ಮಾರುಕಟ್ಟೆಗೆ ಲಗ್ಗೆ ಇಟ್ಟ 2024 Bajaj Pulsar NS125!ವೈಶಿಷ್ಟ್ಯ ಮತ್ತು ಬೆಲೆ ಎಷ್ಟು ತಿಳಿಯಿರಿ
2024 Bajaj Pulsar NS125 Price & Features: ಹೊಸ 2024 ಬಜಾಜ್ ಪಲ್ಸರ್ NS125 ಬೆಲೆ 1,04,922 ರೂ . (ಎಕ್ಸ್ ಶೋ ರೂಂ, ದೆಹಲಿ). ಹಳೆಯ ಮಾದರಿಗೆ ಹೋಲಿಸಿದರೆ ಈ ಬೆಲೆ 5,000 ರೂ.ಗಳಷ್ಟು ದುಬಾರಿ. ಮಾರುಕಟ್ಟೆಯಲ್ಲಿ ಇದರ ನೇರ ಪೈಪೋಟಿ Hero Xtreme 125R ಮತ್ತು TVS Raider 125.
2024 Bajaj Pulsar NS125 Price & Features : ಹೊಸ 2024 ಪಲ್ಸರ್ NS160 ಮತ್ತು NS200 ಅನ್ನು ಬಿಡುಗಡೆ ನಂತರ, ಬಜಾಜ್ ಭಾರತದಲ್ಲಿ ಪಲ್ಸರ್ NS125 ಅನ್ನು ಸಹ ಬಿಡುಗಡೆ ಮಾಡಿದೆ. ಹೊಸ 2024 ಬಜಾಜ್ ಪಲ್ಸರ್ NS125 ಬೆಲೆ 1,04,922 ರೂ . (ಎಕ್ಸ್ ಶೋ ರೂಂ, ದೆಹಲಿ). ಹಳೆಯ ಮಾದರಿಗೆ ಹೋಲಿಸಿದರೆ ಈ ಬೆಲೆ 5,000 ರೂ.ಗಳಷ್ಟು ದುಬಾರಿ. ಇದು ಮಾರುಕಟ್ಟೆಯಲ್ಲಿ Hero Xtreme 125R ಮತ್ತು TVS Raider 125ಗಳಿಗೆ ನೇರ ಪೈಪೋಟಿ ನೀಡಲಿದೆ. .
2024 ಬಜಾಜ್ ಪಲ್ಸರ್ NS125ನ ಮಸ್ಕ್ಯುಲರ್ ಡಿಸೈನ್ ಅನ್ನು ಮೊದಲಿನಂತೆಯೇ ಇರಿಸಲಾಗಿದೆ. ಬೈಕ್‌ನ ಮುಂಭಾಗದ ವಿನ್ಯಾಸ, ಇಂಧನ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ, ಅದರ ಹೆಡ್‌ಲೈಟ್‌ಗಳಲ್ಲಿ ಕೆಲವು ಆಂತರಿಕ ಬದಲಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ ಥಂಡರ್ ಶೇಪ್ಡ್ LED DRLs ಒದಗಿಸಲಾಗಿದೆ.
ಇದನ್ನೂ ಓದಿ : Flip Moblie : ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಕಡಿಮೆ ಬಜೆಟ್ ನ ಫ್ಲಿಪ್ ಫೋನ್
ಬೈಕ್ ಈಗ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಸಂಪೂರ್ಣ ಡಿಜಿಟಲ್ ಉಪಕರಣ ಕನ್ಸೋಲ್ ಅನ್ನು ಹೊಂದಿದೆ. ಇದರ ಮೂಲಕ ಸವಾರರು SMS ಮತ್ತು ಕಾಲ್ ನೋಟಿಫಿಕೇಶನ್, ಫೋನ್ ಬ್ಯಾಟರಿ ಮಟ್ಟ ಮುಂತಾದ ಮಾಹಿತಿಯನ್ನು ವೀಕ್ಷಿಸಬಹುದು. ಇದಲ್ಲದೆ, ಬೈಕ್ ನಲ್ಲಿ ಯುಎಸ್‌ಬಿ ಪೋರ್ಟ್ ಮತ್ತು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಅನ್ನು ಒದಗಿಸಲಾಗಿದೆ. ಯುಎಸ್‌ಬಿ ಪೋರ್ಟ್ ಮೂಲಕ ಫೋನ್ ಅಥವಾ ಇಯರ್‌ಫೋನ್ ಇತ್ಯಾದಿಗಳನ್ನು ಚಾರ್ಜ್ ಮಾಡಬಹುದು. ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್‌ನೊಂದಿಗೆ ಸುರಕ್ಷತೆಯನ್ನು ನೋಡಿಕೊಳ್ಳಲಾಗಿದೆ.
ಮೋಟಾರ್‌ಸೈಕಲ್ ನ ಫ್ರಂಟ್ ಡಿಸ್ಕ್ ಮತ್ತು ರಿಯರ್ ಡ್ರಮ್ ಬ್ರೇಕ್‌ಗಳನ್ನು ಸಿಂಗಲ್ ಚಾನೆಲ್ ಎಬಿಎಸ್ ವ್ಯವಸ್ಥೆಯೊಂದಿಗೆ ನೀಡಲಾಗಿದೆ. ಇದರಲ್ಲಿ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದೆ. 2024 ಪಲ್ಸರ್ NS125 ಮೊದಲಿನಂತೆಯೇ 125cc ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದೆ
ಇದನ್ನೂ ಓದಿ : ಮಾರ್ಚ್ 7ರಂದು Vivo V30 ಮಾರುಕಟ್ಟೆಗೆ ಲಗ್ಗೆ : ಇದರ ಬೆಲೆ ಹಾಗೂ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ಇದರ ಎಂಜಿನ್ ಅನ್ನು 5-ಸ್ಪೀಡ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ. ಈ ಎಂಜಿನ್ 11.8bhp ಪವರ್ ಮತ್ತು 11Nm ಟಾರ್ಕ್ ಅನ್ನು ಜನರೆಟ್ ಮಾಡುತ್ತದೆ. ಸಸ್ಪೆನ್ಷನ್‌ಗಾಗಿ, ಬೈಕು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಹೊಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.