Flip Moblie : ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಕಡಿಮೆ ಬಜೆಟ್ ನ ಫ್ಲಿಪ್ ಫೋನ್

Flip Moblie : ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ರೀತಿಯ ಫೋನ್ ಗಳು ಲಗ್ಗೆ ಇಡುತ್ತಲೇ ಇವೆ. ಬೇರೆ ಬೇರೆ ರೀತಿಯ ವಿವಿಧ ರೀತಿಯ ವಿನ್ಯಾಸಗಳಲ್ಲಿ ಮಾರುಕಟ್ಟೆಗೆ ಕಾಲಿಡುತ್ತಲೇ ಇವೆ. ಇದೀಗ ಫ್ಲಿಪ್ ಫೋನ್ ಒಂದು ಮಾರುಕಟ್ಟೆಗೆ ಕಡಿಮೆ ಬೆಲೆಯಲ್ಲಿ ಲಗ್ಗೆ ಇಟ್ಟಿದೆ ಆ ಕುರಿತು ಮಾಹಿತಿ ಇಲ್ಲಿದೆ   

Written by - Zee Kannada News Desk | Last Updated : Feb 28, 2024, 10:59 AM IST
  • ಇದೀಗ ಫ್ಲಿಪ್ ಫೋನ್ ಒಂದು ಮಾರುಕಟ್ಟೆಗೆ ಕಡಿಮೆ ಬೆಲೆಯಲ್ಲಿ ಲಗ್ಗೆ ಇಟ್ಟಿದೆ ಆ ಕುರಿತು ಮಾಹಿತಿ ಇಲ್ಲಿದೆ
  • ಇದೀಗ Snexion Rock ಎಂಬ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
  • Snexion Rock ಹೆಸರಿನ ಫ್ಲಿಪ್ ಫೋನ್ ಮೂರು ಕ್ಯಾಮೆರಾಗಳನ್ನು ಹೊಂದಿದೆ
Flip Moblie : ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಕಡಿಮೆ ಬಜೆಟ್ ನ ಫ್ಲಿಪ್ ಫೋನ್ title=

A low budget flip phone : ವಿವಿಧ ರೀತಿಯ ವಿನ್ಯಾಸದಲ್ಲಿ ಮತ್ತು ಗ್ರಾಹಕರ ಬೇಡಿಕೆಗೆ ತಕ್ಕಂತೆ ಫೀಚರ್ ಗಳನ್ನೊಳಗೊಂಡ ಹೊಸ ಹೊಸ ಫೋನ್ ಗಳು ದಿನದಿಂದ ದಿನಕ್ಕೆ ಗ್ರಾಹಕರನ್ನು ಆಕರ್ಷಿಸುತ್ತವೆ. ಈ ರೀತಿ ಆಕರ್ಷಿತಗೊಳ್ಳುವ ಗ್ರಾಹಕರೆದುರಿಗೆ ಇದೀಗ ಅಗ್ಗದ ಬೆಲೆಯ ಫ್ಲಿಪ್ ಫೋನ್ ಒಂದು ಮಾರುಕಟ್ಟೆಗೆ ಬಂದಿದ್ದು , ಈಗ ಕಂಪನಿಗಳು ಫ್ಲಿಪ್‌ ಮೊಬೈಲ್‌ಗಳನ್ನು ನಿರ್ಮಿಸಿ ಗ್ರಾಹಕರನ್ನು ಸೆಳೆಯುತ್ತಿವೆ.

ಮೊದಲು ಫೋನ್ ಕೊಳ್ಳುವಾಗ ವಿವಿಧ ವೈಶಿಷ್ಟ್ಯಗಳು, ವಿನ್ಯಾಸ ಮತ್ತು ನೋಟವನ್ನು ನೋಡುತ್ತೇವೆ. ನಿಮ್ಮ ಜೇಬಿಗೆ ಹೆಚ್ಚಿನ ಹೊರೆ ಆಗದಂತೆ ನೋಡಿಕೊಳ್ಳುವ ಫೋನ್‌ಗಳು ಬಂದಿವೆ.ಇನ್ನು ಕೆಲವು ಕಂಪನಿಯ ಫೋನ್‌ಗಳು ಕಾಣಲು ಅಂದವಾಗಿದ್ದು, ನಿಮ್ಮ ಜೇಬಿಗೆ ಭಾರವನ್ನು ಸಹ ಮಾಡುವುದಿಲ್ಲ. ಫ್ಲಿಪ್ ಫೋನ್‌ಗಳು ಮೊದಲಿಗೆ ನಮಗೆ ಸ್ಯಾಮ್‌ಸಂಗ್ ಮತ್ತು ಒಪ್ಪೋ ಕಂಪನಿಗಳನ್ನು ನೆನಪಿಸುತ್ತವೆ. ಇದೀಗ Snexion Rock ಎಂಬ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ಇದನ್ನು ಓದಿ : ದಾವಣಗೆರೆ : ಇತಿಹಾಸ ಪ್ರಸಿದ್ದ ಹರಿಹರೇಶ್ವರಸ್ವಾಮಿ ದೇವಸ್ಥಾನದ ಅರ್ಚಕರ ಹುದ್ದೆಗೆ ಅರ್ಜಿ ಆಹ್ವಾನ

