IPL 2023ರ ಲೈವ್ ಪಂದ್ಯದಲ್ಲಿಯೇ ಕ್ರಿಕೆಟಿಗನ ಮೇಲೆ ಹಲ್ಲೆ ನಡೆಸಿದ ಅಭಿಮಾನಿಗಳು!

IPL 2023: ಈ ಘಟನೆಗೆ ಸಂಬಂಧಿಸಿದ ಟ್ವೀಟ್‌ ಗೆ ಪ್ರತಿಕ್ರಿಯಿಸಿದ ಜಾಂಟಿ ರೋಡ್ಸ್, “ಡಗೌಟ್‌ನಲ್ಲಿ ಮಾತ್ರವಲ್ಲ ಅಲ್ಲ, ಆಟಗಾರರ ಮೇಲೆ ಎಸೆದಿದ್ದಾರೆ. ಪ್ರೇರಕ್ ಮಂಕಡ್ ಫೀಲ್ಡಿಂಗ್ ಮಾಡುತ್ತಿದ್ದಾಗ ಅಭಿಮಾನಿಗಳು ಅವರ ತಲೆಗೆ ನಟ್ ಮತ್ತು ಬೋಲ್ಟ್‌ ಗಳಿಂದ ಹೊಡೆದಿದ್ದಾರೆ” ಎಂದು ಹೇಳಿದರು.

Written by - Bhavishya Shetty | Last Updated : May 14, 2023, 11:07 AM IST
    • ಡಗೌಟ್ ಮೇಲೆ ಅಭಿಮಾನಿಗಳು ನಟ್ ಮತ್ತು ಬೋಲ್ಟ್‌ ಗಳನ್ನು ಎಸೆದು ಕೋಲಾಹಲ ಸೃಷ್ಟಿಸಿದ್ದರು
    • ಹೈದರಾಬಾದ್‌ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆದಿತ್ತು
    • ಲಕ್ನೋ ಸೂಪರ್ ಜೈಂಟ್ಸ್ ತಂಡದ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ಘಟನೆಯ ಬಗ್ಗೆ ಮಾತನಾಡಿದ್ದಾರೆ
IPL 2023ರ ಲೈವ್ ಪಂದ್ಯದಲ್ಲಿಯೇ ಕ್ರಿಕೆಟಿಗನ ಮೇಲೆ ಹಲ್ಲೆ ನಡೆಸಿದ ಅಭಿಮಾನಿಗಳು!  title=
Fans Attack on Cricketers

IPL 2023: ಸನ್‌ ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (SRH vs LSG) ನಡುವಿನ ಪಂದ್ಯವು ಕೋಲಾಹಲದಿಂದ ತುಂಬಿತ್ತು ಎಂದರೆ ತಪ್ಪಾಗಲ್ಲ. ಹೈದರಾಬಾದ್‌ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆದಿತ್ತು. ಈ ಪಂದ್ಯದ ವೇಳೆ, ಲಕ್ನೋ ಸೂಪರ್ ಜೈಂಟ್ಸ್ ತಂಡದ ಡಗೌಟ್ ಮೇಲೆ ಅಭಿಮಾನಿಗಳು ನಟ್ ಮತ್ತು ಬೋಲ್ಟ್‌ ಗಳನ್ನು ಎಸೆದು ಕೋಲಾಹಲ ಸೃಷ್ಟಿಸಿದ್ದರು. ಇವಿಷ್ಟೇ ಅಲ್ಲದೆ, ತಮ್ಮ ತಂಡದ ಆಟಗಾರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಲಕ್ನೋ ಸೂಪರ್ ಜೈಂಟ್ಸ್‌ ನ ಫೀಲ್ಡಿಂಗ್ ಕೋಚ್ ಹೇಳಿದ್ದಾರೆ.

ಇದನ್ನೂ ಓದಿ: Tumkur Assembly Election Result 2023: ತುಮಕೂರು ನಗರದಲ್ಲಿ ಬಿಜೆಪಿ ಜಯಭೇರಿ: 3600 ಮತಗಳ ಅಂತರದಲ್ಲಿ ಗೆಲುವು

ಈ ಪಂದ್ಯದ ವೇಳೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಡಗೌಟ್ ಮೇಲೆ ನಟ್ ಮತ್ತು ಬೋಲ್ಟ್ ಎಸೆದ ಬಗ್ಗೆ ವರದಿಯಾಗಿದೆ. ಇದರ ಜೊತೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ಘಟನೆಯ ಬಗ್ಗೆ ಮಾತನಾಡಿದ್ದಾರೆ.

