Affordable Cars: ಭಾರತದಲ್ಲಿ ಹಲವು ಎಸ್‌ಯುವಿಗಳು, ಪ್ರೀಮಿಯಂ ಕಾರುಗಳು ಲಭ್ಯವಿವೆ. ಆದಾಗ್ಯೂ,  ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯ ಪ್ರಮುಖ ಭಾಗವಾಗಿರುವ ಕೈಗೆಟುಕುವ ಹ್ಯಾಚ್‌ಬ್ಯಾಕ್‌ಗಳು ಮತ್ತು ಸೆಡಾನ್‌ಗಳು ಪುಟ್ಟ ಬಜೆಟ್ ಫ್ರೆಂಡ್ಲಿ ಕಾರುಗಳು ತುಂಬಾ ಜನಪ್ರಿಯವಾಗಿವೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಪ್ರತಿಯೊಬ್ಬರಿಗೂ ತಾವೂ  ಸಹ ಒಂದು ಪುಟ್ಟ ಕಾರ್ ಆದರೂ ಹೊಂದಿರಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ಆದರೆ, ಬಜೆಟ್ ಕಾರಣದಿಂದಾಗಿ ಎಲ್ಲರಿಗೂ ಕಾರುಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ನೀವೂ ಕೂಡ ಸ್ವಂತ ಕಾರನ್ನು ಖರೀದಿಸುವ ಬಗ್ಗೆ ಚಿಂತಿಸುತ್ತಿದ್ದರೆ 10 ಲಕ್ಷ ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ಕೈಗೆಟುಕುವ ದರದಲ್ಲಿ  ಲಭ್ಯವಿರುವ ಬಜೆಟ್ ಫ್ರೆಂಡ್ಲಿ ಕಾರುಗಳ ಬಗ್ಗೆ ಇಲ್ಲಿದೆ ಮಾಹಿತಿ. 


ಇದನ್ನೂ ಓದಿ- ಹೊರ ಬಿತ್ತು Maruti Jimny ಬೆಲೆ ! ಕೈಗೆಟಕುವ ದರದಲ್ಲಿ ಸೂಪರ್ ಸ್ಪೆಷಲ್ ಕಾರ್


10ಲಕ್ಷ ರೂ.ಗಳಿಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಬಜೆಟ್ ಫ್ರೆಂಡ್ಲಿ ಕಾರುಗಳಿವು: 
* ಮಾರುತಿ ಸುಜುಕಿ ಆಲ್ಟೊ (Maruti Suzuki Alto):

ಭಾರತದಲ್ಲಿ ಅತಿ ಅತ್ಯಂತ ಅಗ್ಗದ ದರದಲ್ಲಿ ಲಭ್ಯವಿರುವ ಕಾರ್ ಎಂದರೆ ಅದು ಮಾರುತಿ ಸುಜುಕಿ ಆಲ್ಟೊ. ಇದರ ಬೆಲೆ ಸುಮಾರು 3.99 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. 


* ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR): 
ಮಾರುತಿ ಸುಜುಕಿ ವ್ಯಾಗನ್ಆರ್ ಕಾರಿನ ಬೆಲೆ 5.54 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. 


* ಟಾಟಾ ಟಿಯಾಗೊ (Tata Tiago):
ಟಾಟಾ ಟಿಯಾಗೊ ಕಾರಿನ ಎಕ್ಸ್ ಶೋ ರೂಂ ಬೆಲೆ  5.54 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. 


* ಹ್ಯುಂಡೈ ಗ್ರಾಂಡ್ ಐ10 ನಿಯೋಸ್ (Hyundai Grand i10 Nios):
ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರಿನ ಬೆಲೆ 5.73 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. 


* ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift):
ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಬೆಲೆ 5.99 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. 


* ಟಾಟಾ ಪಂಚ್‌ (Tata Punch): 
ಜನಪ್ರಿಯ ಟಾಟಾ ಪಂಚ್‌ ಕಾರ್ ಕೂಡ ಹೆಚ್ಚು ಕಡಿಮೆ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಬೆಲೆಯಲ್ಲಿಯೇ ಲಭ್ಯವಾಗುತ್ತದೆ. 


* ರೆನಾಲ್ಟ್ ಟ್ರೈಬರ್ (Renault Triber):
ರೆನಾಲ್ಟ್ ಟ್ರೈಬರ್ ಕಾರಿನ ಬೆಲೆ ಸುಮಾರು 6.33 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. 


* ಮಾರುತಿ ಸುಜುಕಿ ಡಿಜೈರ್ (Maruti Suzuki Dzire):
ಮಾರುತಿ ಸುಜುಕಿ ಡಿಜೈರ್ ಕಾರಿನ ಮೌಲ್ಯ ಸುಮಾರು 6.51 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. 


* ಮಾರುತಿ ಸುಜುಕಿ ಬಲೆನೊ (Maruti Suzuki Baleno):
ಮಾರುತಿ ಸುಜುಕಿ ಬಲೆನೊ ಕಾರಿನ ಎಕ್ಸ್ ಶೋರೂಂ ಬೆಲೆ 6.61 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. 


* ಮಹೀಂದ್ರ ಬೊಲೆರೊ ನಿಯೋ (Mahindra Bolero Neo):
ಮಹೀಂದ್ರ ಬೊಲೆರೊ ನಿಯೋ ಕಾರ್ ನ ಎಕ್ಸ್ ಶೋರೂಂ ಬೆಲೆ 9.63 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. 


ಇದನ್ನೂ ಓದಿ- 1 ವರ್ಷದಲ್ಲಿ 21 ಲಕ್ಷಕ್ಕೂ ಹೆಚ್ಚು ಮಾರಾಟ; ಅಮೋಘ ವೈಶಿಷ್ಟ್ಯವುಳ್ಳ ಸೂಪರ್-ಡೂಪರ್ ಸ್ಕೂಟಿ! ಬೆಲೆ ಕೂಡ ಭಾರೀ ಅಗ್ಗ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.