ಮಕ್ಕಳಿಗೂ ಆಧಾರ್ ಮಾಡುವುದು ಕಡ್ದಾಯ ! ಕುಳಿತಲ್ಲಿಂದಲೇ Apply ಮಾಡಿ

How to apply for Baal Aadhaar Card:  ಪೋಷಕರ ಆಧಾರ್ ಅನ್ನು ಆಧರಿಸಿ ಮಕ್ಕಳ ಆಧಾರ್ ಕಾರ್ಡ್ ಅನ್ನು ಮಾಡಿಸಲಾಗುತ್ತದೆ. ಅಂದರೆ ಇದಕ್ಕಾಗಿ ಬೆರಳಚ್ಚು ಮತ್ತು ಇತರ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ.

Written by - Ranjitha R K | Last Updated : May 29, 2023, 04:02 PM IST
  • ಪ್ರತಿಯೊಬ್ಬರು ಆಧಾರ್ ಕಾರ್ಡ್ ಹೊಂದಿರುವುದು ಅಗತ್ಯ.
  • ಬಾಲ ಆಧಾರ್ ಕಾರ್ಡ್ ಮಾಡಿಸಬೇಕಾಗಿರುವುದು ಅಗತ್ಯವಾಗಿದೆ.
  • ಬೆರಳಚ್ಚು ಮತ್ತು ಇತರ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ
ಮಕ್ಕಳಿಗೂ ಆಧಾರ್ ಮಾಡುವುದು ಕಡ್ದಾಯ ! ಕುಳಿತಲ್ಲಿಂದಲೇ   Apply ಮಾಡಿ  title=

How to apply for Baal Aadhaar Card: ಪ್ರತಿಯೊಬ್ಬರು ಆಧಾರ್ ಕಾರ್ಡ್ ಹೊಂದಿರುವುದು ಅಗತ್ಯ. ಪ್ರತಿ ಮಗುವಿನ ಹೆಸರಿನಲ್ಲಿ ಬಾಲ ಆಧಾರ್ ಕಾರ್ಡ್ ಮಾಡಿಸಬೇಕಾಗಿರುವುದು ಅಗತ್ಯವಾಗಿರುತ್ತದೆ. ಶಿಶುವಿನ ಜನನವಾಗುತ್ತಲೇ ಬಾಲ ಆಧಾರ್ ಕಾರ್ಡ್ ಅನ್ನು ಪಡೆಯಬಹುದು. ಸಾಮಾನ್ಯ ಆಧಾರ್ ಕಾರ್ಡ್‌ಗೆ ಹೋಲಿಸಿದರೆ ಮಕ್ಕಳ ಆಧಾರ್ ಕಾರ್ಡ್‌ ಮಾಡಿಸಲು ಕಡಿಮೆ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಪೋಷಕರ ಆಧಾರ್ ಅನ್ನು ಆಧರಿಸಿ ಮಕ್ಕಳ ಆಧಾರ್ ಕಾರ್ಡ್ ಅನ್ನು ಮಾಡಿಸಲಾಗುತ್ತದೆ. ಅಂದರೆ, ಇದಕ್ಕಾಗಿ ಬೆರಳಚ್ಚು ಮತ್ತು ಇತರ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ.

ಈ ದಾಖಲೆಗಳಿದ್ದರೆ  ಸಾಕು : 
ಮಕ್ಕಳ ಆಧಾರ್ ಕಾರ್ಡ್‌ ಅಥವಾ ಬಾಲ ಆಧಾರ್ ಕಾರ್ಡ್ ಮಾಡಿಸಲು   ಮಗುವಿನ ಆಸ್ಪತ್ರೆಯ ಡಿಸ್ಚಾರ್ಜ್ ಸ್ಲಿಪ್ ಅಥವಾ ಜನನ ಪ್ರಮಾಣಪತ್ರ ಅಗತ್ಯವಿದೆ. ಇದಲ್ಲದೆ, ಮಗು ಶಾಲೆಗೆ ಹೋಗಲು ಪ್ರಾರಂಭಿಸಿದರೆ, ಶಾಲೆಯ ಗುರುತಿನ ಚೀಟಿಯನ್ನು ಸಹ ಒದಗಿಸಬೇಕಾಗುತ್ತದೆ. ಒಟ್ಟಿನಲ್ಲಿ ಮಕ್ಕಳ ಆಧಾರ್ ಕಾರ್ಡ್‌ ಮಾಡಿಸಲು ಈ ಎರಡು ದಾಖಲೆಗಳು ಅಗತ್ಯವಾಗಿವೆ.