ಸ್ಟೇಡಿಯಂನಲ್ಲಿದ್ದ ಫ್ಯಾನ್ಸ್ ಡಗೌಟ್‌ ನತ್ತ ನಟ್ಸ್ ಮತ್ತು ಬೋಲ್ಟ್‌ ಗಳನ್ನು ಎಸೆಯುತ್ತಿದ್ದರು. ಅಷ್ಟೇ ಅಲ್ಲದೆ ಪಂದ್ಯ ಆಡುತ್ತಿರುವ ಆಟಗಾರನತ್ತ ಕೂಡ ಎಸೆದಿದ್ದಾರೆ ಎಂದು ಜಾಂಟಿ ರೋಡ್ಸ್ ಟ್ವೀಟ್ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ಟ್ವೀಟ್‌ ಗೆ ಪ್ರತಿಕ್ರಿಯಿಸಿದ ಜಾಂಟಿ ರೋಡ್ಸ್, “ಡಗೌಟ್‌ನಲ್ಲಿ ಮಾತ್ರವಲ್ಲ ಅಲ್ಲ, ಆಟಗಾರರ ಮೇಲೆ ಎಸೆದಿದ್ದಾರೆ. ಪ್ರೇರಕ್ ಮಂಕಡ್ ಫೀಲ್ಡಿಂಗ್ ಮಾಡುತ್ತಿದ್ದಾಗ ಅಭಿಮಾನಿಗಳು ಅವರ ತಲೆಗೆ ನಟ್ ಮತ್ತು ಬೋಲ್ಟ್‌ ಗಳಿಂದ ಹೊಡೆದಿದ್ದಾರೆ” ಎಂದು ಹೇಳಿದರು.

ಸನ್‌ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್‌ ನ 19 ನೇ ಓವರ್‌ ನಲ್ಲಿ, ವೇಗದ ಬೌಲರ್ ಅವೇಶ್ ಖಾನ್ ಫುಲ್ ಟಾಸ್ ಬಾಲ್ ಬೌಲ್ ಮಾಡಿದರು, ಅದನ್ನು ಲೆಗ್ ಅಂಪೈರ್ ನೋ ಬಾಲ್ ಎಂದು ಘೋಷಿಸಿದರು. ಇದಾದ ಬಳಿಕ ಲಕ್ನೋ ತಂಡ ಥರ್ಡ್ ಅಂಪೈರ್ ಬೆಂಬಲ ಪಡೆದುಕೊಂಡಿತು. ಆದರೆ ಥರ್ಡ್ ಅಂಪೈರ್ ಆ ನಿರ್ಧಾರ ಸರಿಯಿಲ್ಲ, ಅದು ರೈಟ್ ಬಾಲ್ ಎಂದು ಹೇಳಿದರು. ಇದೇ ವಿಚಾರಕ್ಕೆ ಕೋಪಗೊಂಡ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ, ಲಕ್ನೋ ಸೂಪರ್ ಜೈಂಟ್ಸ್‌ ನ ಡಗೌಟ್‌ಗೆ ನಟ್ ಮತ್ತು ಬೋಲ್ಟ್‌ ಗಳನ್ನು ಎಸೆಯಲು ಪ್ರಾರಂಭಿಸಿದರು. ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಹೆಸರಲ್ಲೂ ಘೋಷಣೆಗಳನ್ನು ಕೂಗಲು ಆರಂಭಿಸಿದರು.

ಇದನ್ನೂ ಓದಿ: ರೋಹಿತ್ ಶರ್ಮಾ ನಿವೃತ್ತಿ ಬಳಿಕ Team Indiaಗೆ ಈ ವಿಕೆಟ್ ಕೀಪರ್-ಬ್ಯಾಟ್ಸ್’ಮನ್ ನಾಯಕ!

ಉಭಯ ತಂಡಗಳ ನಡುವಿನ ಪಂದ್ಯ ಹೀಗಿತ್ತು:

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ಲಕ್ನೋ ಸೂಪರ್ ಜೈಂಟ್ಸ್ ಗೆ 183 ರನ್ ಗಳ ಟಾರ್ಗೆಟ್ ನೀಡಿತು. ಹೈದರಾಬಾದ್ ಪರ ಹೆನ್ರಿಕ್ ಕ್ಲಾಸೆನ್ ಗರಿಷ್ಠ 47 ರನ್ ಗಳಿಸಿದರು. ಇದಾದ ಬಳಿಕ ಲಕ್ನೋ ಬ್ಯಾಟ್ಸ್‌ಮನ್‌ ಗಳು 3 ವಿಕೆಟ್‌ ನಷ್ಟಕ್ಕೆ 185 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದರು. ಕ್ರಿಕೆಟಿಗ ರನ್ 13 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿ ಒಳಗೊಂಡ ಅಜೇಯ 44 ರನ್‌ ಗಳನ್ನು ಗಳಿಸಿದರು. ಇವರಲ್ಲದೆ, ಪ್ರೇರಕ್ ಮಂಕಡ್ ಅಜೇಯ 64 ರನ್ ಗಳಿಸಿ ಅರ್ಧಶತಕ ಸಿಡಿಸಿದರು. ಅವರ ಇನ್ನಿಂಗ್ಸ್‌ ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ಮಾರ್ಕಸ್ ಸ್ಟೊಯಿನಿಸ್ ಕೂಡ 40 ರನ್ ಗಳಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News