WhatsApp New Update- ಇನ್ಮುಂದೆ ವಾಟ್ಸಾಪ್‌ನಿಂದಲೂ ಉತ್ತಮ ಗುಣಮಟ್ಟದ ಫೋಟೋಗಳನ್ನು ಕಳುಹಿಸಬಹುದು

ವಾಟ್ಸಾಪ್ ಶೀಘ್ರದಲ್ಲೇ ಹೊಸ ನವೀಕರಣವನ್ನು ತರಲಿದೆ. ಇದರ ಅಡಿಯಲ್ಲಿ ಉತ್ತಮ ಗುಣಮಟ್ಟದ ಫೋಟೋಗಳು ಅಥವಾ ವೀಡಿಯೊಗಳನ್ನು ಕಳುಹಿಸುವುದರಿಂದ ಅದು ಹಾಳಾಗುವುದಿಲ್ಲ.

Written by - Yashaswini V | Last Updated : Jul 3, 2021, 09:45 AM IST
  • ವಾಟ್ಸಾಪ್ ತನ್ನ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ತರಲಿದೆ
  • ವಾಟ್ಸಾಪ್ ಬೀಟಾ ಆವೃತ್ತಿ 2.21.14.6 ನಲ್ಲಿ ವೈಶಿಷ್ಟ್ಯವು ಬರುತ್ತಿದೆ
  • ಅದು ವೀಡಿಯೊ ಗುಣಮಟ್ಟ ಕ್ಷೀಣಿಸುವುದನ್ನು ತಡೆಯುತ್ತದೆ
WhatsApp New Update- ಇನ್ಮುಂದೆ ವಾಟ್ಸಾಪ್‌ನಿಂದಲೂ ಉತ್ತಮ ಗುಣಮಟ್ಟದ ಫೋಟೋಗಳನ್ನು ಕಳುಹಿಸಬಹುದು title=
ಶೀಘ್ರದಲ್ಲೇ ಹೊಸ ನವೀಕರಣವನ್ನು ತರಲಿದೆ ವಾಟ್ಸಾಪ್

ನವದೆಹಲಿ: ತ್ವರಿತ ಸಂದೇಶ ಅಪ್ಲಿಕೇಶನ್ ವಾಟ್ಸಾಪ್ (WhatsApp)ತನ್ನ ಬಳಕೆದಾರರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಚಾಟ್ ಮತ್ತು ಕರೆ ಮಾಡುವಾಗ ಉತ್ತಮ ಅನುಭವವನ್ನು ನೀಡಲು  ಆಗಾಗ್ಗೆ ಹೊಸ ವೈಶಿಷ್ಟ್ಯಗಳು ಮತ್ತು ನವೀಕರಣಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಕರೋನ ಯುಗದಲ್ಲಂತೂ, ವಾಟ್ಸಾಪ್ ನಂತಹ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಅವರ ಕೆಲಸವನ್ನು ಸರಾಗಗೊಳಿಸುವಲ್ಲಿ ಪಾತ್ರ ವಹಿಸಿವೆ. 

ವಾಟ್ಸಾಪ್‌ಗೆ (Whatsapp) ಹೆಚ್ಚಿನ ಬೇಡಿಕೆಯಿದೆ, ಅದರಲ್ಲೂ ವಿಶೇಷವಾಗಿ ವರ್ಕ್ ಫ್ರಮ್ ಹೋಂ (Work From Home) ನೌಕರರಿಗೆ ಇತ್ತೀಚಿನ ದಿನಗಳಲ್ಲಿ ಕಚೇರಿ ಕೆಲಸಗಳನ್ನು ನಿರ್ವಹಿಸಲು ವಾಟ್ಸಾಪ್ ಅತ್ಯಗತ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಕಂಪನಿಯ ಪ್ರಯತ್ನವು ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡುತ್ತದೆ. ಈ ಸಂಚಿಕೆಯಲ್ಲಿ, ಕಂಪನಿಯು ಹೊಸ ವೈಶಿಷ್ಟ್ಯವನ್ನು ತರಲಿದೆ. ಇದರಲ್ಲಿ ಮುಖ್ಯವಾಗಿ ಬಳಕೆದಾರರು ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಫೋಟೋ, ವಿಡಿಯೋಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ವಾಟ್ಸಾಪ್ನ ಮುಂಬರುವ ವೈಶಿಷ್ಟ್ಯದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ…

