Useful AI Apps: ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೂ ಇರಲಿ ಈ ಅತ್ಯಾವಶ್ಯಕ ಎಐ ಆಪ್ ಗಳು!

Useful AI Apps: ಕೃತಕ ಬುದ್ಧಿಮತ್ತೆ ಆಧಾರಿದ ಈ ಅಪ್ಲಿಕೇಶನ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೂ ಇರಬೇಕು, ಕಾರಣ ಎಂದರೆ, ಈ ಅಪ್ಲಿಕೇಷನ್ ಗಳು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತವೆ ಮತ್ತು ನಿಮ್ಮ ಸಮಯವನ್ನು ವ್ಯರ್ಥವಾಗದಂತೆ ನೋಡಿಕೊಳ್ಳುತ್ತವೆ.  

Written by - Nitin Tabib | Last Updated : Jun 3, 2023, 08:10 PM IST
  • ಈ ಅಪ್ಲಿಕೇಶನ್ ಗಣಿತ ಮತ್ತು ಇತರ ಹೋಮ್ ವರ್ಕ್ ಪೂರ್ಣಗೊಳಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ. ಇದು AI ಚಾಲಿತ ಅಪ್ಲಿಕೇಶನ್ ಆಗಿದ್ದು,
  • ಗೂಗಲ್ ಇತ್ತೀಚೆಗೆ ಈ ಅಪ್ಲಿಕೇಶನ್ ಅನ್ನು ಸ್ವಾಧೀನಪಡಿಸಿಕೊಂಡಿದೆ ಎಂಬುದು ಇಲ್ಲಿ ಉಲ್ಲೇಖನೀಯ.
  • ವಿದ್ಯಾರ್ಥಿಗಳು ತಮ್ಮ ಫೋನ್ ಕ್ಯಾಮೆರಾವನ್ನು ಬಳಸಿಕೊಂಡು ಚಿತ್ರಗಳನ್ನು ತೆಗೆದುಕೊಳ್ಳಬಹುದು,
  • ನಂತರ ತಮ್ಮ ಪ್ರಶ್ನೆಗಳಿಗೆ ನಿಖರವಾದ ಉತ್ತರವನ್ನು ತಿಳಿಯಲು ಈ ಅಪ್ಲಿಕೇಶನ್ ಅನ್ನು ಬಳಸಬಹುದು.
Useful AI Apps: ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೂ ಇರಲಿ ಈ ಅತ್ಯಾವಶ್ಯಕ ಎಐ ಆಪ್ ಗಳು! title=

Useful AI Applications: ಕೃತಕ ಬುದ್ಧಿಮತ್ತೆಯ ಟೂಲ್ಸ್ ಗಳು ಬಹುತೇಕ ಪ್ರತಿಯೊಬ್ಬ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇಂದಿನ ಕಾಲದಲ್ಲಿ ಅಗತ್ಯಗಳಾಗಿ ಮಾರ್ಪಟ್ಟಿವೆ. ಕೃತಕ ಬುದ್ಧಿಮತ್ತೆ ಟೂಲ್ ಸಹಾಯ ಪಡೆಯದೆ ಕೆಲಸ ಮಾಡುತ್ತಿರುವ ಯಾವುದೇ ಸ್ಮಾರ್ಟ್‌ಫೋನ್ ಬಳಕೆದಾರ ಸಿಗುವುದು ತುಂಬಾ ವಿರಳ, ಏಕೆಂದರೆ ಈ ಟೂಲ್ ಗಳು  ನಿಮ್ಮ ಕೆಲಸವನ್ನು ಸುಲಭಗೊಳಿಸುವುದರ ಜೊತೆಗೆ ಅವುಗಳ ಪರಿಪೂರ್ಣತೆಯು ಅದ್ಭುತವಾಗಿದೆ. ವೇಗವಾಗಿ ಮತ್ತು ನಿಖರವಾದ ರೀತಿಯಲ್ಲಿ ಅವು ಕೆಲಸ ಮಾಡುತ್ತವೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಕೆಲವು ಅಥವಾ ಇತರ ಕೃತಕ ಬುದ್ಧಿಮತ್ತೆ ಟೂಲ್ ಗಳನ್ನು ಬಳಸುತ್ತಿದ್ದಾರೆ ಮತ್ತು ಅದರೊಂದಿಗೆ ತನ್ನ ಕೆಲಸವನ್ನು ಸುಲಭಗೊಳಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹಲವು ಕೃತಕ ಬುದ್ಧಿಮತ್ತೆ ಟೂಲ್ಗಳ ಆಯ್ಕೆಗಳಿವೆ, ಆದರೆ ನೀವು ಅವುಗಳಲ್ಲಿಯೇ ಉತ್ತಮವಾದುದನ್ನು ಆಯ್ದುಕೊಳ್ಳಲು ಬಯಸುತ್ತಿದ್ದರೆ,  ಇಂದು ನಾವು ನಿಮಗಾಗಿ ಅಂತಹ ಕೃತಕ ಬುದ್ಧಿಮತ್ತೆ ಆಪ್ ಗಳ ಆಯ್ಕೆಗಳನ್ನು ತಂದಿದ್ದೇವೆ, ಈ ಆಪ್ ಗಳು ನಿಮ್ಮ ಫೋನ್ ನಲ್ಲಿ ಇರಲೇಬೇಕು ಮತ್ತು ಅದಕ್ಕೆ ಕೆಲ ಕಾರಣಗಳೂ ಕೂಡ ಇವೆ. ಬನ್ನಿ ತಿಳಿದುಕೊಳ್ಳೋಣ. 

