ಮಾರುಕಟ್ಟೆಗೆ ಬಂದಿದೆ ಅಗ್ಗದ ಬೆಲೆಯ ಸ್ಮಾರ್ಟ್ ಟಿವಿ ! ಕೇವಲ 11 ಸಾವಿರ ರೂ. ವೆಚ್ಚದಲ್ಲಿ ಮನೆಯಾಗುತ್ತದೆ ಹೋಮ್ ಥಿಯೇಟರ್

Blaupunkt ಇತ್ತೀಚಿನ ಸ್ಮಾರ್ಟ್ ಟಿವಿ ಶ್ರೇಣಿಯನ್ನು ಪರಿಚಯಿಸಿದೆ.   ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇಸ್ ಸೇಲ್ ನಲ್ಲಿ ಈ ಟಿವಿಯ ಮಾರಾಟ ನಡೆಯಲಿದೆ. ಇಲ್ಲಿ 75 ಪ್ರತಿಶತದವರೆಗೆ ರಿಯಾಯಿತಿ ಕೂಡಾ ನೀಡಲಿದೆ. 

Written by - Ranjitha R K | Last Updated : Jun 7, 2023, 04:17 PM IST
  • ಭಾರತದಲ್ಲಿ Blaupunkt ಸ್ಮಾರ್ಟ್ ಟಿವಿ ಬಿಡುಗಡೆ
  • 75 ಪ್ರತಿಶತದವರೆಗೆ ರಿಯಾಯಿತಿ ದರದಲ್ಲಿ ಟಿವಿ ಲಭ್ಯ
  • Blaupunkt ನ 32 ಇಂಚಿನ ಟಿವಿ ಬೆಲೆ 10,888 ರೂ
ಮಾರುಕಟ್ಟೆಗೆ ಬಂದಿದೆ ಅಗ್ಗದ ಬೆಲೆಯ ಸ್ಮಾರ್ಟ್ ಟಿವಿ ! ಕೇವಲ 11 ಸಾವಿರ ರೂ. ವೆಚ್ಚದಲ್ಲಿ ಮನೆಯಾಗುತ್ತದೆ ಹೋಮ್ ಥಿಯೇಟರ್ title=

ಬೆಂಗಳೂರು : Blaupunkt ಭಾರತದಲ್ಲಿ ತನ್ನ ಇತ್ತೀಚಿನ ಸ್ಮಾರ್ಟ್ ಟಿವಿ ಶ್ರೇಣಿಯನ್ನು ಪರಿಚಯಿಸಿದೆ. 32-ಇಂಚಿನ HD, 43-ಇಂಚಿನ ಮತ್ತು 40-ಇಂಚಿನ FHD, 65 ಮತ್ತು 50-ಇಂಚಿನ 4K GTV, 75 QLED, GTVಯನ್ನು ಬಿಡುಗಡೆ ಮಾಡಿದೆ. ಲೈನ್‌ಅಪ್‌ನ ಮೊದಲ ಮಾರಾಟವು ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇಸ್ ಸೇಲ್ ನೊಂದಿಗೆ ಆರಂಭವಾಗುತ್ತದೆ. ಈ ಸೇಲ್ ನಲ್ಲಿ 75 ಪ್ರತಿಶತದವರೆಗೆ ರಿಯಾಯಿತಿ ನೀಡಲಾಗುವುದು. ಜೂನ್ 9 ರಂದು ಈ ಸೇಲ್ ಆರಂಭವಾಗಲಿದ್ದು, ಜೂನ್ 14, 2023 ರವರೆಗೆ ನಡೆಯಲಿದೆ. 

Blaupunktನ 32 ಇಂಚಿನ ಟಿವಿ ಬೆಲೆ 10,888 ರೂ : 
Blaupunkt 32, 40, 43-inch CyberSound Realtek Gen 2 ಬೆಲೆ ಕ್ರಮವಾಗಿ  10,888 ರೂ., 16,499 ರೂ.,18,499 ರೂ. ಆಗಿರುಲಿದೆ. ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಸೌಂಡ್ ಕ್ವಾಲಿಟಿ, ಉತ್ತಮ ಡಿಸ್ಪ್ಲೇ ಸಿಗುತ್ತದೆ. ಈ ಮಾಡೆಲ್ ಗಳಲ್ಲಿ ಇನ್ ಬಿಲ್ಟ್ ನೆಟ್ ಫ್ಲಿಕ್ಸ್ ಲಭ್ಯವಿರುವುದಲ್ಲದೆ 2 48W ಬಾಕ್ಸ್ ಸ್ಪೀಕರ್‌ಗಳನ್ನು ಹೊಂದಿವೆ. ಸರೌಂಡ್ ಸೌಂಡ್ ತಂತ್ರಜ್ಞಾನದೊಂದಿಗೆ, ವೀಕ್ಷಕರು ತಮ್ಮ ನೆಚ್ಚಿನ ಚಲನಚಿತ್ರಗಳು ಮತ್ತು  ಶೋ ಗಳನ್ನು ಎಂಜಾಯ್ ಮಾಡಬಹುದಾಗಿದೆ. 

