ಈಗ WhatsAppನಲ್ಲಿ ಕಳುಹಿಸುವ ಬ್ಲರ್ ಫೋಟೋ ಕೂಡಾ HD ಕ್ವಾಲಿಟಿಯದ್ದಾಗುತ್ತದೆ ! ಈ ಬಟನ್ ಒತ್ತಿದರೆ ಸಾಕು

WhatsApp New Feature:ಈ ವೈಶಿಷ್ಟ್ಯವು ಬಳಕೆದಾರರು ಕಳುಹಿಸುವ ಫೋಟೋ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಈ ರೋಲ್‌ಔಟ್ ಪ್ರಸ್ತುತ ಬೀಟಾ ಪರೀಕ್ಷಕರಿಗೆ ಮಾತ್ರ ಸೀಮಿತವಾಗಿದೆ.

Written by - Ranjitha R K | Last Updated : Jun 8, 2023, 12:27 PM IST
  • ಪ್ರತಿಯೊಬ್ಬರೂ ಬಳಸುವ ಅತ್ಯಂತ ಜನಪ್ರಿಯ ಅಪ್ಲಿಕೇಶನ್ WhatsApp
  • WhatsApp ಹಲವು ಹೊಸ ವೈಶಿಷ್ಟ್ಯಗಳನ್ನು ತರುತ್ತಿದೆ
  • ಒಂದು ಬಟನ್ ಮೂಲಕ, ಫೋಟೋವನ್ನು HDಯಲ್ಲಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.
ಈಗ WhatsAppನಲ್ಲಿ ಕಳುಹಿಸುವ ಬ್ಲರ್ ಫೋಟೋ ಕೂಡಾ  HD ಕ್ವಾಲಿಟಿಯದ್ದಾಗುತ್ತದೆ ! ಈ ಬಟನ್ ಒತ್ತಿದರೆ ಸಾಕು  title=

WhatsApp New Feature : ಇತ್ತೀಚಿನ ದಿನಗಳಲ್ಲಿ ಬಹುತೇಕ  ಪ್ರತಿಯೊಬ್ಬರೂ ಬಳಸುವ ಅತ್ಯಂತ ಜನಪ್ರಿಯ ಅಪ್ಲಿಕೇಶನ್ WhatsApp.ಬಳಕೆದಾರರ ಅನುಭವವನ್ನು ಹೆಚ್ಚಿಸಲು WhatsApp ಹಲವು ಹೊಸ ವೈಶಿಷ್ಟ್ಯಗಳನ್ನು ತರುತ್ತಿದೆ. ಹಲವು ವರ್ಷಗಳಿಂದ ವಾಟ್ಸಾಪ್ ನಲ್ಲಿ ಬ್ಲರ್ ಫೋಟೋ ಶೇರಿಂಗ್ ಸಮಸ್ಯೆ  ಎದುರಾಗುತ್ತಿತ್ತು. ಇದೀಗ ಈ ಸಮಸ್ಯೆಗೂ ಕಂಪನಿ ಪರಿಹಾರ ಕಂಡುಕೊಂಡಿದೆ. ಒಂದೇ ಒಂದು ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ, ಫೋಟೋವನ್ನು HDಯಲ್ಲಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. iOS ಮತ್ತು Androidನಲ್ಲಿ ಬೀಟಾ ಅಪ್‌ಡೇಟ್ ಈಗ ಬಳಕೆದಾರರು ತಮ್ಮ ಮೂಲ ಆಯಾಮಗಳನ್ನು ಉಳಿಸಿಕೊಂಡು HD ಫೋಟೋಗಳನ್ನು  ಶೇರ್ ಮಾಡಲು ಅನುಮತಿಸುತ್ತದೆ.