ಇದನ್ನೂ ಓದಿ- WhatsApp Pay: ಈಗ ನೀವು ಚಾಟ್ ಮೂಲಕವೂ ಪಾವತಿಸಬಹುದು, ಅದನ್ನು ಹೇಗೆ? ಯಾರು ಬಳಸಬಹುದು ಎಂದು ತಿಳಿಯಿರಿ

WABetaInfo ನ ವರದಿಯ ಪ್ರಕಾರ, ವಾಟ್ಸಾಪ್ ತನ್ನ ಆಂಡ್ರಾಯ್ಡ್ (Android) ಫೋನ್ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ತರಲಿದೆ. ವಾಟ್ಸಾಪ್ ಬೀಟಾ ಆವೃತ್ತಿ 2.21.14.6 ನಲ್ಲಿ ವೈಶಿಷ್ಟ್ಯವು ಬರುತ್ತಿದೆ. ಅದು ವೀಡಿಯೊ ಗುಣಮಟ್ಟ ಕ್ಷೀಣಿಸುವುದನ್ನು ತಡೆಯುತ್ತದೆ. ಈ ವೈಶಿಷ್ಟ್ಯದಲ್ಲಿ, ಬಳಕೆದಾರರು ಉತ್ತಮ ಗುಣಮಟ್ಟದ ಚಿತ್ರಗಳು ಮತ್ತು ವೀಡಿಯೊಗಳನ್ನು ಕಳುಹಿಸಬಹುದು. ಇದರಲ್ಲಿ  ಗುಣಮಟ್ಟವೂ ಹದಗೆಡುವುದಿಲ್ಲ. 

ವರದಿಯ ಪ್ರಕಾರ, ಇತ್ತೀಚಿನ ಆವೃತ್ತಿಯಲ್ಲಿ, ವೀಡಿಯೊಗಳು ಮತ್ತು ಫೋಟೋಗಳ ಅಪ್‌ಲೋಡ್ ಸಂಕೋಚನವನ್ನು ನಿರ್ಧರಿಸಲು ಮೂರು ಆಯ್ಕೆಗಳು ಲಭ್ಯವಿರುತ್ತವೆ, ಇದರಲ್ಲಿ ಆಟೋ (Auto), ಉತ್ತಮ ಗುಣಮಟ್ಟ (Best quality) ಮತ್ತು ಡೇಟಾ ಸೇವರ್ (Data saver) ಆಯ್ಕೆಗಳು ಸೇರಿವೆ.

ಇದನ್ನೂ ಓದಿ- WhatsApp ಕರೆಗಳನ್ನು ರೆಕಾರ್ಡ್ ಮಾಡಲು ಇದು ಸುಲಭ ವಿಧಾನ, ಇಲ್ಲಿದೆ ಸಂಪೂರ್ಣ ಪ್ರಕ್ರಿಯೆ

ಆಂಡ್ರಾಯ್ಡ್ ಬಳಕೆದಾರರು ವಾಟ್ಸಾಪ್ ಮೂಲಕ ವೀಡಿಯೊ ಕಳುಹಿಸುವ ಮೊದಲು ಮೂರು ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು. ನೀವು Auto ಆಯ್ಕೆ ಮಾಡಿದರೆ, ನೀವು ನಿಧಾನಗತಿಯ ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದರೂ ಸಹ ವೀಡಿಯೊವನ್ನು ಸಂಕುಚಿತ ಫೈಲ್ ಸ್ವರೂಪದಲ್ಲಿ ಕಳುಹಿಸಲು ನಿಮಗೆ ಸಾಧ್ಯವಾಗುತ್ತದೆ. ಆದರೆ ಡೇಟಾ ಸೇವರ್‌ನ ಆಯ್ಕೆಯು ವಿಶೇಷವಾಗಿ ಇತರ ಬಳಕೆದಾರರಿಗೆ ವೀಡಿಯೊಗಳನ್ನು ಕಳುಹಿಸಲು ಬಯಸುವ ಆದರೆ ಅವರ ಮಾಸಿಕ ಡೇಟಾವನ್ನು ಕೊನೆಗೊಳಿಸಲು ಬಯಸದ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ಉತ್ತಮ ಗುಣಮಟ್ಟದ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ, ನಿಮ್ಮ ವೀಡಿಯೊದ ಗುಣಮಟ್ಟವನ್ನು ಕಡಿಮೆ ಮಾಡದೆ, ನೀವು ವೀಡಿಯೊವನ್ನು ನೇರವಾಗಿ ಗ್ಯಾಲರಿಯಿಂದ ಫೈಲ್ ಸ್ವರೂಪದಲ್ಲಿ ಕಳುಹಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News