Screen Guard: ನಿಮ್ಮ ಸ್ಮಾರ್ಟ್ ಫೋನ್ ಗೆ ಒಂದು ವೇಳೆ ನೀವೂ ಕೂಡ ಸ್ಕ್ರೀನ್ ಗಾರ್ಡ್ ಅನ್ವಯಿಸಿದ್ದರೆ ಈ ಸುದ್ದಿಯನ್ನು ನೀವು ತಪ್ಪದೆ ಓದಿ. ಸಾಮಾನ್ಯವಾಗಿ ಸ್ಕ್ರೀನ್ ಗಾರ್ಡ್ ಅನ್ವಯಿಸಿದಾಗ ಅದು ನಮ್ಮ ಸ್ಮಾರ್ಟ್ ಫೋನ್ (Smartphone) ಸ್ಕ್ರೀನ್ ಒಡೆಯದಂತೆ ಅಥವಾ ಹಾಳಾಗದಂತೆ ತಡೆಯುತ್ತದೆ ಎಂದು ನಾವು ಭಾವಿಸುತ್ತೇವೆ. ಆದರೆ ವಾಸ್ತವದಲ್ಲಿ ಅದು ಹಾಗಿಲ್ಲ. ಏಕೆಂದರೆ ಸ್ಕ್ರೀನ್ ಗಾರ್ಡ್ ಬಳಕೆ ಅಪಾಯಕಾರಿ ಸಾಬೀತಾಗುವ ಸಾಧ್ಯತೆ ಇದೆ. ಥರ್ಡ್ ಪಾರ್ಟಿ ಸ್ಕ್ರೀನ್ ಗಾರ್ಡ್ ಬಳಸುವಿಕೆ ಸ್ಮಾರ್ಟ್ ಫೋನ್ ಆರೋಗ್ಯಕ್ಕೆ ಹಾನಿಕಾರಕವಾಗಿದೆ. 


COMMERCIAL BREAK
SCROLL TO CONTINUE READING

ಇದರ ಹಿಂದಿನ ಕಾರಣವೇನು?
ಇತ್ತೀಚೆಗಷ್ಟೇ ಪ್ರಕಟಗೊಂಡ ವರದಿಯೊಂದರ ಪ್ರಕಾರ ಮಾಡರ್ನ್ ಸ್ಮಾರ್ಟ್ ಫೋನ್ ಡಿಸ್ಪ್ಲೇಗಳ ಅಡಿ ನೀಡಲಾಗಿರುವ Ambient Light ಹಾಗೂ Proximity ಹೆಸರಿನ ಎರಡು ಸೆನ್ಸಾರ್ ಗಳಿರುತ್ತವೆ. ಈ ಎರಡೂ ಸೆನ್ಸಾರ್ ಗಳು ಕಾಣಿಸುವುದಿಲ್ಲ ಮತ್ತು ಇವು ಫೋನ್ ಸ್ಕ್ರೀನ್ ಬಲಭಾಗದ ರಿಸಿವರ್ ಬಳಿ ಇರುತ್ತವೆ. ಹೀಗಿರುವಾಗ ಸ್ಕ್ರೀನ್ ಅನ್ನು ಹಾಳಾಗುವುದನ್ನು ತಪ್ಪಿಸಲು ಬಳಸಲಾಗುವ ಸ್ಕ್ರೀನ್ ಗಾರ್ಡ್ ಸೆನ್ಸರ್ ಅನ್ನು ಬ್ಲಾಕ್ ಮಾಡುತ್ತವೆ. ಇದರಿಂದ ನಿಮ್ಮ ಸ್ಕ್ರೀನ್ ನಾನ್ ರಿಯಾಕ್ಟಿವ್ ಆಗುವ ಸಾಧ್ಯತೆ ಇದೆ ಮತ್ತು ನಿಮ್ಮ ಸ್ಮಾರ್ಟ್ ಫೋನ್ ಗೆ ಕಾಲ್ ಬರುವುದು ನಿಂತುಹೋಗಲಿದೆ. ಇದಲ್ಲದೆ ಥರ್ಡ್ ಪಾರ್ಟಿ ಸ್ಕ್ರೀನ್ ಬಳಕೆಯಿಂದ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸರಿಯಾಗಿ ಕಾರ್ಯನಿರ್ವಹಿಸದೆ ಹೋಗಬಹುದು.


