Affordable AC : ಬೇಸಿಗೆ ಕಾಲದಲ್ಲಿ ಬಿಸಿಲಿನ ಬೇಗೆ ಎದುರಿಸಬೇಕಾಗುತ್ತದೆ. ಕೆಲವೆಡೆ ಮಳೆ ಸುರಿಯುತ್ತಿದ್ದರೂ ಇನ್ನೂ ಅನೇಕ ಕಡೆಗಳಲ್ಲಿ ಸೂರ್ಯ ನೆತ್ತಿ ಸುಡುತ್ತಿದ್ದಾನೆ. ಇಂಥಹ ವಾತಾವರಣದಲ್ಲಿ ಮನೆಯಿಂದ ಹೊರ ಹೋಗಿದ್ದರೆ ಒಮ್ಮೆ ಮನೆಯೊಳಗೆ ಹೊಕ್ಕು  ತಂಪು ಗಾಳಿಯ ಕೆಳಗೆ ಕುಳಿತುಕೊಳ್ಳುವ ಅನ್ನಿಸುತ್ತಿರುತ್ತದೆ. ಹೀಗೆ ತಂಪು ಗಾಳಿ ಸಿಗುವುದು ಕೂಲರ್ ಮತ್ತು ಎಸಿಯಿಂದ ಮಾತ್ರ. ಆದರೆ ಇವೆರಡೂ ಬಲು ದುಬಾರಿ. ಹಾಗಾಗಿ ಎಲ್ಲರಿಗೂ ಇದನ್ನೂ ಖರೀದಿಸುವುದು ಸಾಧ್ಯವಾಗುವುದಿಲ್ಲ. ಇನ್ನು ಅಗ್ಗದ ಬೆಲೆಯ ಎಸಿಯನ್ನು ನೀವು ಹುಡುಕುತ್ತಿದ್ದರೆ ನಿಮ್ಮ ಹುಡುಕಾಟ ಕೊನೆಯಾಗಲಿದೆ. ಸಾವಿರ ರೂಪಾಯಿಗಿಂತಲೂ ಕಡಿಮೆ ಬೆಲೆಯ ಈ ಪೋರ್ಟಬಲ್ ಏರ್ ಕಂಡಿಷನರ್ ನಿಮಗೆ ಸೆಕೆಯಿಂದ ಮುಕ್ತಿ ನೀಡಬಲ್ಲದು. ಅಮೆಜಾನ್‌ ಮೂಲಕ ಈ  ಪೋರ್ಟಬಲ್ ಏರ್ ಕಂಡಿಷನರ್ ಅನ್ನು ಖರೀದಿಸಬಹುದು. ಇದರ ಬೆಲೆ  ಕೇವಲ 990 ರೂಪಾಯಿ. 


COMMERCIAL BREAK
SCROLL TO CONTINUE READING

ಭಾರತದಲ್ಲಿ ಮಿನಿ ಕೂಲರ್ ಬೆಲೆ : 
ಇದನ್ನು ಮಿನಿ ಕೂಲರ್ ಎಂದು ಕರೆಯಲಾಗುತ್ತದೆ. ಇದನ್ನು ಮನೆ, ಕಚೇರಿ ಅಥವಾ ಸಣ್ಣ ಕೋಣೆಯಲ್ಲಿ ಸುಲಭವಾಗಿ ಬಳಸಬಹುದು. ಈ ಪೋರ್ಟಬಲ್ ಏರ್ ಕಂಡಿಷನರ್ ಮೂರು ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಎಸಿಯಾಗಿ, ಕೂಲರ್ ಆಗಿ ಮತ್ತು ಹ್ಯುಮಿಡಿಫೈಯರ್ ಆಗಿ  ಕಾರ್ಯನಿರ್ವಹಿಸುತ್ತದೆ. ಈ ಪೋರ್ಟಬಲ್ ಕೂಲಿಂಗ್ ಸಾಧನದ ನಿಜವಾದ ಬೆಲೆ 1,999, ರೂಪಾಯಿ. ಆದರೆ Amazon ನಲ್ಲಿ ಈ ಪೋರ್ಟಬಲ್ ಏರ್ ಕಂಡಿಷನರ್  990 ರೂಪಾಯಿಗೆ ಲಭ್ಯವಿದೆ.