Socretic
ಈ ಅಪ್ಲಿಕೇಶನ್ ಗಣಿತ ಮತ್ತು ಇತರ ಹೋಮ್ ವರ್ಕ್ ಪೂರ್ಣಗೊಳಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ. ಇದು AI ಚಾಲಿತ ಅಪ್ಲಿಕೇಶನ್ ಆಗಿದ್ದು, ಗೂಗಲ್ ಇತ್ತೀಚೆಗೆ ಈ ಅಪ್ಲಿಕೇಶನ್ ಅನ್ನು ಸ್ವಾಧೀನಪಡಿಸಿಕೊಂಡಿದೆ ಎಂಬುದು ಇಲ್ಲಿ ಉಲ್ಲೇಖನೀಯ. ವಿದ್ಯಾರ್ಥಿಗಳು ತಮ್ಮ ಫೋನ್ ಕ್ಯಾಮೆರಾವನ್ನು ಬಳಸಿಕೊಂಡು ಚಿತ್ರಗಳನ್ನು ತೆಗೆದುಕೊಳ್ಳಬಹುದು, ನಂತರ ಅವರ ಪ್ರಶ್ನೆಗಳಿಗೆ ನಿಖರವಾದ ಉತ್ತರವನ್ನು ತಿಳಿಯಲು ಈ ಅಪ್ಲಿಕೇಶನ್ ಅನ್ನು ಬಳಸಬಹುದು. ಹಾಗೆ ಮಾಡುವಲ್ಲಿ ಅಪ್ಲಿಕೇಶನ್ ಪ್ರಮುಖ ಪಾತ್ರ ವಹಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ, ಸಾಹಿತ್ಯ, ಸಮಾಜ ಅಧ್ಯಯನ ಇತ್ಯಾದಿಗಳನ್ನು ಕಲಿಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ-WhatsApp ನಲ್ಲಿ ಇನ್ಮುಂದೆ ಎಲ್ಲಾ ಕೆಲಸಗಳು ಮತ್ತಷ್ಟು ಸುಲಭವಾಗಲಿದೆ

Fyle
ಫೈಲ್ AI-ಚಾಲಿತ ಖರ್ಚು ನಿರ್ವಹಣೆ (ಎಕ್ಸ್ ಪೆನ್ಸ್) ಅಪ್ಲಿಕೇಶನ್ ಆಗಿದೆ. ಇದು ಡೆಸ್ಕ್‌ಟಾಪ್, Android ಮತ್ತು iOS ನಲ್ಲಿ ಲಭ್ಯವಿದೆ. ಇದು ಅತ್ಯಂತ ಸ್ಮಾರ್ಟ್ ಪ್ರವೇಶ ನಿರ್ವಹಣಾ ಅಪ್ಲಿಕೇಶನ್ ಆಗಿದ್ದು, ಮಾರುಕಟ್ಟೆಯಲ್ಲಿ ಈ ವಿಭಾಗದಲ್ಲಿ ಇದನ್ನು  ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ. ಇದೆ ಕಾರಣದಿಂದ ಇದು ಸಾಕಷ್ಟು ಜನಪ್ರಿಯವಾಗಿದೆ. ಅನೇಕ ಬಳಕೆದಾರರು ಈ ಅಪ್ಲಿಕೇಶನ್ ಅನ್ನು ಬಳಸುತ್ತಾರೆ.

ಇದನ್ನೂ ಓದಿ-MiG-Miraj ನಂತಹ ಸಣ್ಣ ಫೈಟರ್ ಜೆಟ್ ಗಳಿಂದಲೂ ಇನ್ಮುಂದೆ ಬ್ರಹ್ಮೋಸ್ ಕ್ಷಿಪಣಿ ಉಡಾಯಿಸಬಹುದು

Databoat
DataBot ಎಂಬುದು AI-ಚಾಲಿತ ವರ್ಚುವಲ್ ಅಸಿಸ್ಟೆಂಟ್ ಆಗಿದ್ದು, Windows 10, Android ಮತ್ತು iOS ನಲ್ಲಿ ಲಭ್ಯವಿದೆ. ಇದು Xbox One, iPad, iPod, Android ಟ್ಯಾಬ್ಲೆಟ್ ಮತ್ತು ವಿಂಡೋಸ್ ಫೋನ್‌ನಲ್ಲಿಯೂ ಲಭ್ಯವಿದೆ. ಈ ಅಪ್ಲಿಕೇಶನ್ ನಿಮ್ಮ ಸ್ವಂತ ಧ್ವನಿಯಲ್ಲಿ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತದೆ ಮತ್ತು ಇದು ನಿಮಗೆ ಮುಖ್ಯವಾದ ವಿಷಯಗಳನ್ನು ತಿಳಿಸುತ್ತದೆ. ನಿಮ್ಮ ಆಸಕ್ತಿಯ ವಿಷಯದ ಆಧಾರದ ಮೇಲೆ ಚಿತ್ರಗಳು, ಮಾಹಿತಿ ಮತ್ತು ಮಲ್ಟಿಮೀಡಿಯಾ ಪ್ರಸ್ತುತಿಗಳನ್ನು ಒದಗಿಸುವ ಸಂಯೋಜಿತ ವೈಶಿಷ್ಟ್ಯಗಳನ್ನು DataBot ಹೊಂದಿದೆ. ಇದು ನಿಮಗೆ ಮಾಹಿತಿಯನ್ನು ಒದಗಿಸಲು Google ಹುಡುಕಾಟ, ವಿಕಿಪೀಡಿಯಾ, RSS ಚಾನಲ್ ಇತ್ಯಾದಿಗಳನ್ನು ಬಳಸುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News