ಅಗ್ಗದ ದರದಲ್ಲಿ Airtelನ ಎರಡು ಯೋಜನೆಗಳು, ಸಿಗಲಿವೆ ಈ ಸೌಲಭ್ಯ
200 ರೂಪಾಯಿಗಿಂತ ಕಡಿಮೆ ಇರುವ ಏರ್ಟೆಲ್ನ ಎರಡು ಯೋಜನೆಗಳಲ್ಲಿ ಉಚಿತ ಕರೆ ಪ್ರಯೋಜನಗಳು ಲಭ್ಯವಿದೆ.
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕರೋನಾ ಯುಗದಲ್ಲಿ ನಮಗೆ ಹೆಚ್ಚಿನ ಡೇಟಾ ಮತ್ತು ಉಚಿತ ಕರೆ ಸೌಲಭ್ಯವಿರುವ ರೀಚಾರ್ಜ್ ಪ್ಲಾನ್ ಗಳನ್ನು ನೋಡುತ್ತೇವೆ. ಇದರಿಂದ ನಾವು ಮನೆಯಲ್ಲಿಯೇ ಇದ್ದು ನಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಮಾತನಾಡಬಹುದು. ಇಲ್ಲಿ ನಾವು ಅಂತಹ ಎರಡು ಯೋಜನೆಗಳ ಬಗ್ಗೆ ತಿಳಿಸಲಿದ್ದೇವೆ. ಏರ್ಟೆಲ್ ತನ್ನ ಗ್ರಾಹಕರಿಗೆ ಅನೇಕ ರೀತಿಯ ಉತ್ತಮ ಯೋಜನೆಗಳನ್ನು ನೀಡುತ್ತದೆ. ಅವುಗಳಲ್ಲಿ ಹಲವು ರೀತಿಯ ಪ್ರಯೋಜನಗಳನ್ನು ನೀಡಲಾಗುತ್ತದೆ. ಇದೀಗ ಏರ್‌ಟೆಲ್ (Airtel) 200 ರೂಪಾಯಿಗಳಿಗಿಂತ ಕಡಿಮೆ ದರದಲ್ಲಿ 2 ಪ್ಲಾನ್ ಪರಿಚಯಿಸಿದೆ. ಇದರಲ್ಲಿ ಡೇಟಾ ಮತ್ತು ಉಚಿತ ಕರೆಗಳಂತಹ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಆ ಎರಡು ಯೋಜನೆಗಳು ಯಾವುವು ಎಂದು ತಿಳಿಯೋಣ ...
179 ರೂ. ಯೋಜನೆ:
ಏರ್ಟೆಲ್ನ 179 ರೂ. ರೀಚಾರ್ಜ್‌ನಲ್ಲಿ ಗ್ರಾಹಕರಿಗೆ ಡೇಟಾ ಜೊತೆಗೆ ಉಚಿತ ಕರೆ ಸೌಲಭ್ಯವನ್ನು ನೀಡಲಾಗುತ್ತದೆ. ಈ ಅಗ್ಗದ ಯೋಜನೆಯ ಸಿಂಧುತ್ವವು 28 ದಿನಗಳು. ಇದರಲ್ಲಿ 2 ಜಿಬಿ ಡೇಟಾವನ್ನು ನೀಡಲಾಗಿದೆ. ಜೊತೆಗೆ ಅನಿಯಮಿತ ಉಚಿತ ಕರೆ (Free Call) ಸೌಲಭ್ಯವನ್ನು ನೀಡಲಾಗಿದೆ. ಇದರಲ್ಲಿ 300 ಎಸ್‌ಎಂಎಸ್‌ನ ಪ್ರಯೋಜನವನ್ನು ಸಹ ನೀಡಲಾಗುತ್ತದೆ.
Airtel, Jio, Vi, BSNL ಪ್ರಿಪೇಯ್ಡ್ ಗ್ರಾಹಕರಿಗೆ ಬಂಪರ್ ಕೊಡುಗೆ
ಈ ಯೋಜನೆಯ ಹೆಚ್ಚುವರಿ ಪ್ರಯೋಜನಗಳ ಬಗ್ಗೆ ಹೇಳುವುದಾದರೆ 179 ರೂ.ಗಳ ಈ ರೀಚಾರ್ಜ್ ಯೋಜನೆಯಲ್ಲಿ, ಗ್ರಾಹಕರಿಗೆ ಭಾರ್ತಿ ಎಎಕ್ಸ್‌ಎ ಲೈಫ್‌ನಿಂದ 2 ಲಕ್ಷ ರೂ.ಗಳ ಟರ್ಮ್ ಲೈಫ್ ಇನ್ಸೂರೆನ್ಸ್ ಸಹ ನೀಡಲಾಗುತ್ತದೆ. ಅಲ್ಲದೆ ಉಚಿತ ಹೆಲೋಟೂನ್ಸ್, ವಿಂಕ್ ಮ್ಯೂಸಿಕ್ ಮತ್ತು ಏರ್ಟೆಲ್ ಎಕ್ಸ್‌ಸ್ಟ್ರೀಮ್ ಚಂದಾದಾರಿಕೆ ಕೂಡ ಲಭ್ಯವಿದೆ.
Airtel, VI, Jio ಜಬರ್ದಸ್ತ್ ಪ್ರಿಪೇಯ್ಡ್ offers, ಪ್ರತಿದಿನ ಪಡೆಯಿರಿ 2GBಗಿಂತ ಹೆಚ್ಚಿನ DATA
199 ರೂ. ಯೋಜನೆ:
ಏರ್ಟೆಲ್ನ 199 ರೂ. ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರು ಪ್ರತಿದಿನ 1 ಜಿಬಿ ಡೇಟಾ (DATA)ವನ್ನು ಪಡೆಯುತ್ತಾರೆ. ಈ ಯೋಜನೆಯ ಸಿಂಧುತ್ವವು 24 ದಿನಗಳು. ಅನಿಯಮಿತ ಕರೆ ಮತ್ತು ಪ್ರತಿದಿನ 100 ಎಸ್‌ಎಂಎಸ್ ಸಹ ಇದರಲ್ಲಿ ಸಿಗುತ್ತದೆ. ಹೆಚ್ಚುವರಿಯಾಗಿ ಇದರಲ್ಲಿ ಗ್ರಾಹಕರಿಗೆ ಉಚಿತ ಹೆಲೋಟೂನ್ಸ್, ವಿಂಕ್ ಮ್ಯೂಸಿಕ್ ಮತ್ತು ಏರ್ಟೆಲ್ ಎಕ್ಸ್‌ಸ್ಟ್ರೀಮ್‌ಗೆ ಪ್ರವೇಶವನ್ನು ನೀಡಲಾಗುತ್ತದೆ.