ಬೆಂಗಳೂರು : ಈಗ ಎಲ್ಲಾ ಕೆಲಸಗಳೂ ಫಟಾಫಟ್ ಸ್ಮಾರ್ಟ್ ಫೋನ್ ನಲ್ಲೇ (Smartphone) ಆಗುತ್ತದೆ. ಕುಳಿತಲ್ಲೇ ಸ್ಮಾರ್ಟ್ ಫೋನ್  ಆಪ್ ಬಳಸಿ ಎಲ್ಲಾ ಬ್ಯಾಂಕ್ (Bank) ಕೆಲಸಗಳೂ ಮುಗಿಯುತ್ತವೆ. ಈಗ ಕರೆನ್ಸಿ ಬಳಸುವವರ ಸಂಖ್ಯೆಯೂ ಕಡಿಮೆ. ಎಲ್ಲಾ ಕೆಲಸಗಳೂ ಸ್ಮಾರ್ಟ್ ಫೋನ್ ನಲ್ಲಿರುವ Google pay, Paytm, ಫೋನ್ ಪೇ ಇತ್ಯಾದಿ ಬೇರೆ ಆಪ್ ಗಳ  ಮೂಲಕವೇ ಹಣಕಾಸು ವರ್ಗಾವಣೆ ಫಟಾಫಟ್ ಮುಗಿಯುತ್ತದೆ. ನಿಮ್ಮ ಮೊಬೈಲಿನಲ್ಲಿ ಕನಿಷ್ಠ ಅಂದರೂ ಎರಡು ಬ್ಯಾಂಕ್ ಗಳ  ಆಪ್ ಡೌನ್ ಲೋಡ್ ಆಗಿರುತ್ತದೆ.


COMMERCIAL BREAK
SCROLL TO CONTINUE READING

ಹುಷಾರಾಗಿರಿ..! ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಸೊನ್ನೆ ಆಗಬಹುದು..!
 ಹೀಗಿರುವಾಗ ನೀವು ತುಂಬಾ ಹುಷಾರಾಗಿರಬೇಕು. ಸ್ಮಾರ್ಟ್ ಫೋನಿನಲ್ಲಿರುವ (Smartphone) ಆಪ್ ಗಳ ಮೂಲಕ ನಿಮ್ಮ ಬ್ಯಾಂಕ್ ಖಾತೆಯ (Bank account) ಎಲ್ಲಾ ಸೂಕ್ಷ್ಮ ಮಾಹಿತಿಗಳನ್ನು ಕದ್ದು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಸೊನ್ನೆ ಮಾಡಬಹುದು. ಅಂಥಹ ಆಪ್ ಗಳು ನಿಮ್ಮ ಮೊಬೈಲಿನಲ್ಲಿದ್ದರೆ ಕ್ಷಣ ಮಾತ್ರವೂ ವಿಳಂಬ ಮಾಡದೇ  uninstall ಮಾಡಿಬಿಡಿ. 


ಇದನ್ನೂ ಓದಿ : ಸ್ಮಾರ್ಟ್ ಪೋನ್ ಫಟಾಫಟ್ ಚಾರ್ಜ್ ಆಗಬೇಕಾ..? ಹೀಗೆ ಮಾಡಿನೋಡಿ.!


ಬ್ಯಾಂಕ್ ಡೇಟಾ ಕದಿಯಲೆಂದೇ ಇವೆ ಕಳ್ಳ ಆಪ್ಸ್..!
ಚೆಕ್ ಪಾಯಿಂಟ್ ರಿಸರ್ಚ್  (Check Point Research) ಎಂಬ ಸಂಸ್ಥೆಯ ವರದಿಯ ಪ್ರಕಾರ, "Clast82" ಎಂಬ ಮಾಲ್ವಾರೆ ಡ್ರಾಪರ್ (malware dropper) ಎಂಟು ಕಳ್ಳ ಆಪ್ ಗಳನ್ನು ಸೃಷ್ಟಿಸಿದೆ. ನಿಮ್ಮ ಸೂಕ್ಷ್ಮ ಬ್ಯಾಂಕ್ ಡೇಟಾಗಳನ್ನು (Bank data) ಕದಿಯಲೆಂದೇ ಈ ಕಳ್ಳ ಆಪ್ ಗಳನ್ನು ಸೃಷ್ಟಿಸಲಾಗಿದೆ. ಗಮನಿಸಬೇಕಾದ ಅಂಶ ಎಂದರೆ ಗೂಗಲ್ ಪ್ಲೇ ಪ್ರೊಟೆಕ್ಟ್ (Google Play Protect) ಕೂಡಾ ಈ ಕಳ್ಳ ಆಪ್ ಗಳನ್ನು ಪತ್ತೆ ಹಚ್ಚಲು ವಿಫಲವಾಗಿದೆಯಂತೆ.  ಈ ಕಳ್ಳ ಆಪ್ ಗಳು ಎರಡು ರೀತಿಯಲ್ಲಿ ಕೆಲಸ ಮಾಡುತ್ತವೆ. 


