WhatsApp ಕರೆಗಳನ್ನು ರೆಕಾರ್ಡ್ ಮಾಡಲು ಇದು ಸುಲಭ ವಿಧಾನ, ಇಲ್ಲಿದೆ ಸಂಪೂರ್ಣ ಪ್ರಕ್ರಿಯೆ

ಪ್ರಸ್ತುತ, ಸಂವಹನದ ವಿಷಯದಲ್ಲಿ ವಾಟ್ಸಾಪ್ (WhatsApp) ಅತಿ ಹೆಚ್ಚಾಗಿ ಬಳಸುವ ಪ್ಲಾಟ್‌ಫಾರ್ಮ್ ಆಗಿದೆ. 

Written by - Yashaswini V | Last Updated : Jul 2, 2021, 11:40 AM IST
  • ವಾಟ್ಸಾಪ್ ಅಂತಹ ಯಾವುದೇ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ನೀಡಿಲ್ಲ
  • ಆದರೆ ನೀವು ಕೆಲವು ಸುಲಭ ಟ್ರಿಕ್ ಮೂಲಕ ವಾಟ್ಸಾಪ್ ಕರೆ ರೆಕಾರ್ಡ್ ಮಾಡಬಹುದು
  • ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್ ಕರೆ ರೆಕಾರ್ಡ್ ಮಾಡುವುದು ಹೇಗೆ?
WhatsApp ಕರೆಗಳನ್ನು ರೆಕಾರ್ಡ್ ಮಾಡಲು ಇದು ಸುಲಭ ವಿಧಾನ, ಇಲ್ಲಿದೆ ಸಂಪೂರ್ಣ ಪ್ರಕ್ರಿಯೆ title=
ನೀವು ಕೂಡ ವಾಟ್ಸಾಪ್ನಲ್ಲಿ ಕರೆ ರೆಕಾರ್ಡ್ ಮಾಡುವ ಬಗ್ಗೆ ಚಿಂತಿಸುತ್ತಿದ್ದರೆ ಇಲ್ಲಿದೆ ಸುಲಭ ಟ್ರಿಕ್

ನವದೆಹಲಿ: ಪ್ರಸ್ತುತ, ಸಂವಹನದ ವಿಷಯದಲ್ಲಿ ವಾಟ್ಸಾಪ್ (WhatsApp) ಸಾಕಷ್ಟು ಜನಪ್ರಿಯವಾಗಿದೆ. ವಾಟ್ಸಾಪ್ ಚಾಟಿಂಗ್, ವಿಡಿಯೋ ಕರೆ ಅಥವಾ ಧ್ವನಿ ಕರೆಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಅದಾಗ್ಯೂ, ಸಾಮಾನ್ಯ ಕರೆಯಂತೆ ವಾಟ್ಸಾಪ್ ಕರೆಯನ್ನು ರೆಕಾರ್ಡ್ ಮಾಡಲು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಏನು ಮಾಡುವುದು ಎಂಬ ಬಗ್ಗೆ ಹಲವು ಬಾರಿ ಪ್ರಶ್ನೆಗಳು ಉದ್ಭವಿಸಿದೆ. ಮಾತನಾಡುವಾಗ ಚರ್ಚಿಸಲಾದ ಪ್ರತಿಯೊಂದು ವಿಷಯವನ್ನು ನೆನಪಿಟ್ಟುಕೊಳ್ಳುವುದು ಕಷ್ಟ, ಅಂತಹ ಸಂದರ್ಭದಲ್ಲಿ ಪ್ರಮುಖ ವಿಷಯಗಳನ್ನು ನೋಟ್ ಮಾಡಿಕೊಳ್ಳಲು ಎಲ್ಲಾ ಸಮಯದಲ್ಲೂ ಎಲ್ಲರ ಕೈಯಲ್ಲೂ ನೋಟ್, ಪೆನ್ ಇರುವುದಿಲ್ಲ. ಹಾಗಾಗಿ ಕರೆ ರೆಕಾರ್ಡಿಂಗ್ ಆಯ್ಕೆಯು ಮುಖ್ಯವಾಗುತ್ತದೆ.  ನೀವು ಕೂಡ ವಾಟ್ಸಾಪ್ನಲ್ಲಿ ಕರೆ ರೆಕಾರ್ಡ್ ಮಾಡುವ ಬಗ್ಗೆ ಚಿಂತಿಸುತ್ತಿದ್ದರೆ ಅದು ತುಂಬಾ ಸುಲಭ. 

