Tecno Spark 20C : Tecno ಬಜೆಟ್ ಶ್ರೇಣಿಯಲ್ಲಿ Tecno Spark 20C ಹೆಸರಿನ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ. ಈ ಸ್ಮಾರ್ಟ್‌ಫೋನ್ ಫೆಬ್ರವರಿ 27 ರಂದು ಅಂದರೆ ನಾಳೆ ಬಿಡುಗಡೆಯಾಗಲಿದೆ.ಈ ಸ್ಮಾರ್ಟ್‌ಫೋನ್‌ನಲ್ಲಿ, ಗ್ರಾಹಕರು 16GB RAM, ಸೇರಿದಂತೆ ಹಲವು ಶಕ್ತಿಶಾಲಿ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ.ಇದಲ್ಲದೆ, ಫೋನ್ ಐಫೋನ್‌ನಂತೆ ಡೈನಾಮಿಕ್ ಐಲ್ಯಾಂಡ್ ಡಿಸ್ಪ್ಲೇಯನ್ನು ಹೊಂದಿರುತ್ತದೆ.
ಡಿಸ್ಪ್ಲೇ ಬಗ್ಗೆ ಮಾಹಿತಿ ಬಹಿರಂಗ :
ಸ್ಪಾರ್ಕ್ 20C ಬಿಡುಗಡೆಗೂ ಮುನ್ನ ಅದರ ಡಿಸ್ಪ್ಲೇಗೆ ಸಂಬಂಧಿಸಿದ ದೊಡ್ಡ ಮಾಹಿತಿ ಹೊರ ಬಿದ್ದಿದೆ.ಕಂಪನಿಯು ತನ್ನ X ಹ್ಯಾಂಡಲ್ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದೆ. ಈ ಫೋನ್‌ನಲ್ಲಿ, ಗ್ರಾಹಕರು 90 Hz ರಿಫ್ರೆಶ್ ರೇಟ್ ನೊಂದಿಗೆ ವಿಭಾಗದ ಅತ್ಯುತ್ತಮ ಡಾಟ್ ಇನ್ ಡಿಸ್‌ಪ್ಲೇಯನ್ನು ಪಡೆಯಲಿದ್ದಾರೆ.
ಇದನ್ನೂ ಓದಿ : UPI ಮೂಲಕ ತಪ್ಪಾದ ಖಾತೆಗೆ ಹಣ ವರ್ಗ ಆಗಿದೆಯೇ? ಹೀಗೆ ಮಾಡಿದರೆ ಹಣ ವಾಪಾಸಾಗುವುದು
ಯುವಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ಡಿಸ್ಪ್ಲೇಯನ್ನು ಸಿದ್ಧಪಡಿಸಿದೆ. ಉತ್ತಮ ರಿಫ್ರೆಶ್ ರೇಟ್ ನಿಂದಾಗಿ ಇದು ಸಾಕಷ್ಟು ಮೃದುವಾಗಿರುತ್ತದೆ. ಇದರಿಂದಾಗಿ ಮಲ್ಟಿ ಟಾಸ್ಕಿಂಗ್ ಮಾಡುವಾಗ, ಗೇಮ್ ಆಡುವಾಗ ಅಥವಾ ವೀಡಿಯೊಗಳನ್ನು ಪ್ಲೇ ಮಾಡಿದಾಗ, ಲ್ಯಾಗ್ ಫ್ರೀ ಅನುಭವವಾಗುತ್ತದೆ. ಈ ಡಿಸ್ಪ್ಲೇಯ ಇನ್ನೊಂದು ವಿಶೇಷವೆಂದರೆ ಡೈನಾಮಿಕ್ ಪೋರ್ಟ್.
ಈ ಟೆಕ್ನೋ ಸ್ಮಾರ್ಟ್‌ಫೋನ್‌ನ ಕಂಪನಿಯು ಹಂಚಿಕೊಂಡ ಚಿತ್ರವನ್ನು ನೋಡಿದಾಗ, ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇರಬಹುದು ಎಂದು ಹೇಳಲಾಗುತ್ತಿದೆ. ಕ್ಯಾಮೆರಾ ಬಂಪ್‌ನಲ್ಲಿ ಫ್ಲ್ಯಾಷ್ ಕೂಡಾ ಇದ್ದ ಹಾಗೆ ತೋರುತ್ತದೆ.ಕಂಪನಿಯು ತನ್ನ ಹಿಂದಿನ ಕ್ಯಾಮೆರಾ ಸೆಟಪ್‌ನಲ್ಲಿ 50-ಮೆಗಾಪಿಕ್ಸೆಲ್ ಪಕ್ಯಾಮರಾ ಸೆಟಪ್ ಈ ವೈಶಿಷ್ಟ್ಯಗಳನ್ನು ಹೊಂದಿರಬಹುದು :್ರೈಮರಿ ಸೆನ್ಸಾರ್ ಸೇರಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : TRAI ನ ಮಾಸ್ಟರ್ ಪ್ಲಾನ್: ಅಪರಿಚಿತ ಕರೆಗಳಲ್ಲಿಯೂ ಕರೆ ಮಾಡುವವರ ಹೆಸರು ಗೋಚರಿಸುತ್ತೆ!
ಸೈಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಇರುವ ನಿರೀಕ್ಷೆ :
ಕಂಪನಿಯು ಶೇರ್ ಮಾಡಿದ ಫೋಟೋದಲ್ಲಿ, ಫೋನ್‌ನ ಬದಿಯು ವಾಲ್ಯೂಮ್ ರಾಕರ್ ಜೊತೆಗೆ ಪವರ್ ಬಟನ್ ಅನ್ನು ಹೊಂದಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಪವರ್ ಬಟನ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಸಂಯೋಜಿಸಬಹುದು ಎನ್ನಲಾಗಿದೆ.
5000 mAh ಬ್ಯಾಟರಿ ಇರಬಹುದು :
ಸ್ಪಾರ್ಕ್ 20C ನಲ್ಲಿ, ಗ್ರಾಹಕರು 5000 mAh ಬ್ಯಾಟರಿ ಮತ್ತು 18w ವೇಗದ ಚಾರ್ಜಿಂಗ್ ಅನ್ನು ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.