ಇದನ್ನೂ ಓದಿ-WhatsApp New Update- ಇನ್ಮುಂದೆ ವಾಟ್ಸಾಪ್‌ನಿಂದಲೂ ಉತ್ತಮ ಗುಣಮಟ್ಟದ ಫೋಟೋಗಳನ್ನು ಕಳುಹಿಸಬಹುದು


ಸ್ಕ್ರೀನ್ ಗಾರ್ಡ್ ಹಾನಿಯಿಂದ ಪಾರಾಗಲು ಏನು ಮಾಡಬೇಕು?
ಒಂದು ವೇಳೆ ನಿಮಗೆ ಸ್ಕ್ರೀನ್ ಗಾರ್ಡ್ ಬಳಸಲೇಬೇಕು ಎಂದಾದರೆ, ಯಾವುದಾದರೊಂದು ಸ್ಕ್ರೀನ್ ಗಾರ್ಡ್ ಬಳಸುವ ಬದಲು ಬ್ರಾಂಡೆಡ್ ಸ್ಕ್ರೀನ್ ಗಾರ್ಡ್ ಬಳಕೆ ಮಾಡಿ. ಇನ್ನೊಂದೆಡೆ ಸ್ಮಾರ್ಟ್ ಫೋನ್ ಜೊತೆಗೆ ಬರುವ ಸ್ಕ್ರೀನ್ ಗಾರ್ಡ್ ಕೂಡ ಉತ್ತಮ ಆಯ್ಕೆ. ಏಕೆಂದರೆ ಸ್ಮಾರ್ಟ್ ಫೋನ್ ನಲ್ಲಿ ಸೆನ್ಸರ್ ಗಳು ಎಲ್ಲಿವೆ ಎಂಬುದು ಕಂಪನಿಗೆ ಚೆನ್ನಾಗಿ ಗೊತ್ತಿರುತ್ತದೆ ಹಾಗೂ ಅವು ತಮ್ಮ ಫೋನ್ ಗೆ ಹೊಂದಿಕೆಯಾಗುವಂತೆ ಸ್ಕ್ರೀನ್ ಗಾರ್ಡ್ ಗಳನ್ನು ವಿನ್ಯಾಸಗೊಳಿಸಿರುತ್ತವೆ.


ಇದನ್ನೂ ಓದಿ-WhatsApp Testing New Feature: WhatsAppನಲ್ಲಿ ಬರುತ್ತಿರುವ ಈ ವಿಡಿಯೋ ಮೂಲಕ ನೀವು ಹೈ ಕ್ವಾಲಿಟಿ ವಿಡಿಯೋ ಕಳುಹಿಸಬಹುದು


Ambient light ಹಾಗೂ Proximity Mobile ಸೆನ್ಸರ್ ಗಳ ಕಾರ್ಯವೇನು?
ಸಾಮಾನ್ಯವಾಗಿ ಒಂದು ಸ್ಮಾರ್ಟ್ ಫೋನ್ ನಲ್ಲಿ ಹಲವು ರೀತಿಯ ಸೆನ್ಸಾರ್ ಗಳಿರುತ್ತವೆ. ಈ ಸೆನ್ಸರ್ ಗಳಲ್ಲಿ Ambient light ಸೆನ್ಸರ್ ಕೂಡ ಒಂದು. ಈ ಸೆನ್ಸರ್ ಬಿಸಿಲಿನ ಬೆಳಕನ್ನು ಆಧರಿಸಿ ನಿಮ್ಮ ಸ್ಮಾರ್ಟ್ ಫೋನ್ ನ ಲೈಟ್ ನಿರ್ವಹಿಸುತ್ತದೆ.  Proximity Mobile ಸೆನ್ಸರ್, ಫೋನ್ ಒಂದೊಮ್ಮೆ ನಿಮ್ಮ ಕಿವಿಯ ಬಳಿಗೆ ಹೋದರೆ, ಫೋನ್ ನ ಲೈಟ್ ಬಂದ್ ಮಾಡುತ್ತದೆ ಮತ್ತು ಕಿವಿ ಬಳಿಯಿಂದ ಫೋನ್ ದೂರ ಮಾಡಿದ ಬಳಿಕ ಲೈಟ್ ಮತ್ತೆ ಆನ್ ಆಗುತ್ತದೆ.


ಇದನ್ನೂ ಓದಿ- WhatsApp ಕರೆಗಳನ್ನು ರೆಕಾರ್ಡ್ ಮಾಡಲು ಇದು ಸುಲಭ ವಿಧಾನ, ಇಲ್ಲಿದೆ ಸಂಪೂರ್ಣ ಪ್ರಕ್ರಿಯೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.