ಗ್ರಾಹಕರಿಗಾಗಿ ಕೇವಲ 26 ರೂ. ರಿಚಾರ್ಜ್ ಪ್ಲಾನ್ ಪರಿಚಯಿಸಿದ ಏರ್‌ಟೆಲ್..!
Airtel Cheapest Plans: ನೀವು ಏರ್‌ಟೆಲ್ ಗ್ರಾಹಕರಾಗಿದ್ದು ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಹುಡುಕುತ್ತಿದ್ದರೆ ಇಲ್ಲಿದೆ ಗುಡ್ ನ್ಯೂಸ್.
Airtel Cheapest Plans: ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ಅತ್ಯಂತ ಅಗ್ಗದ ಬೆಲೆಯ ರಿಚಾರ್ಜ್ ಯೋಜನೆಯನ್ನು ಘೋಷಿಸಿದೆ. ಹೈ-ಸ್ಪೀಡ್ ಡೇಟಾ ಸೌಲಭ್ಯದೊಂದಿಗೆ ಬರುವ ಈ ಯೋಜನೆಯ ಬೆಲೆ ಎಷ್ಟು? ಇದರ ಪ್ರಯೋಜನಗಳೇನು? ಇದು ಎಷ್ಟು ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಎಂಬ ವಿವರ ತಿಳಿಯಲು ಮುಂದೆ ಓದಿ...
ಬೆಲೆ ಕೇವಲ 26 ರೂ. ಅಷ್ಟೇ! (Airtel Affordable Plan Price):
ಏರ್‌ಟೆಲ್ ಪರಿಚಯಿಸಿರುವ ಈ ಕೈಗೆಟುಕುವ ಯೋಜನೆಯ ಬೆಲೆ ಕೇವಲ 26 ರೂ.ಗಳು ಮಾತ್ರ. ಇದಕ್ಕೆ ಕಂಪನಿಯು 'ಡೇಟಾ ಪ್ಯಾಕ್' ಎಂದು ಹೆಸರಿಸಿದೆ. ಅಸ್ತಿತ್ವದಲ್ಲಿರುವ ಟ್ರೂಲಿ ಅನ್ಲಿಮಿಟೆಡ್ ಪ್ಲಾನ್ ಜೊತೆಗೆ ಈ ಏರ್‌ಟೆಲ್ ಯೋಜನೆಯನ್ನು ಆಯ್ಕೆ ಮಾಡಬಹುದಾಗಿದೆ.
ಇದನ್ನೂ ಓದಿ- ಜಿಯೋದ 200ರೂ.ಗಿಂತಲೂ ಕಡಿಮೆ ಬೆಲೆಯ ಮೂರು ಅಗ್ಗದ ರೀಚಾರ್ಜ್ ಯೋಜನೆಗಳಿವು
1.5 GB ಹೈಸ್ಪೀಡ್ ಡೇಟಾ (1.5 GB High Speed Data):
ಉಚಿತ ಕರೆ ಪ್ರಯೋಜನವೂ ಲಭ್ಯವಿರುವ ಈ ಡೇಟಾ ಪ್ಯಾಕ್ ನಲ್ಲಿ 1.5 ಜಿಬಿ ಹೈಸ್ಪೀಡ್ ಡೇಟಾ ಸಿಗಲಿದೆ. ವಿಶೇಷವಾಗಿ ತುರ್ತು ಪರಿಸ್ಥಿತಿಯಲ್ಲಿ ಡೇಟಾ ಅಗತ್ಯವಿರುವ ಬಳಕೆದಾರರಿಗಾಗಿ ಏರ್‌ಟೆಲ್ ಈ ಯೋಜನೆಯನ್ನು ಪರಿಚಯಿಸಲಾಗಿದೆ ಎಂಬುದು ಗಮನಾರ್ಹ ವಿಷಯವಾಗಿದೆ. ಆದರಿದು ಒಂದು ದಿನ ಮಾತ್ರ ಮಾನ್ಯವಾಗಿರುತ್ತದೆ.
ಏರ್‌ಟೆಲ್ 22 ರೂ. ಡೇಟಾ ಪ್ಲಾನ್ (Airtel Rs. 22 data plan):
26 ರೂ. ಪ್ಲಾನ್ ಅಲ್ಲದೆ ಏರ್‌ಟೆಲ್ 26 ರೂ. ಡೇಟಾ ಪ್ಯಾಕ್ ಅನ್ನು ಕೂಡ ಪರಿಚಯಿಸಿದೆ. ಅಸ್ತಿತ್ವದಲ್ಲಿರುವ ಯೋಜನೆಗಳೊಂದಿಗೆ ರಿಚಾರ್ಜ್ ಮಾಡಬಹುದಾದ ಈ ಡೇಟಾ ಪ್ಯಾಕ್‌ನಲ್ಲಿ ಗ್ರಾಹಕರು 1 ಜಿಬಿ ಹೈ-ಸ್ಪೀಡ್ ಡೇಟಾ ಪ್ರಯೋಜನವನ್ನು ಪಡೆಯುತ್ತಾರೆ. ಇದರ ಮಾನ್ಯತೆ ಕೇವಲ ಒಂದು ದಿನ ಮಾತ್ರ ಆಗಿರುತ್ತದೆ.
ಇದನ್ನೂ ಓದಿ- ರಿಲಯನ್ಸ್ ಜಿಯೋ ಅಗ್ಗದ ರೀಚಾರ್ಜ್ ಪ್ಲಾನ್: 100 ರೂ.ಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ
ಡೇಟಾ ಪ್ಲಾನ್ಸ್ (Data Plans):
ಇದಲ್ಲದೆ, ಏರ್‌ಟೆಲ್ ವಿಸ್ತೃತ ವ್ಯಾಲಿಡಿಟಿಯೊಂದಿಗೆ ವಿಭಿನ್ನ ಡೇಟಾ ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ 77 ರೂ. ಯೋಕಣೆಯಲ್ಲಿ 5GB ಡೇಟಾ ಲಭ್ಯವಾದರೆ, 121 ಯೋಜನೆಯಲ್ಲಿ 6GB ಡೇಟಾದೊಂದಿಗೆ ಬರುತ್ತದೆ. ಈ ಎರಡೂ ಡೇಟಾ ಯೋಜನೆಗಳು ಬಳಕೆದಾರರ ಅಸ್ತಿತ್ವದಲ್ಲಿರುವ ಯೋಜನೆ ಮಾನ್ಯತೆಯವರೆಗೂ ಮಾನ್ಯವಾಗಿರುತ್ತವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.