ವಾಸ್ತವವಾಗಿ, ವಾಟ್ಸಾಪ್ ಅಂತಹ ಯಾವುದೇ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ನೀಡಿಲ್ಲವಾದರೂ ಕೆಲವು ಸುಲಭ ಟ್ರಿಕ್ ಮೂಲಕ, ಕೆಲವು ಹಂತಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ವಾಟ್ಸಾಪ್ ಕರೆಗಳ ರೆಕಾರ್ಡಿಂಗ್ (How to record WhatsApp Calls)  ಅನ್ನು ಮಾಡಬಹುದು.

ಇದನ್ನೂ ಓದಿ - WhatsApp Pay: ಈಗ ನೀವು ಚಾಟ್ ಮೂಲಕವೂ ಪಾವತಿಸಬಹುದು, ಅದನ್ನು ಹೇಗೆ? ಯಾರು ಬಳಸಬಹುದು ಎಂದು ತಿಳಿಯಿರಿ

ಆಂಡ್ರಾಯ್ಡ್‌ನಲ್ಲಿ ಈ ರೀತಿ ವಾಟ್ಸಾಪ್ ಕರೆ ರೆಕಾರ್ಡ್ ಮಾಡಬಹುದು:
ಈ ಟ್ರಿಕ್ಗಾಗಿ, ಮೊದಲು ನೀವು ನಿಮ್ಮ ಮೊಬೈಲ್‌ನಲ್ಲಿ ಮೂರನೇ ವ್ಯಕ್ತಿಯ ಅಂದರೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು. ಇದಕ್ಕಾಗಿ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಕ್ಯೂಬ್ ಕಾಲ್ ರೆಕಾರ್ಡರ್ (Cube Call Recorder) ಡೌನ್‌ಲೋಡ್ ಮಾಡಿ. ನಂತರ ಕ್ಯೂಬ್ ಕಾಲ್ ರೆಕಾರ್ಡರ್ ತೆರೆಯುವ ಮೂಲಕ ಸೆಟಪ್ ಮಾಡಿ ನಂತರ ವಾಟ್ಸಾಪ್ ಗೆ ಹೋಗಿ. ಈಗ ನೀವು ಯಾರೊಂದಿಗೆ ಮಾತನಾಡಲು ಬಯಸುತ್ತೀರೋ ಅವರಿಗೆ ವಾಟ್ಸಾಪ್ ಕರೆ (WhatsApp Call) ಮಾಡಿ. ಮತ್ತೊಂದೆಡೆ, ಕರೆ ಸಮಯದಲ್ಲಿ ಕ್ಯೂಬ್ ಕರೆಯ ವಿಜೆಟ್ ಅಥವಾ ಐಕಾನ್ ಗೋಚರಿಸಿದರೆ, ಅದು ಕಾರ್ಯನಿರ್ವಹಿಸುತ್ತಿದೆ ಎಂದರ್ಥ. ಆದಾಗ್ಯೂ, ನಿಮ್ಮ ಸ್ವಂತ ಜವಾಬ್ದಾರಿಯಲ್ಲಿ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು ನೀವು ಬಳಸಬಹುದು.

ಇದನ್ನೂ ಓದಿ- World Social Media Day 2021: ವಿಶ್ವದ ಮೊಟ್ಟಮೊದಲ ಸಾಮಾಜಿಕ ಮಾಧ್ಯಮ ಯಾವುದು ನಿಮಗೆ ಗೊತ್ತಾ? ಬನ್ನಿ ಈ ರೀತಿಯ ಸ್ವಾರಸ್ಯಕರ ಸಂಗತಿಗಳನ್ನು ತಿಳಿದುಕೊಳ್ಳೋಣ

ಆದರೆ ಇದರಲ್ಲಿ ಏನಾದರೂ ಸಮಸ್ಯೆ ಇದ್ದರೆ, ನಂತರ ಅಪ್ಲಿಕೇಶನ್ ತೆರೆಯಿರಿ.  ಬಳಿಕ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಫೋರ್ಸ್ VoIP ಯೊಂದಿಗೆ ಆಯ್ಕೆಯನ್ನು ಆರಿಸಿ. ನಂತರ ಮತ್ತೆ ಕರೆ ಮಾಡಿ. ಅದಾಗ್ಯೂ ಮತ್ತೆ ಯಾವುದೇ ಸಮಸ್ಯೆ ಇದ್ದರೆ ಬಹುಶಃ ಈ ಟ್ರಿಕ್ ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News