆಗಾಗ ಸುದ್ದಿಯಾಗುವ ಟೀಂ ಇಂಡಿಯಾದ ಆಲ್ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್, ಇದೀಗ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಸಂದರ್ಶನವೊಂದರಲ್ಲಿ ಅರ್ಜುನ್ ತೆಂಡೂಲ್ಕರ್ ನಿಮ್ಮ ಬಳಿ ತರಬೇತಿಗೆ ಬಂದಿದ್ದರು. ಅವರ ಭವಿಷ್ಯದ ಬಗ್ಗೆ ಏನು ಹೇಳುತ್ತೀರಿ? ಅಂತಾ ಯೋಗರಾಜ್ ಸಿಂಗ್‌ಗೆ ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿರುವ ಅವರು, ʼನೀವು ಕಲ್ಲಿದ್ದಲು ಗಣಿಯಲ್ಲಿ ವಜ್ರವನ್ನು ನೋಡಿದ್ದೀರಾ? ಅವನು ಅಂದರೆ ಅರ್ಜುನ್ ಕೇವಲ ಕಲ್ಲಿದ್ದಲು. ನೀವು ಅದನ್ನು ಕಲ್ಲಿದ್ದಲು ಗಣಿಯಿಂದ ಹೊರತೆಗೆದರೆ ಅದು ಕೇವಲ ಕಲ್ಲು. ಅದನ್ನು ಶಿಲ್ಪಿಯ ಕೈಗೆ ಕೊಟ್ಟರೆ ಬೆಲೆ ಕಟ್ಟಲಾಗದ ಕೋಹಿನೂರಾಗುತ್ತದೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜಯ್ ಶಾ ಐಸಿಸಿ ಅಧ್ಯಕ್ಷರಾದ ಬೆನ್ನಲ್ಲೇ ಈ ನಗರದಲ್ಲಿ ಬ್ಯಾನ್ ಆಯ್ತು ಕ್ರಿಕೆಟ್! ಬ್ಯಾಟ್ ಹಿಡಿದ್ರೆ ಬೀಳುತ್ತೆ ಫೈನ್!!
ಇಡೀ ವಿಶ್ವದಲ್ಲೇ ಟಿ20 ಸ್ವರೂಪದಲ್ಲಿ ದ್ವಿಶತಕ ಬಾರಿಸುವ ಸಾಮಾರ್ಥ್ಯ ಇರೋದು ಈ ಇಬ್ಬರಿಗೆ ಮಾತ್ರ! ಅವರಲ್ಲಿ ಒಬ್ಬ ಟೀಂ ಇಂಡಿಯಾದ ಸ್ಟಾರ್...
ಕೆಲ ದಿನಗಳ ಹಿಂದೆ ಯೋಗರಾಜ್ ಸಿಂಗ್, ಭಾರತೀಯ ದಂತಕಥೆಗಳಾದ ಕಪಿಲ್ ದೇವ್ ಮತ್ತು ಎಂ.ಎಸ್.ಧೋನಿ ಬಗ್ಗೆ ಹೇಳಿಕೆ ನೀಡಿ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದರು. ಯುವರಾಜ್ ಸಿಂಗ್ ಅವರ ವೃತ್ತಿಜೀವನದ ಅಂತ್ಯದ ಹಿಂದೆ ಧೋನಿ ಇದ್ದಾರೆಂದು ಅವರು ಆರೋಪಿಸಿದ್ದರು. ಇದನ್ನು ನಾನು ಧೋನಿಗೆ ನೇರವಾಗಿಯೇ ಹೇಳಿದ್ದೇನೆ. ನಾನು ಎಂದಿಗೂ ಅವನನ್ನು ಕ್ಷಮಿಸುವುದಿಲ್ಲವೆಂದು ಯೋಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದರು.
ಇದಲ್ಲದೆ ಕಪಿಲ್ ದೇವ್ ಕುರಿತು ಮಾತನಾಡಿ, ʼನನ್ನ ಮಗ ಯುವರಾಜ್ ಸಿಂಗ್ ಒಟ್ಟು 13 ಟ್ರೋಫಿಗಳನ್ನು ಗೆದ್ದಿದ್ದಾರೆ. ಆದರೆ ನಮ್ಮ ಕಾಲದ ಶ್ರೇಷ್ಠ ನಾಯಕ ಕಪಿಲ್ ದೇವ್ ಕೇವಲ ಒಂದೇ ಒಂದು ಟ್ರೋಫಿ ಗೆದ್ದಿದ್ದಾರೆ. 1983ರಲ್ಲಿ ಭಾರತ ಗೆದ್ದ ಮೊದಲ ವಿಶ್ವಕಪ್ನ ಟ್ರೋಫಿ ಗೆದ್ದಿದ್ದಷ್ಟೇ ಅವರ ಸಾಧನೆʼ ಅಂತಾ ಟೀಕಿಸಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.