WhatsApp ನಲ್ಲಿ ಇವೆರಡು ಫೀಚರ್ಸ್​ ಬಳಸದೆ ಇದ್ರೆ ನಿಮ್ಮ ಗೌಪ್ಯತೆಗೆ ಇಲ್ಲ ಧಕ್ಕೆ!

ವಾಟ್ಸ್ಆ್ಯಪ್​ ಪ್ರೈವೆಸಿ ಪಾಲಿಸಿಯನ್ನು ನವೀಕರಿಸಲು ಮುಂದಾಗಿದ್ದು, ಬಳಕೆದಾರರಿಗೆ ನೋಟಿಫಿಕೇಶನ್​ ಕಳುಹಿಸಿದೆ.

Last Updated : Jan 17, 2021, 02:23 PM IST
  • ವಾಟ್ಸ್ಆ್ಯಪ್​ ಪ್ರೈವೆಸಿ ಪಾಲಿಸಿಯನ್ನು ನವೀಕರಿಸಲು ಮುಂದಾಗಿದ್ದು, ಬಳಕೆದಾರರಿಗೆ ನೋಟಿಫಿಕೇಶನ್​ ಕಳುಹಿಸಿದೆ.
  • ಫೆ 8 ರಿಂದ ವಾಟ್ಸ್​ಆ್ಯಪ್​​ ಸೇವಾ ನಿಯಮ ಮತ್ತು ಗೌಪ್ಯತೆ ನೀತಿಯನ್ನು ನವೀಕರಿಸುವುದಾಗಿ ತಿಳಿಸಿದ್ದು, ಇಲ್ಲದಿದ್ದಲ್ಲಿ ಖಾತೆ ಡಿಲೀಟ್​ ಆಗಲಿದೆ ಎಂದು ಹೇಳಿತ್ತು.
  • ಈ ವಿಚಾರದಿಂದ ಬೇಸತ್ತು ಅನೇಕರು ವಾಟ್ಸ್​ಆ್ಯಪ್​​ ತೊರೆದು ಬೇರೆ ಆ್ಯಪ್​ಗಳ ಮೊರೆಹೋಗಿದ್ದಾರೆ. ಟೆಲಿಗ್ರಾಂ, ಸಿಗ್ನಲ್​, ಸ್ನಾಪ್​ಚಾಟ್​​ ಮುಂತಾದ ಆ್ಯಪ್​ಗಳತ್ತ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ವಾಟ್ಸ್​​ಆ್ಯಪ್​ ತನ್ನ ಬಳಕೆದಾರರನ್ನು ಕಳೆದುಕೊಂಡು ಬಂದಿದೆ.
 WhatsApp ನಲ್ಲಿ ಇವೆರಡು ಫೀಚರ್ಸ್​ ಬಳಸದೆ ಇದ್ರೆ ನಿಮ್ಮ ಗೌಪ್ಯತೆಗೆ ಇಲ್ಲ ಧಕ್ಕೆ! title=

ವಾಟ್ಸ್ಆ್ಯಪ್​ ಪ್ರೈವೆಸಿ ಪಾಲಿಸಿಯನ್ನು ನವೀಕರಿಸಲು ಮುಂದಾಗಿದ್ದು, ಬಳಕೆದಾರರಿಗೆ ನೋಟಿಫಿಕೇಶನ್​ ಕಳುಹಿಸಿದೆ. ಫೆ 8 ರಿಂದ ವಾಟ್ಸ್​ಆ್ಯಪ್​​ ಸೇವಾ ನಿಯಮ ಮತ್ತು ಗೌಪ್ಯತೆ ನೀತಿಯನ್ನು ನವೀಕರಿಸುವುದಾಗಿ ತಿಳಿಸಿದ್ದು, ಇಲ್ಲದಿದ್ದಲ್ಲಿ ಖಾತೆ ಡಿಲೀಟ್​ ಆಗಲಿದೆ ಎಂದು ಹೇಳಿತ್ತು.

ಈ ವಿಚಾರದಿಂದ ಬೇಸತ್ತು ಅನೇಕರು ವಾಟ್ಸ್​ಆ್ಯಪ್(WhatsApp)​​ ತೊರೆದು ಬೇರೆ ಆ್ಯಪ್​ಗಳ ಮೊರೆಹೋಗಿದ್ದಾರೆ. ಟೆಲಿಗ್ರಾಂ, ಸಿಗ್ನಲ್​, ಸ್ನಾಪ್​ಚಾಟ್​​ ಮುಂತಾದ ಆ್ಯಪ್​ಗಳತ್ತ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ವಾಟ್ಸ್​​ಆ್ಯಪ್​ ತನ್ನ ಬಳಕೆದಾರರನ್ನು ಕಳೆದುಕೊಂಡು ಬಂದಿದೆ.

ಚೀನಾಗೆ 'ಬಿಗ್ ಶಾಕ್'‌ ನೀಡಿದ ಅಮೆರಿಕಾ: ಬ್ಲಾಕ್ ಲಿಸ್ಟ್ ಗೆ ಸೇರಿದ ‘Xiaomi ಸ್ಮಾರ್ಟ್‌ಫೋನ್‌’..!

