ಬೆಂಗಳೂರು : ಆನ್‌ಲೈನ್ ವಂಚನೆಗಳು ಹೆಚ್ಚುತ್ತಿವೆ. ಬಳಕೆದಾರ ತನ್ನ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡಾಗ, ಖಾತೆಯಿಂದ ಹಣ ಕಳೆದುಕೊಳ್ಳುವ ಅಪಾಯ ಹೆಚ್ಚು. ಯಾರದ್ದೇ ಆಗಲಿ ಬ್ಯಾಂಕ್ ಖಾತೆಗೆ ಆಕ್ಸೆಸ್ ಪಡೆಯಲು ಸ್ಕ್ಯಾಮರ್‌ಗಳು ಯಾವ ತಂತ್ರಗಳನ್ನು  ಬೇಕಾದರೂ ಅನುಸರಿಸುತ್ತಾರೆ. ವಂಚಕರು ತಮ್ಮ ಕೃತ್ಯಕ್ಕೆ  ದೊಡ್ಡ ಆ್ಯಪ್‌ಗಳನ್ನು ಕೂಡಾ ಬಳಸಿಕೊಳ್ಳುತ್ತಿದ್ದಾರೆ. ಜನಪ್ರಿಯ ಆಪ್ ಗಳನ್ನು ಕ್ಲೋನ್ ಮಾಡುವ ಮೂಲಕ ಲೂಟಿ ಮಾಡಲಾಗುತ್ತದೆ.  ದುರುದ್ದೇಶಪೂರಿತ ಮಾಲ್‌ವೇರ್ ಹೊಂದಿರುವ ಅಪ್ಲಿಕೇಶನ್‌ಗಳ ಹೊಸ ಅಲೆಯು ಬಳಕೆದಾರರಲ್ಲಿ ಆತಂಕವನ್ನು ಹೆಚ್ಚಿಸಿದೆ. ಸಾವಿರಾರು ಬಳಕೆದಾರರು ಈ ಆನ್ಲೈನ್ ಮೋಸದ ಜಾಲಕ್ಕೆ ಬಲಿಯಾಗುತ್ತಿದ್ದಾರೆ.  


COMMERCIAL BREAK
SCROLL TO CONTINUE READING

ಇತ್ತೀಚೆಗೆ, ಬಿಟ್‌ಡೆಫೆಂಡರ್‌ನಲ್ಲಿನ ಸೈಬರ್ ಭದ್ರತಾ ಸಂಶೋಧಕರು ಗುಪ್ತ ಮಾಲ್‌ವೇರ್ ಅಭಿಯಾನದ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ. ಪ್ರಪಂಚದಾದ್ಯಂತದ ಮೊಬೈಲ್ ಸಾಧನಗಳಲ್ಲಿ ಆರು ತಿಂಗಳಿಗಿಂತ ಹೆಚ್ಚು ಕಾಲ ಈ ಅಭಿಯಾನ ನಡೆಸುವುದು ಸಾಧ್ಯವಾಗುವುದಿಲ್ಲ.  ಗಣನೀಯ ಆದಾಯವನ್ನು ಗಳಿಸುವ ಗುರಿಯೊಂದಿಗೆ ಆ್ಯಡ್‌ವೇರ್ ಅನ್ನು ಆಂಡ್ರಾಯ್ಡ್ ಸಾಧನಗಳಲ್ಲಿ ಆಕ್ರಮಣಕಾರಿಯಾಗಿ ಬಳಸಲು ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಮಾಲ್‌ವೇರ್ ಅಭಿಯಾನದ ಬಗ್ಗೆ ನಡೆದ ತನಿಖೆಯು ಸೂಚಿಸಿದೆ. 


ಇದನ್ನೂ ಓದಿ : ಇನ್ನೊಂದು ತಿಂಗಳಲ್ಲಿ ಮಾರುತಿ ಹೊರ ತರುತ್ತಿದೆ 7 ಸೀಟರ್ ಕಾರು ! ಮಾರುತಿ ಸುಜುಕಿಯ ದುಬಾರಿ ಕಾರು ಇದಾಗಿರಲಿದೆ


ಇಲ್ಲಿಯವರೆಗೆ, Bitdefender ಸೈಬರ್ ಭದ್ರತಾ ಸಂಶೋಧಕರು 60,000  ಅಪ್ಲಿಕೇಶನ್‌ಗಳನ್ನು ಗುರುತಿಸಿದ್ದು,  ಇಡೀ ಮಾದರಿಯ ಇನ್ನೂ  ಅನೇಕ ಆಪ್ ಗಳು ಬಳಕೆಯಲ್ಲಿರಬಹುದು ಎಂದು ಅಂದಾಜಿಸಲಾಗಿದೆ. ಸೈಬರ್ ಅಪರಾಧಿಗಳ ಪ್ರಸ್ತುತ ಮಾಲ್‌ವೇರ್ ಅಭಿಯಾನವು ಉದ್ಯಮಗಳು ಮತ್ತು ಬಳಕೆದಾರರಿಗೆ ಗಮನಾರ್ಹ ಭದ್ರತಾ ಬೆದರಿಕೆಯಾಗಿ ಮಾರ್ಪಟ್ಟಿದೆ. 