ಮೊದಲಿಗೆ ಅವು ನಿಮ್ಮ ಬ್ಯಾಂಕ್ ಖಾತೆಯ ಎಲ್ಲಾ ಅಧಿಕೃತ ಕೋಡ್, ಪಾಸ್ ವರ್ಡ್(Password), ಖಾತೆ ವಿವರ ಇವನ್ನೆಲ್ಲಾ ಕದಿಯುತ್ತವೆ. ನಂತರ ಅವು ಇನ್ನೊಂದು ಪ್ರೊಗ್ರಾಮ್ ಇನ್ ಸ್ಟಾಲ್ ಮಾಡುತ್ತವೆ. ಅದರ ಹೆಸರು MRAT.ಈ MRAT ನಿಮ್ಮ ಮೊಬೈಲಲ್ಲಿ ಇನ್ಸ್ಟಾ ಲ್ ಆದರೆ, ಮೂರನೇ ವ್ಯಕ್ತಿ ನಿಮ್ಮ ಮೊಬೈಲನ್ನು (Mobile) ಕಂಟೋಲಿಗೆ ತೆಗೆದುಕೊಂಡು, ಅದರಲ್ಲಿ ಯಾವುದೇ ವ್ಯವಹಾರ ಮಾಡಬಹುದು.  


ಇದನ್ನೂ ಓದಿ : Paytm Holi Sale 2021: ಗೃಹೋಪಯೋಗಿ ವಸ್ತುಗಳಿಂದ ಸ್ಮಾರ್ಟ್‌ಫೋನ್‌ಗಳವರೆಗೆ ಭಾರಿ ರಿಯಾಯಿತಿ


ಇವು ಎಂಥಾ ಚಾಣಾಕ್ಷ ಕಳ್ಳ ಆಪ್‍ ಗಳೆಂದರೆ, ಇವು ನಿಮ್ಮ ಟು ಸ್ಟೆಪ್ ಅಥಂಟಿಕೇಶನ್ (two-step authentication) ಪ್ರೊಸೆಸ್ ಅನ್ನು   ಕೂಡಾ ದಾಟಿ ನಿಮ್ಮ ಖಾತೆಯ ದುಡ್ಡು ಕದಿಯಲು ಶಕ್ತವಾಗಿವೆ. ಹಾಗಾಗಿ, ಮೋಸ ಹೋಗಬೇಡಿ. ಆ ಎಂಟು ಕಳ್ಳ ಆಪ್ ಗಳ (App) ಲಿಸ್ಟ್ ಕೆಳಗಡೆ ಕೊಟ್ಟಿದ್ದೇವೆ. ಅವು ಒಂದು ವೇಳೆ ನಿಮ್ಮ ಮೊಬೈಲಿನಲ್ಲಿದ್ದರೆ ಕೂಡಲೇ ಡೀಲೀಟ್ ಮಾಡಿ. 


1. Cake VPN (com.lazycoder.cakevpns)
2. Pacific VPN (com.protectvpn.freeapp)
3. eVPN (com.abcd.evpnfree)
4. BeatPlayer (com.crrl.beatplayers)
5. QR/Barcode Scanner MAX (com.bezrukd.qrcodebarcode)
6. Music Player (com.revosleap.samplemusicplayers)
7. tooltipnatorlibrary (com.mistergrizzlys.docscanpro)
8. QRecorder (com.record.callvoicerecorder)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.