ಇದನ್ನೂ ಓದಿ : ಇನ್ನು ಚಾಲಕ ರೈಡ್ ಕ್ಯಾನ್ಸಲ್ ಮಾಡುವಂತಿಲ್ಲ : ola ಇಂದಿನಿಂದಲೇ ಆರಂಭಿಸಿದೆ Premium Plus Service


ಮಿನಿ ಕೂಲರ್  ವಿಶೇಷತೆಗಳು : 
ಈ ಮಿನಿ ಕೂಲರ್‌ನ ಒಂದು ವಿಶಿಷ್ಟ ವೈಶಿಷ್ಟ್ಯವೆಂದರೆ ಅದನ್ನು ಬಳಸುವುದು ತುಂಬಾ ಸರಳವಾಗಿದೆ. ನಿಮ್ಮ ಆಯ್ಕೆಯ ಪ್ರಕಾರ ಅದನ್ನು ನೀವು ಎಲ್ಲಿ ಬೇಕಾದರೂ ಇರಿಸಬಹುದು. ನೀವು ಅದರಲ್ಲಿ ತಣ್ಣೀರನ್ನು ಹಾಕಬಹುದು. ಈ ನೀರು ಮೇಲಿನಿಂದ ಸಪ್ಲೈ ಆಗುತ್ತದೆ. ಎನರ್ಜಿ ಕಾನ್ವರ್ಶನ್ ಎಫಿಶಿಯನ್ಸಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಬೇಸಿಗೆಯ ತಿಂಗಳುಗಳಲ್ಲಿ 90 ಪ್ರತಿಶತದಷ್ಟು ವಿದ್ಯುತ್ ಅನ್ನು ಉಳಿಸಲು ಅನುವು ಮಾಡಿಕೊಡುತ್ತದೆ. ಎನರ್ಜಿ ಕಾನ್ವರ್ಶನ್ ಎಫಿಶಿಯನ್ಸಿ ಕಡಿಮೆ ಬಜೆಟ್  ಹೊಂದಿರುವವರಿಗೆ ಉತ್ತಮ ಆಯ್ಕೆಯಾಗಿದೆ. 


ಈ ಮಿನಿ ಕೂಲರ್ ಮೂರು ಮೋಡ್‌ಗಳೊಂದಿಗೆ ಬರುತ್ತದೆ. ಲೋ, ಮೀಡಿಯಂ ಮತ್ತು ಹೈ ಎನ್ನುವ ಮೂರು ಮೋಡ್‌ಗಳಲ್ಲಿ ಇದು ಖರೀದಿಗೆ ಲಭ್ಯವಿದೆ.  ಇದರ ಮೂಲಕ ಬಳಕೆದಾರರು ತಮ್ಮ ಆದ್ಯತೆಗಳು ಮತ್ತು ಚಾಲ್ತಿಯಲ್ಲಿರುವ ತಾಪಮಾನದ ಆಧಾರದ ಮೇಲೆ ಕೂಲಿಂಗ್ ಅನುಭವವನ್ನು ಕಸ್ಟಮೈಸ್ ಮಾಡುವುದು ಸಾಧ್ಯವಾಗುತ್ತದೆ.  ಹೆಚ್ಚುವರಿಯಾಗಿ,  ಸಾಫ್ಟ್ ಎಲ್ಇಡಿ ಲೈಟ್ ಗಳನ್ನು ನೀಡಲಾಗಿದೆ. ಇದು ಈ ಪೋರ್ಟಬಲ್ ಏರ್ ಕಂಡಿಷನರ್ ವಿನ್ಯಾಸವನ್ನು ಇನ್ನಷ್ಟು ಅದ್ಭುತವಾಗಿಸುತ್ತದೆ. 


ಇದನ್ನೂ ಓದಿ : WhatsApp ಮೂಲಕ ಮೆಟ್ರೊ ಟಿಕೆಟ್ ಬುಕಿಂಗ್, ಕೌಂಟರ್ ಬಳಿ ಸರದಿಯಲ್ಲಿ ನಿಲ್ಲಬೇಕಾಗಿಲ್ಲ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.