ಬಳಕೆದಾರರನ್ನು ಹೇಗೆ ಗುರಿಯಾಗಿಸಲಾಗುತ್ತಿದೆ : 
ಈ ಮಾಲ್‌ವೇರ್-ಹೊತ್ತ ಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್‌ನಲ್ಲಿ ಇರುವ  ನಿಜವಾದ ಮತ್ತು ಜನಪ್ರಿಯ ಅಪ್ಲಿಕೇಶನ್‌ಗಳನ್ನು ಕಾಪಿ ಮಾಡುತ್ತವೆ.  ಹೀಗೆ ಕಾಪಿ ಮಾಡಲಾದ ಅಪ್ಲಿಕೇಶನ್‌ಗಳನ್ನು "ಮೋಡೆಡ್" ಅಪ್ಲಿಕೇಶನ್‌ಗಳು ಎಂದು ಕರೆಯಲಾಗುತ್ತದೆ. ಅವುಗಳು ಮೂಲ ವೈಶಿಷ್ಟ್ಯಗಳೊಂದಿಗೆ ಮೂಲ ಅಪ್ಲಿಕೇಶನ್‌ಗಳ ಮಾರ್ಪಡಿಸಿದ ಆವೃತ್ತಿಗಳಾಗಿರುತ್ತವೆ.


ಇದನ್ನೂ ಓದಿ : ಅಗ್ನಿ ಪ್ರೈಮ್ ಪಿ: ಚೀನಾದ ಮಿಲಿಟರಿ ವೃದ್ಧಿಗೆ ಭಾರತದ ಉತ್ತರ


ಈ ಕ್ಲೋನ್ ಮಾಡಲಾದ ಈ ಅಪ್ಲಿಕೇಶನ್‌ಗಳ ಬಗ್ಗೆ ಇರಲಿ ಎಚ್ಚರ :  


Game cracks
Games with unlocked features
Free VPN
Fake videos
Netflix
Fake tutorials
YouTube without ads
TikTok without ads
Cracked utility programs: weather, pdf viewers, etc
Fake security programs


ಅಪಾಯ ತಪ್ಪಿಸಲು ಏನು ಮಾಡಬೇಕು ? : 
ಅಪ್ಡೇಟ್ ಮಾಡಿಕೊಳ್ಳಿ :  ನಿಮ್ಮ ಆಪರೇಟಿಂಗ್ ಸಿಸ್ಟಂ, ಅಪ್ಲಿಕೇಶನ್‌ಗಳು ಮತ್ತು ಭದ್ರತಾ ಪ್ಯಾಚ್‌ಗಳನ್ನು ನಿಯಮಿತವಾಗಿ ಅಪ್ಡೇಟ್ ಮಾಡಿ.  


ಜಾಗರೂಕರಾಗಿರಿ : ಅಪರಿಚಿತ ಮೂಲಗಳಿಂದ ಬರುವ ಇಮೇಲ್‌ಗಳು ಅಥವಾ ಸಂದೇಶಗಳನ್ನು ಸ್ವೀಕರಿಸುವಾಗ ಎಚ್ಚರ ಇರಲಿ. ಸಂದೇಶ ಮೇಲ್ ಮೂಲಕ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.  


ಉತ್ತಮ ಪಾಸ್‌ವರ್ಡ್ ಅನ್ನು ಆಯ್ಕೆ ಮಾಡಿ :  ಸ್ಟ್ರಾಂಗ್ ಮತ್ತು ಭಿನ್ನವಾದ ಪಾಸ್‌ವರ್ಡ್ ಅನ್ನು ಆಯ್ಕೆ ಮಾಡಿ. ಪಾಸ್‌ವರ್ಡ್ ಅನ್ನು ನಿಯಮಿತವಾಗಿ ಬದಲಾಯಿಸಿ.


ಇದನ್ನೂ ಓದಿ : Whatsapp ನಲ್ಲಿ ಖಾಸಗಿ ಬ್ರಾಡ್ ಕಾಸ್ಟ್ ಸಂದೇಶ ಇನ್ನೂ ಮತ್ತಷ್ಟು ಸುಲಭ, ವಿಶಿಷ್ಟ ಟೂಲ್ಸ್ ಚಾನೆಲ್ ಪ್ರಸ್ತುತ ಪಡಿಸಿದ ಮೇಟಾ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.