ಆಧಾರ್ ಕಾರ್ಡ್ ಅಸಲಿಯೇ ಅಥವಾ ನಕಲಿಯೇ- ಈ ರೀತಿ ಪರಿಶೀಲಿಸಿ:   ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಎಷ್ಟು ಮುಖ್ಯ ಎಂದರೆ ಪ್ರತಿಯೊಬ್ಬರ ವ್ಯಾಲೆಟ್‌ನಲ್ಲಿ ಹಣದ ಜೊತೆಗೆ ಸದಾ ಐಡಿ ಪ್ರೂಫ್ ಆಗಿ ಆಧಾರ್ ಕಾರ್ಡ್ ಅನ್ನು ಹೊಂದಿರುತ್ತಾರೆ. ಬ್ಯಾಂಕಿಂಗ್ ಸಂಬಂಧಿತ ಯಾವುದೇ ಕೆಲಸದಿಂದ ಹಿಡಿದು ದುಬಾರಿ ವಸ್ತುಗಳನ್ನು ಕೊಳ್ಳಲು, ಕೆಲಸಕ್ಕೆ ಸೇರಲು ಬಹುತೇಕ ಎಲ್ಲಾ ಕಡೆಗಳಲ್ಲೂ ಆಧಾರ್ ಕಾರ್ಡ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹೀಗಿರುವಾಗ ನಮ್ಮ ಬಳಿ ಇರುವ ಆಧಾರ್ ಕಾರ್ಡ್  ಅಸಲಿಯೇ ಅಥವಾ ನಕಲಿಯೇ ಎಂದು ತಿಳಿದಿರುವುದು ಕೂಡ ತುಂಬಾ ಅಗತ್ಯ. 


COMMERCIAL BREAK
SCROLL TO CONTINUE READING

ಆಧಾರ್ ಕಾರ್ಡ್ ಬಳಕೆ:
ಆಧಾರ್ ಕಾರ್ಡ್ ಅನ್ನು ಸಾಮಾನ್ಯವಾಗಿ  ನಮ್ಮ ಐಡಿ ಪುರಾವೆಯಾಗಿ ಬಳಸಲಾಗುತ್ತದೆ. ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ದೇಶದ ಪ್ರತಿಯೊಬ್ಬ ನಾಗರಿಕರು ಆಧಾರ್ ಕಾರ್ಡ್ ಹೊಂದಿರುವುದು ಅವಶ್ಯಕ. ನಾವು ವಿವಿಧ ಸ್ಥಳಗಳಲ್ಲಿ ಪರಿಶೀಲನೆಯೊಂದಿಗೆ ಆಧಾರ್ ಕಾರ್ಡ್ ಮೂಲಕ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬಹುದು. ಕಛೇರಿಯಲ್ಲಿ ಒಬ್ಬರಿಗೆ ಕೆಲಸ ಕೊಡುವಾಗ, ಯಾರಿಗಾದರೂ ಬಾಡಿಗೆ ಮನೆ ಕೊಡಲು ಹೀಗೆ ಅನೇಕ ಕಡೆ ಆಧಾರ್ ಕಾರ್ಡ್ ಬೇಕೇ ಬೇಕು. ಇಂತಹ ಸಂದರ್ಭದಲ್ಲಿ ನಕಲಿ ಆಧಾರ್ ಕಾರ್ಡ್ ಹಾವಳಿ ಕೂಡ ಹೆಚ್ಚಾಗಿದೆ. ಆದರೆ, ಇಂತಹ ನಕಲಿ ಆಧಾರ್ ಕಾರ್ಡ್ ಗಳನ್ನು ಪತ್ತೆ ಹಚ್ಚಲು ಕೆಲವು ಸುಲಭ ಉಪಾಯಗಳೂ ಇವೆ. 


ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಕಾರ್ಡ್ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಸುಲಭವಾಗಿ ಪರಿಶೀಲಿಸಲು ಕೆಲವು ತಂತ್ರಗಳನ್ನು ನೀಡಿದೆ.   ಇಂದು ನಾವು ನಿಮಗೆ ಅಂತಹ ಎರಡು ಪ್ರಮುಖ ತಂತ್ರಗಳ ಬಗ್ಗೆ ಹೇಳಲಿದ್ದೇವೆ, ಅದರ ಮೂಲಕ ನೀವು ಆಧಾರ್ ಕಾರ್ಡ್ ಅಸಲಿಯೇ ಅಥವಾ ನಕಲಿಯೇ ಎಂದು ಪರಿಶೀಲಿಸಲು ಸಾಧ್ಯವಾಗುತ್ತದೆ.


