Yuzvendra Chahal : ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರನ್ನು ಅಕ್ಟೋಬರ್ 5 ರಿಂದ ಪ್ರಾರಂಭವಾಗುವ ODI ವಿಶ್ವಕಪ್-2023 ರ ತಂಡದಲ್ಲಿ ಸೇರ್ಪಡೆ ಮಾಡಿಲ್ಲ. ಭಾರತ ತಂಡದಲ್ಲಿ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಇದ್ದಾರೆ. ಇವರಲ್ಲದೆ ಕುಲದೀಪ್ ಯಾದವ್ ಕೂಡ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಬಗ್ಗೆ ಚಹಾಲ್ ಪ್ರತಿಕ್ರಿಯಿಸಿದ್ದಾರೆ. ಈಗ ತಂಡದಿಂದ ಕೈಬಿಡುವುದು ಅಭ್ಯಾಸವಾಗಿ ಹೋಗಿದೆ ಎಂದರು.


COMMERCIAL BREAK
SCROLL TO CONTINUE READING

ಯುಜ್ವೇಂದ್ರ ಚಹಾಲ್ ಏಕದಿನ ವಿಶ್ವಕಪ್‌ಗೆ ಆಯ್ಕೆಯಾದ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅವರಿಗೆ 2021ರ ಟಿ20 ವಿಶ್ವಕಪ್ ಕೂಡ ಆಡಲು ಸಾಧ್ಯವಾಗಲಿಲ್ಲ. ಅವರು 2022 ರಲ್ಲಿ ತಂಡದಲ್ಲಿ ಅವಕಾಶ ಪಡೆದರು ಆದರೆ ಪ್ಲೇಯಿಂಗ್ -11 ರ ಭಾಗವಾಗಲು ಸಾಧ್ಯವಾಗಲಿಲ್ಲ. ಇದು ಸತತ ಮೂರನೇ ಐಸಿಸಿ ಟೂರ್ನಿಯಾಗಿದ್ದು, ಚಹಾಲ್ ಗೆ ಆಡಲು ಸಾಧ್ಯವಾಗುತ್ತಿಲ್ಲ. ಇದೀಗ ಚಹಾಲ್ ವಿಶ್ವಕಪ್ ಗೆ ಕಡೆಗಣಿಸಿರುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ : ವಿಶ್ವಕಪ್’ಗೂ ಮುನ್ನ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ 33ರ ಹರೆಯದ ಸ್ಟಾರ್ ವಿಕೆಟ್ ಕೀಪರ್! 


ಈಗ ಅದು ಅಭ್ಯಾಸವಾಗಿದೆ. ಇದು ಜೀವನದ ಒಂದು ಭಾಗವಾಗಿಬಿಟ್ಟಿದೆ. ಇದು ವಿಶ್ವಕಪ್ ಮತ್ತು ಕೇವಲ 15 ಆಟಗಾರರು ಮಾತ್ರ ತಂಡದ ಭಾಗವಾಗಿರಬಹುದು ಎಂದು ನಾನು ಅರ್ಥಮಾಡಿಕೊಳ್ಳಬಲ್ಲೆ. ನೀವು 17-18 ಆಟಗಾರರನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನನಗೂ ಕೆಟ್ಟ ಭಾವನೆ ಇದೆ ಆದರೆ ಈಗ ನನ್ನ ಜೀವನದಲ್ಲಿ ಮುನ್ನಡೆಯುವುದು ನನ್ನ ಗುರಿಯಾಗಿದೆ. ಸತತ 3 ವಿಶ್ವಕಪ್‌ಗಳು ನಡೆದಿವೆ. ನಾನು ಯಾವುದೇ ರೀತಿಯ ಕ್ರಿಕೆಟ್ ಆಡಬೇಕು ಎಂಬ ಕಾರಣಕ್ಕೆ ಕೆಂಟ್ ಗೆ ಬಂದಿದ್ದೇನೆ. ನನಗೆ ರೆಡ್ ಬಾಲ್ ಕ್ರಿಕೆಟ್ ಆಡಲು ಅವಕಾಶ ಸಿಗುತ್ತಿದೆ. ನಾನು ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡಲು ಬಯಸುತ್ತೇನೆ. ಇದು ನನಗೆ ಒಳ್ಳೆಯ ಅನುಭವ. ನಾನು ಮೊದಲ ಡಿವಿಷನ್ ಕೌಂಟಿಯಲ್ಲಿ ಆಡುತ್ತಿದ್ದೇನೆ ಎಂದರು.


ಭಾರತ ತನ್ನ ವಿಶ್ವಕಪ್ ತಂಡದಲ್ಲಿ 3 ಸ್ಪಿನ್ನರ್‌ಗಳನ್ನು ಇಟ್ಟುಕೊಂಡಿದೆ. ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಈಗಾಗಲೇ ಇದರಲ್ಲಿ ಸೇರಿದ್ದರು. ಅಕ್ಷರ್ ಪಟೇಲ್ ಈ ಹಿಂದೆ ತಂಡದಲ್ಲಿದ್ದರು ಆದರೆ ಅವರ ಗಾಯದ ಕಾರಣ, ಕೊನೆಯ ಕ್ಷಣದಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಲಾಯಿತು. 


ಇದನ್ನೂ ಓದಿ : ವಿಶ್ವಕಪ್’ಗೂ ಮುನ್ನ ಟೀಂ ಇಂಡಿಯಾಗೆ ವಿಶೇಷ ಸಲಹೆ ನೀಡಿದ ಯುವರಾಜ್ ಸಿಂಗ್! ಇದು ಗೆಲುವಿನ ಗುರುಮಂತ್ರ… 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.