WhatsApp HD ಫೋಟೋ ಶೇರಿಂಗ್ ಆಯ್ಕೆ : 
ಈ ವೈಶಿಷ್ಟ್ಯವು ಬಳಕೆದಾರರು ಕಳುಹಿಸುವ ಫೋಟೋ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಈ ರೋಲ್‌ಔಟ್ ಪ್ರಸ್ತುತ ಬೀಟಾ ಪರೀಕ್ಷಕರಿಗೆ ಮಾತ್ರ ಸೀಮಿತವಾಗಿದೆ. ಮುಂಬರುವ ವಾರಗಳಲ್ಲಿ ಈ ವೈಶಿಷ್ಟ್ಯವನ್ನು ಹೆಚ್ಚಿನ ಬಳಕೆದಾರರಿಗೆ ವಿಸ್ತರಿಸಲಾಗುವುದು. ಇತ್ತೀಚಿನ WhatsApp ಬೀಟಾ ಅಪ್‌ಡೇಟ್, iOS 23.11.0.76 ಮತ್ತು Android 2.23.12.13, ಫೋಟೋ ಗುಣಮಟ್ಟವನ್ನು ನಿರ್ವಹಿಸಲು ನೀಡಿರುವ ಹೊಸ ಆಯ್ಕೆಯಾಗಿದೆ. 

ಇದನ್ನೂ ಓದಿ : ಮಾರುಕಟ್ಟೆಗೆ ಬಂದಿದೆ ಅಗ್ಗದ ಬೆಲೆಯ ಸ್ಮಾರ್ಟ್ ಟಿವಿ ! ಕೇವಲ 11 ಸಾವಿರ ರೂ. ವೆಚ್ಚದಲ್ಲಿ ಮನೆಯಾಗುತ್ತದೆ ಹೋಮ್ ಥಿಯೇಟರ್

 ಸಿಗುತ್ತದೆ ಎಚ್‌ಡಿ ಬಟನ್ : 
ಬಳಕೆದಾರರು ಈಗ ಫೋಟೋಗಳನ್ನು ಹಂಚಿಕೊಳ್ಳುವಾಗ 'ಎಚ್‌ಡಿ' ಆಯ್ಕೆಯನ್ನು ಆರಿಸುವ ಮೂಲಕ ಉತ್ತಮ ಗುಣಮಟ್ಟದ ಫೋಟೋಗಳನ್ನು ಕಳುಹಿಸುವುದು ಸಾಧ್ಯವಾಗುತ್ತದೆ. ಬಳಕೆದಾರರು ಫೋಟೋವನ್ನು ಆಯ್ಕೆ ಮಾಡಿದಾಗ, HD ಬಟನ್ ಸಕ್ರಿಯಗೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡುವುದರಿಂದ, ಫೋಟೋ ಎಚ್‌ಡಿಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಆದರೆ ಡೀಫಾಲ್ಟ್ ಸೆಟ್ಟಿಂಗ್‌ನಲ್ಲಿ  ನಿಜವಾದ ಗುಣಮಟ್ಟವು ಗೋಚರಿಸುತ್ತದೆ. 

ರೋಲ್‌ಔಟ್ ಮುಂದುವರೆದಂತೆ, HD ಫೋಟೋಗಳನ್ನು ಹಂಚಿಕೊಳ್ಳುವ ಈ ವೈಶಿಷ್ಟ್ಯ ಹೆಚ್ಚು ಜನರಿಗೆ ಲಭ್ಯವಾಗುತ್ತದೆ. ಇತರ ವೈಶಿಷ್ಟ್ಯಗಳ ಜೊತೆಗೆ ಹೊಸ ಬೀಟಾ ಅಪ್‌ಡೇಟ್‌ನಲ್ಲಿ ಮರುವಿನ್ಯಾಸಗೊಳಿಸಲಾದ ಎಮೋಜಿ ಕೀಬೋರ್ಡ್ ಅನ್ನು ಸಹ ಪರಿಚಯಿಸಲಾಗಿದೆ. 

ಇದನ್ನೂ ಓದಿ : ಮಾರುಕಟ್ಟೆಗೆ ಬಂತು ಬಹು ನಿರೀಕ್ಷಿತ Maruti Jimny!ಬೆಲೆ ಕೇವಲ ಇಷ್ಟೇ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News