 ಫ್ಲಿಪ್ ಫೋನ್‌ ಎಂದರೆ ಈಗಿನ ಕಾಲದ ಸ್ಮಾರ್ಟ್ ಫೋನ್ ಗಳಲ್ಲ ಹಿಂದಿನ ಕಾಲದಲ್ಲಿ ಹೆಚ್ಚಾಗಿ ಬಳಕೆಯಲ್ಲಿದ್ದಂತಹ ಕೀಪ್ಯಾಡ್ ಫೋನ್ ಗಳು. 
ಅದೇ ಹಳೆಯ ವಿನ್ಯಾಸದೊಂದಿಗೆ ಹೊಸ ವಿನ್ಯಾಸಗಳು ಸೇರಿ, ಕೀಪ್ಯಾಡ್ ಫೋನ್ ಗೆ ಹೊಸ ತಂತ್ರಜ್ಞಾನಗಳ ಅಳವಡಿಗೆಯೊಂದಿಗೆ ಇದೀಗ ಹೊಸ ಕೀಪ್ಯಾಡ್ ಫ್ಲಿಪ್ ಫೋನ್ ಒಂದು ಮಾರುಕಟ್ಟೆಗೆ ಬಂದಿದೆ. 

ಈ ಫೋನ್‌ ಬೆಲೆ ಎಷ್ಟು? 
ನೀವು ಸ್ಟೈಲಿಶ್ ಆಗಿ ಕಾಣಲು ಫೋನ್ ಖರೀದಿಸಿದರೆ ಅದು ನಿಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ. ಇನ್ನು ದುಬಾರಿ ಕಾಣುವ ಆದರೆ ಕಡಿಮೆ ಬೆಲೆಯ ಫೋನ್‌ಗಾಗಿ ಹುಡುಕುತ್ತಿದ್ದೀರಾ? ನೀವು 2,500 ರೂ.ಗೆ ಬರುವ ಫ್ಲಿಪ್ ಫೋನ್ ಅನ್ನು ಖರೀದಿಸಬಹುದು
Snexion Rock ಹೆಸರಿನ ಫ್ಲಿಪ್ ಫೋನ್ ಮೂರು ಕ್ಯಾಮೆರಾಗಳನ್ನು ಹೊಂದಿದೆ ಮತ್ತು ಮತ್ತು ಬಣ್ಣ ಆಯ್ಕೆಗಳು ಈ ದಿನಗಳಲ್ಲಿ ಲಭ್ಯವಿರುವ ಪ್ರಮುಖ ಫೋನ್‌ಗಳಿಗೆ ಹೋಲುತ್ತವೆ.

ಇದನ್ನು ಓದಿ : Salary hike update : ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರಿ ಉದ್ಯೋಗಿಗಳಿಗೆ 3 ಪ್ರಮುಖ ಘೋಷಣೆಗಳು! ವೇತನದಲ್ಲಿ ಆಗುವುದು ಭಾರೀ ಹೆಚ್ಚಳ 

Snexion Rock X Flip ಫೋನ್ ಆನ್‌ಲೈನ್ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯ. ಫೋನ್ ಅನ್ನು ಅಮೆಜಾನ್‌ನಲ್ಲಿ 2,500 ರೂ.ಗೆ ಖರೀದಿಸಬಹುದು. ಫೋನ್ ತೆರೆದಾಗ ಹೊರಗಿನಿಂದ ಮೂರು ಕ್ಯಾಮೆರಾಗಳು ಮತ್ತು ಕೀಪ್ಯಾಡ್ ಗೋಚರಿಸುತ್ತದೆ. ಈ ಫೋನ್ ಅನ್ನು ಐಫೋನ್ ಫ್ಲಿಪ್ ರೀತಿ ಕಾಣುತ್ತದೆ. ಇದನ್ನು ಫೀಚರ್ ಫೋನ್ ಎಂದು ಕರೆಯಬಹುದು. ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳು ಲಭ್ಯವಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News