ಇದನ್ನೂ ಓದಿ : AC Bed Sheet: ಎಸಿ ಗೊತ್ತು.. ಎಸಿ ಬೆಡ್‌ಶೀಟ್ ಬಗ್ಗೆ ಕೇಳಿದ್ದೀರಾ? ಕೇವಲ ರೂ.699!

ಬಾಲ ಆಧಾರ್ ಕಾರ್ಡ್ ಅನ್ನು ಅಪ್ಲೈ ಮಾಡುವುದು ಹೇಗೆ ? : 
ಮಕ್ಕಳ ಆಧಾರ್ ಕಾರ್ಡ್ ಪಡೆಯಲು, ಮಗುವಿನ ಜನನ ಪ್ರಮಾಣಪತ್ರವನ್ನು ಹೊಂದಿರುವುದು ಅವಶ್ಯಕ. ಅಲ್ಲದೆ, ಮಕ್ಕಳ ಆಧಾರ್ ಕಾರ್ಡ್ ಅನ್ನು 'ಬ್ಲೂ ಆಧಾರ್ ಕಾರ್ಡ್' ಎಂದೂ ಕರೆಯುವುದರಿಂದ ಪೋಷಕರ ಆಧಾರ್ ಕಾರ್ಡ್‌ನ ವಿವರಗಳನ್ನು ಒದಗಿಸಬೇಕಾಗುತ್ತದೆ. 

ಬಾಲ ಆಧಾರ್ ಕಾರ್ಡ್  ಅಪ್ಲೈ ಮಾಡಿಸುವ ವಿಧಾನ ಹೀಗಿದೆ : 
1.UIDAIನ ಅಧಿಕೃತ ವೆಬ್‌ಸೈಟ್uidai.gov.inಗೆ ಹೋಗಿ
2. ನೋಂದಣಿಗಾಗಿ, "Aadhaar Card registration"  ಮೇಲೆ ಕ್ಲಿಕ್ ಮಾಡಿ.
3. ಹೆಸರು, ಪೋಷಕರ ಫೋನ್ ಸಂಖ್ಯೆ ಮತ್ತು ಬಯೋಮೆಟ್ರಿಕ್ ಡೇಟಾದಂತಹ ಮಗುವಿನ ಮಾಹಿತಿಯನ್ನು ಪೋಷಕರು ಒದಗಿಸಬೇಕು.
4. ಮನೆ ವಿಳಾಸ, ಸಮುದಾಯ, ರಾಜ್ಯ ಮುಂತಾದ ಇತರ ಮಾಹಿತಿಯನ್ನು  ಫಾರಂ ನಲ್ಲಿ ಭರ್ತಿ ಮಾಡಬೇಕು. 
5. ಮುಂದಿನ ಪ್ರಕ್ರಿಯೆಗಾಗಿ, UIDAI ಕೇಂದ್ರಕ್ಕೆ ಭೇಟಿ ನೀಡಬೇಕು.
6.UIDAI ಕೇಂದ್ರದಲ್ಲಿ, ಮಗುವಿನ ಸಂಪೂರ್ಣ ವಿವರಗಳನ್ನು  ಸಲ್ಲಿಸಬೇಕು. ಇದರ ನಂತರ ಮಗುವಿನ ಆಧಾರ್ ಕಾರ್ಡ್ ಮಾಡಲಾಗುವುದು.

ಇದನ್ನೂ ಓದಿ ಸದ್ದಿಲ್ಲದೇ ಹೊಸ ಕಾರು ಲಾಂಚ್ ಮಾಡಿದ ಮಹೀಂದ್ರ ! ಬೆಲೆಯೂ ಕಡಿಮೆ ಫೀಚರ್ಸ್ ಕೂಡಾ ಅದ್ಭುತ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News