Airtel Cheapest Prepaid Plan: ದೇಶದ ಅಗ್ರ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ಅಗ್ಗದ ಬೆಲೆಯ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಏರ್‌ಟೆಲ್ ಹೊಸ ಪ್ರಿಪೇಯ್ಡ್ ಪ್ಲಾನ್  6GB ಇಂಟರ್ನೆಟ್ ಡೇಟಾವನ್ನು ನೀಡುತ್ತದೆ ಮತ್ತು ದೈನಂದಿನ ಡೇಟಾ ಮಿತಿಯನ್ನು ದಾಟಿದ ನಂತರ ತಮ್ಮ ಇಂಟರ್ನೆಟ್ ಡೇಟಾವನ್ನು ತ್ವರಿತವಾಗಿ ರೀಚಾರ್ಜ್ ಮಾಡಬೇಕಾದ ಬಳಕೆದಾರರಿಗೆ ಡೇಟಾ ವೋಚರ್ ಆಗಿಯೂ ಸಹ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 


COMMERCIAL BREAK
SCROLL TO CONTINUE READING

ಗಮನಾರ್ಹವಾಗಿ, ಈ ಮೊದಲು ವೊಡಾಫೋನ್ ಐಡಿಯಾ ಟೆಲಿಕಾಂ ಕಂಪನಿಯೂ ಸಹ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಇದೇ ರೀತಿಯ ಡೇಟಾ ವೋಚರ್ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಭಾರ್ತಿ ಏರ್‌ಟೆಲ್ ಕೂಡ ಇಂತಹದ್ದೇ ಯೋಜನೆಯನ್ನು ಪರಿಚಯಿಸಿದ್ದು, ಈ ಅಗ್ಗದ ಕೈಗೆಟುಕುವ ಬೆಲೆಯ ರಿಚಾರ್ಜ್ ಯೋಜನೆಗಳು ಟೆಲಿಕಾಂ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ಬಳಕೆದಾರರಲ್ಲಿ ಅಸೂಯೆ ಹುಟ್ಟಿಸುವಂತಿವೆ. 


ಏರ್‌ಟೆಲ್ 49 ರೂ. ಪ್ರಿಪೇಯ್ಡ್ ಪ್ಲಾನ್‌ನ ಪ್ರಯೋಜನಗಳು: 
* ಏರ್‌ಟೆಲ್‌ನ ರೂ 49 ಪ್ಲಾನ್‌ನ ಮಾನ್ಯತೆಯು ಕೇವಲ 1 ದಿನ ಮಾತ್ರ.
* ಈ ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌ನಲ್ಲಿ 6GB ಡೇಟಾವನ್ನು ಒದಗಿಸಲಾಗುತ್ತದೆ
* ಆದಾಗ್ಯೂ, ಹೊಸ ಪ್ರಿಪೇಯ್ಡ್ ಪ್ಲಾನ್ ವೋಚರ್ ಒಂದು ಸ್ವತಂತ್ರ ಯೋಜನೆ ಅಲ್ಲ. ಇದಕ್ಕಾಗಿ ಕ್ರಿಯಾಶೀಲ ಯೋಜನೆ ರೂಪಿಸುವ ಅಗತ್ಯವಿದೆ ಎಂಬುದು ನೆನಪಿಡಬೇಕಾದ ಅಂಶವಾಗಿದೆ. 


ಇದನ್ನೂ ಓದಿ- WhatsApp ಹೊರತರುತ್ತಿದೆ ರೋಮಾಂಚಕ ವೈಶಿಷ್ಟ್ಯ: ಇನ್ಮುಂದೆ ಪದೇ ಪದೇ ಟೈಪ್ ಮಾಡುವ ಅವಶ್ಯಕತೆಯೇ ಇರುವುದಿಲ್ಲ


ಒಂದೊಮ್ಮೆ ಪ್ರಿಪೇಯ್ಡ್ ಬಳಕೆದಾರರು ಹೆಚ್ಚು ವ್ಯಾಲಿಡಿಟಿ ಹೊಂದಿರುವ ಪ್ಲಾನ್‌ಗೆ ಹೋಗಲು ಬಯಸಿದರೆ, ಅಂತಹವರಿಗಾಗಿ ಕಂಪನಿಯು 58 ರೂ.ಗಳ ಪ್ಲಾನ್ ಅನ್ನು ಕೂಡ ಪರಿಚಯಿಸಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ 3GB ಡೇಟಾ ಸೌಲಭ್ಯವನ್ನು ನೀಡಲಾಗುತ್ತಿದೆ. 


ದೇಶಾದ್ಯಂತ 5G ನೆಟ್‌ವರ್ಕ್ ಸೇವೆ ಒದಗಿಸುವಲ್ಲಿ ನಿರತವಾಗಿರುವ ಏರ್‌ಟೆಲ್: 
ವಾಸ್ತವವಾಗಿ, ಭಾರ್ತಿ ಏರ್‌ಟೆಲ್ ದೇಶಾದ್ಯಂತ 5G ನೆಟ್‌ವರ್ಕ್ ಸೇವೆ ಒದಗಿಸುವಲ್ಲಿ ನಿರತವಾಗಿದೆ. ಸದ್ಯ, ಏರ್‌ಟೆಲ್ ತನ್ನ 5G NSA ನೆಟ್‌ವರ್ಕ್ ಸೇವೆಯನ್ನು 3000 ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಲ್ಲಿ ನೀಡಲಾಗುತ್ತಿದೆ. 


ಇದನ್ನೂ ಓದಿ- ಮಾರುಕಟ್ಟೆಗೆ ಬಂದಿದೆ ಅಗ್ಗದ ಬೆಲೆಯ ಸ್ಮಾರ್ಟ್ ಟಿವಿ ! ಕೇವಲ 11 ಸಾವಿರ ರೂ. ವೆಚ್ಚದಲ್ಲಿ ಮನೆಯಾಗುತ್ತದೆ ಹೋಮ್ ಥಿಯೇಟರ್


ಲಭ್ಯವಿರುವ ಮಾಹಿತಿಗಳ ಪ್ರಕಾರ, ಈ ವರ್ಷಾಂತ್ಯದ ವೇಳೆ ದೇಶದ ಎಲ್ಲಾ ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ಏರ್‌ಟೆಲ್ 5ಜಿ ಸೇವೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.