8 Seater Car in India: ಭಾರತದಲ್ಲಿ 7 ಸೀಟರ್ ಕಾರುಗಳ ಹಲವು ಆಯ್ಕೆಗಳಿವೆ. ಇವುಗಳನ್ನು ದೊಡ್ಡ ಕುಟುಂಬಗಳಿಗೆ ಪ್ರಯಾಣ ಬೆಳೆಸಲು ಸೂಕ್ತವೆಂದು ಪರಿಗಣಿಸಲಾಗಿದೆ. ಆದರೆ 7 ಸೀಟರ್ ಗಿಂತ ಹೆಚ್ಚಿನ ಸೀಟರ್ ವ್ಯವಸ್ಥೆ ಉಳ್ಳ, ಕಡಿಮೆ ಬೆಲೆಯ ಮೂರು ಕಾರುಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈಗ Paytm ಮೂಲಕ ಹಣ ರವಾನೆ ಇನ್ನೂ ಸುಲಭ!


ಮಾರುಕಟ್ಟೆಯಲ್ಲಿ 8 ಸೀಟರ್ ಕಾರುಗಳು ಲಭ್ಯವಿವೆ. ದೇಶದ ಅಗ್ಗದ 8-ಸೀಟರ್ ಕಾರುಗಳ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ. ವಿಶೇಷವೆಂದರೆ ಈ ಪಟ್ಟಿಯಲ್ಲಿ ಮೊದಲ ಕಾರು ಕೇವಲ 13 ಲಕ್ಷ ರೂ.ಗೆ ಲಭ್ಯವಿದೆ.


1. ಮಹೀಂದ್ರ ಮರಾಜ್ಜೊ


ಮಹೀಂದ್ರಾ ಮರಾಜೊ ದೊಡ್ಡ ಕುಟುಂಬಗಳಿಗೆ ಟ್ರಾವೆಲ್ ಮಾಡಲು ಬೆಸ್ಟ್ MPV ಆಗಿದೆ. ಇದು ಹೆಚ್ಚು ಮಾರಾಟವಾಗಿಲ್ಲ, ಆದರೆ ಇದರ ಬೆಲೆ 13.71 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಅದರ ಮೂಲ M2 ರೂಪಾಂತರದಲ್ಲಿ 8 ಸೀಟರ್ ಆಯ್ಕೆಯಲ್ಲಿ ಲಭ್ಯವಿದೆ. ಇದು 1.5-ಲೀಟರ್ ಡೀಸೆಲ್ ಎಂಜಿನ್ (122PS/300Nm) ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದನ್ನು ಬಿಟ್ಟರೆ ಬೇರೆ ಯಾವುದೇ ಎಂಜಿನ್ ಆಯ್ಕೆ ಇಲ್ಲ.


2. ಟೊಯೋಟಾ ಇನ್ನೋವಾ ಕ್ರಿಸ್ಟಾ


ಇನೋವಾ ಕ್ರಿಸ್ಟಾ ಎಂಪಿವಿಗಳ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಹೆಸರು. ಇದು ವರ್ಷಗಳಿಂದ ಗ್ರಾಹಕರ ಹೃದಯವನ್ನು ಗೆದ್ದಿದೆ. ಇದರ ಬೆಲೆ ರೂ 19,99,000 ರಿಂದ ಪ್ರಾರಂಭವಾಗುತ್ತದೆ. 8 ಸೀಟರ್ ಗಳಲ್ಲಿ ಈ ಮಾಡೆಲ್ ಬರುತ್ತದೆ. ಇದು ದೇಶದಲ್ಲಿ ಹೆಚ್ಚು ಮಾರಾಟವಾಗುವ MPVಗಳಲ್ಲಿ ಒಂದಾಗಿದೆ. 7 ಮತ್ತು 8 ಸೀಟರ್ ಆಯ್ಕೆಗಳನ್ನು ಹೊಂದಿದೆ. ಪ್ರಸ್ತುತ ಡೀಸೆಲ್ ಎಂಜಿನ್ ಅನ್ನು ಮಾತ್ರ ಹೊಂದಿದ್ದು, ಪೆಟ್ರೋಲ್ ಎಂಜಿನ್ ಇನ್ನೋವಾ ಹೈಕ್ರಾಸ್‌ ಲಭ್ಯವಿದೆ.


ಇದನ್ನೂ ಓದಿ: IPL 2023ರ ಲೈವ್ ಪಂದ್ಯದಲ್ಲಿಯೇ ಕ್ರಿಕೆಟಿಗನ ಮೇಲೆ ಹಲ್ಲೆ ನಡೆಸಿದ ಅಭಿಮಾನಿಗಳು!


3. ಲೆಕ್ಸಸ್ LX


ಅತ್ಯಂತ ದುಬಾರಿ ಕಾರು ಲೆಕ್ಸಸ್ ಎಲ್ಎಕ್ಸ್. 2.82 ಕೋಟಿ ಬೆಲೆಗೆ ಮಾರಾಟವಾಗಿದೆ. ಇದು ಅತ್ಯಂತ ಶಕ್ತಿಶಾಲಿ SUV ಆಗಿದ್ದು, ಇದರಲ್ಲಿ 8 ಜನರು ಕುಳಿತುಕೊಳ್ಳಬಹುದು. ಇದು 5663cc ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ, 362 Bhp ಮತ್ತು 530Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ, ಇದು 7.7 ಸೆಕೆಂಡ್‌ಗಳಲ್ಲಿ 0 ರಿಂದ 100kmph ವೇಗವನ್ನು ಪಡೆಯಬಹುದು. ಇದಲ್ಲದೆ, ಅನೇಕ ಬೆಸ್ಟ್ ವೈಶಿಷ್ಟ್ಯಗಳನ್ನು ಸಹ ಈ ಕಾರು ಹೊಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