ಇದನ್ನೂ ಓದಿ- Aadhaar-Ration Link : ಪಡಿತರ ಚೀಟಿ ಫಲಾನುಭವಿಗಳಿಗೆ ಸಿಹಿಸುದ್ದಿ! ಕೇಂದ್ರ ಸರ್ಕಾರ ಮಹತ್ವದ ಘೋಷಣೆ!


ಆಧಾರ್ ಕಾರ್ಡ್ ಅಸಲಿಯೇ ಅಥವಾ ನಕಲಿಯೇ ಎಂದು ಪರಿಶೀಲಿಸಲು ಆಫ್‌ಲೈನ್ ಮಾರ್ಗ :
ಆಧಾರ್ ಕಾರ್ಡ್ ಅನ್ನು ಆಫ್‌ಲೈನ್‌ನಲ್ಲಿ ಪರಿಶೀಲಿಸಲು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಆ್ಯಪ್ ಅನ್ನು ಡೌನ್‌ಲೋಡ್ ಮಾಡಬೇಕು, ಅದಕ್ಕೆ ಆಧಾರ್ ಕ್ಯೂಆರ್ ಸ್ಕ್ಯಾನರ್ ಎಂದು ಹೆಸರಿಸಲಾಗಿದೆ. ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ಪ್ಲಾಟ್‌ಫಾರ್ಮ್‌ಗಳಿಂದ ಡೌನ್‌ಲೋಡ್ ಮಾಡಬಹುದು. ಪ್ರತಿಯೊಂದು ಆಧಾರ್ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ ಇರುತ್ತದೆ. ಈ ಕೋಡ್ ವ್ಯಕ್ತಿಯ ಹೆಸರು, ಲಿಂಗ, ಹುಟ್ಟಿದ ದಿನಾಂಕ, ವಿಳಾಸ ಮತ್ತು ಭಾವಚಿತ್ರವನ್ನು ಒಳಗೊಂಡಿದೆ. ಈ ಆ್ಯಪ್ ಮೂಲಕ ಈ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಆಧಾರ್ ಕಾರ್ಡ್ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಚಿಟಿಕೆಯಲ್ಲಿ ಕಂಡುಹಿಡಿಯಬಹುದು. 


ಇದನ್ನೂ ಓದಿ- Aadhar Card New Rules: ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಹೊಸ ಅಡ್ವೈಸರಿ ಜಾರಿಗೊಳಿಸಿದ ಸರ್ಕಾರ, ಈಗಲೇ ತಿಳಿದುಕೊಳ್ಳಿ


ಆಧಾರ್ ಕಾರ್ಡ್ ಅಸಲಿಯೇ ಅಥವಾ ನಕಲಿಯೇ ಎಂದು ಆನ್‌ಲೈನ್‌ನಲ್ಲಿಯೂ ಪರಿಶೀಲಿಸಬಹುದು:
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ನೀವು ಬಯಸದಿದ್ದರೂ ಸಹ, ನೀವು ಇನ್ನೂ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಬಹುದು. ಆನ್‌ಲೈನ್ ತಪಾಸಣೆಗಾಗಿ, ನೀವು ಪರಿಶೀಲಿಸಲು ಬಯಸುವ ಆಧಾರ್ ಕಾರ್ಡ್‌ನ ಸಂಖ್ಯೆಯನ್ನು ಮಾತ್ರ ನೀವು ಹೊಂದಿರಬೇಕು. ನಿಮ್ಮ ಫೋನ್ ಅಥವಾ ಯಾವುದೇ ಇತರ ಸಾಧನದಲ್ಲಿ ನೀವು ಈ ಲಿಂಕ್ ಅನ್ನು 'https://myaadhaar.uidai.gov.in/verifyAadhar ' ಅನ್ನು ತೆರೆಯಬೇಕು.ಮುಂದೆ ತೆರೆಯುವ ವಿಂಡೋದಲ್ಲಿ, ನೀವು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ಈ ರೀತಿಯಾಗಿ, ನೀವು ವ್ಯಕ್ತಿಯ ವಯಸ್ಸು, ಅವನ ಲಿಂಗ, ಅವನು ವಾಸಿಸುವ ರಾಜ್ಯ ಮತ್ತು ಅವನ ಮೊಬೈಲ್ ಸಂಖ್ಯೆಯ ಕೊನೆಯ ಮೂರು ಅಂಕೆಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.