ಇದನ್ನೂ ಓದಿ : ಮಾರುಕಟ್ಟೆಗೆ ಬಂತು ಬಹು ನಿರೀಕ್ಷಿತ Maruti Jimny!ಬೆಲೆ ಕೇವಲ ಇಷ್ಟೇ

ಬೆಜೆಲ್-ಲೆಸ್ ವಿನ್ಯಾಸ ಮತ್ತು ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಮ್ ಒಟ್ಟಾರೆ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತದೆ. ಟಿವಿ  3 HDMI ಮತ್ತು 2 USB ಪೋರ್ಟ್‌ಗಳೊಂದಿಗೆ ಬರುತ್ತವೆ. ಇದರ ಮೂಲಕ ಲ್ಯಾಪ್‌ಟಾಪ್‌ಗಳು, ಮೊಬೈಲ್ ಸಾಧನಗಳು ಮತ್ತು PC ಗಳೊಂದಿಗೆ ನಾನ್ ಸ್ಟಾಪ್  ಕನೆಕ್ಟಿವಿಟಿ ನೀಡುತ್ತದೆ. ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಾದ Amazon Video, Zee5, Sony LIV ಮತ್ತು Vootಗೆ ಆಕ್ಸೆಸ್ ಪಡೆಯಬಹುದು.  

Blaupunkt 50 ಇಂಚಿನ TV ಬೆಲೆ  28,999 ರೂ. :  
Blaupunkt 50 ಮತ್ತು 65 ಇಂಚಿನ Google TV ಮಾದರಿಗಳನ್ನು ನೀಡುತ್ತದೆ. ಇವುಗಳ ಬೆಲೆ ಕ್ರಮವಾಗಿ  28,999 ರೂ. ಮತ್ತು  44,444 ರೂ. ಈ ಟಿವಿಗಳು 2 GB RAM ಮತ್ತು 16 GB ROMನೊಂದಿಗೆ ಬರುತ್ತವೆ. ಇದು ಸಾಕಷ್ಟು  ಪ್ರೊಸೆಸಿಂಗ್ ಪವರ್ ಮತ್ತು ಶೇಖರಣಾ ಸಾಮರ್ಥ್ಯವನ್ನು ಒದಗಿಸುತ್ತದೆ. ಈ ಮಾದರಿಗಳ ಪ್ರಮುಖ ಆಕರ್ಷಣೆ ಅವುಗಳ  ಸೌಂಡ್ ಸಿಸ್ಟಮ್ ಆಗಿದೆ. 

ಇದನ್ನೂ ಓದಿ : Google Fact: ಗೂಗಲ್ ಕುರಿತಾದ ಈ ಸಂಗತಿಗಳು ನಿಮಗೆಷ್ಟು ಗೊತ್ತು?

DTS TruSurround ತಂತ್ರಜ್ಞಾನವನ್ನು ಒಳಗೊಂಡಿರುವ 2 60W ಡಾಲ್ಬಿ ಆಡಿಯೊ ಸ್ಟಿರಿಯೊ ಬಾಕ್ಸ್ ಸ್ಪೀಕರ್‌ಗಳೊಂದಿಗೆ ಸಜ್ಜುಗೊಂಡಿದೆ. ಟಿವಿಯು ಬೆಜೆಲ್-ಲೆಸ್ ಮತ್ತು ಏರ್-ಸ್ಲಿಮ್ ವಿನ್ಯಾಸ, ಬ್ಲೂಟೂತ್ ಮತ್ತು ವೈ-ಫೈ ಕನೆಕ್ಟಿವಿಟಿ, ವಾಯ್ಸ್ ಸಕ್ಷಂ ರಿಮೋಟ್ ಮತ್ತು ವಿವಿಧ ಸಾಧನಗಳೊಂದಿಗೆ  ನಾನ್ ಸ್ಟಾಪ್ ಕನೆಕ್ಟಿವಿಟಿಗಾಗಿ 3 HDMI ಮತ್ತು 2 USB ಪೋರ್ಟ್‌ಗಳನ್ನು ಹೊಂದಿದೆ.

Blaupunkt 75-ಇಂಚಿನ QLED TVಯ ಬೆಲೆ : 
Blaupunkt 75-ಇಂಚಿನ QLED ಟಿವಿಯನ್ನು ಸಹ ಬಿಡುಗಡೆ ಮಾಡಿದೆ. ಇದರ ಬೆಲೆ  99,999 ರೂ. QLED 4K ಡಿಸ್ಪ್ಲೇಯೊಂದಿಗೆ, 1.1 ಬಿಲಿಯನ್ ಬಣ್ಣಗಳ ವ್ಯಾಪಕ ಶ್ರೇಣಿಯನ್ನು ನೀಡುತ್ತದೆ. ಟಿವಿಯಲ್ಲಿ 60W ನ ನಾಲ್ಕು  ಇನ್ ಬಿಲ್ಟ್ ಸ್ಪೀಕರ್‌ಗಳು ಲಭ್ಯವಿವೆ. ಸ್ಲೀಕ್ ಸ್ಟ್ಯಾಂಡ್, ಬೆಜೆಲ್-ಲೆಸ್ ಡಿಸ್ಪ್ಲೇ ಮತ್ತು ಏರ್ ಸ್ಲಿಮ್ ಎಂಬ ಸ್ಲಿಮ್ ಪ್ರೊಫೈಲ್ ಟಿವಿಯ ಸೌಂದರ್ಯವನ್ನು ಹೆಚ್ಚಿಸುತ್ತವೆ.

ಇದನ್ನೂ ಓದಿ : WiFi Router: ನಿಮ್ಮ ಮನೆಯಲ್ಲಿಯೂ ರಾತ್ರಿ ಇಡೀ ವೈಫೈ ರೌಟರ್ ಆನ್ ಇರುತ್ತಾ? ಇಂದೇ ಎಚ್ಚೆತ್ತುಕೊಳ್ಳಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News