ಈ ವಿಚಾರವಾಗಿ ವಾಟ್ಸ್​ಆ್ಯಪ್ ಸ್ಪಷ್ಟತೆ ನೀಡಿದ್ದು,​​ ಜಾಹೀರಾತು ಉದ್ದೇಶಗಳಿಗಾಗಿ ಬಳಕೆದಾರರ ಸಂಪರ್ಕ ಸಂಖ್ಯೆಗಳನ್ನು ಫೇಸ್​ಬುಕ್​ ನೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದಿದೆ. ವಾಟ್ಸ್​ಆ್ಯಪ್​ ಬಳಕೆದಾರರ ಸಂದೇಶಗಳನ್ನು ಓದಲು ಅಥವಾ ಬಳಕೆದಾರರ ನಡುವಿನ ಕರೆಗಳನ್ನು ಆಲಿಸುವುದಿಲ್ಲ ಎಂದು ವಾಟ್ಸ್​ಆ್ಯಪ್​ ಹೇಳಿದೆ. ಆದರೆ ವ್ಯವಹಾರ ಖಾತೆಗಳಿಗೆ ಕಳುಹಿಸಿದ ಸಂದೇಶಗಳಿಗೆ ಮಾತ್ರ ಪರಿಣಾಮ ಬೀರಳಿದೆ ಎಂದು ವಾಟ್ಸ್​ಆ್ಯಪ್​ ತಿಳಿಸಿದೆ!.

ಗಗನ ಯಾತ್ರೆಗೆ ಹೊರಟ ‘ಸಮೋಸಾ’ ..! ಹೇಗಿತ್ತುಅದರ ಬಾಹ್ಯಾಕಾಶ ಅಭಿಯಾನ.?

ವಾಟ್ಸ್​ಆ್ಯಪ್​ - ಫೇಸ್​ಬುಕ್​  ಬಳಕೆದಾರರ ಖಾಸಗಿ ಮಾಹಿತಿಯನ್ನು ಆಲಿಸಲು ಸಾಧ್ಯವಿಲ್ಲ: ವಾಟ್ಸ್​ಆ್ಯಪ್ ಬಳಕೆದಾರರಿಗೆ ವೈಯ್ಯಕ್ತಿಕ ಸಂದೇಶಗಳಿಗಾಗಿ​ ಎಂಡ್​-ಟು-ಎಂಡ್​​ ಎನ್​ಕ್ರಿಪ್ಷನ್​ ನೀಡುತ್ತದೆ ಎಂದು ತಿಳಿಸಿದೆ. ಆದರೆ ಫೇಸ್​ಬುಕ್​ ನಿಮ್ಮ ಸಂದೇಶಗಳನ್ನು ಓದಲು ಅಥವಾ ನಿಮ್ಮ ಸ್ನೇಹಿತರ ಮತ್ತು ಕುಟುಂಬದವ ಜೊತೆಗಿನ ಕರೆಗಳನ್ನು ಆಲಿಸಲು ಸಾಧ್ಯವಿಲ್ಲ ಎಂದಿದೆ.

Indonesia Earthquake 2021: ಇಂಡೊನೆಷ್ಯಾದಲ್ಲಿ ಪ್ರಬಲ ಭೂಕಂಪ, 7 ಸಾವು 100 ಕ್ಕೂ ಅಧಿಕ ಜನರಿಗೆ ಗಾಯ

ವಾಟ್ಸ್​ಆ್ಯಪ್​ ಬಳಕೆದಾರ ಸಂಪರ್ಕ(Contact) ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ: ಬಳಕೆದಾರರ ಸಂಪರ್ಕಗಳನ್ನು ಮತ್ತು ಅದನ್ನು ಒಳಗೊಂಡ ಮಾಹಿತಿಯನ್ನು ಫೇಸ್​ಬುಕ್​ ಮತ್ತು ಇತರ ಅಪ್ಲಿಕೇಶನ್​ ಜೊತೆಗೆ ಹಂಚಿಕೊಳ್ಳುವುದಿಲ್ಲ ಎಂದು ವಾಟ್ಸ್​ಆ್ಯಪ್​ ಸ್ಪಷ್ಟತೆ ನೀಡಿದೆ.

Donald Trump Impeachment: ವಿಶ್ವದ ಪ್ರಬಲ ರಾಷ್ಟ್ರಾಧ್ಯಕ್ಷಗೆ ವಾಗ್ದಂಡನೆ ಕುಣಿಕೆ

ವಾಟ್ಸ್​ಆ್ಯಪ್​ ಫೇಸ್​ಬುಕ್​ನೊಂದಿಗೆ ಏನನ್ನು ಹಂಚಿಕೊಳ್ಳುತ್ತದೆ? ವಾಟ್ಸ್​ಆ್ಯಪ್​ ತಿಳಿಸಿರುವ ಪ್ರಕಾರ, ಅಪ್ಲಿಕೇಶನ್​ನಲ್ಲಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹೇಗೆ ಸಂವಹನ ನಡೆಸುತ್ತೀರಿ ಎಂಬ ಕುರಿತಾಗಿ ಡೇಟಾ ಹಂಚಿಕೊಳ್ಳುತ್ತದೆ. ವ್ಯವಹಾರ ನಡೆಸುವ ಸಲುವಾಗಿ ಫೇಸ್​ಬುಕ್​ ಕೆಲವು ಸೇವೆಗಳನ್ನು ಶೀಘ್ರದಲ್ಲೇ ತರಲಿದೆ. ಇದರಿಂದ ಬಳಕೆದಾರರಿಗೆ ಪ್ರಯೋಜನವಾಗಲಿದೆ ಎಂದಿದೆ.

ಸರ್ವಾಧಿಕಾರಿ Kim Jong Un ಅವರಿಂದ ಮತ್ತೆ ಎಚ್ಚರಿಕೆಯ ಘಂಟೆ

ವಾಟ್ಸ್​ಆ್ಯಪ್​​ ಬ್ಯುಸಿನೆಸ್​​ ಖಾತೆಗಳು ಫೇಸ್​ಬುಕ್​ ಪ್ಲಾಟ್​ಫಾರ್ಮ್​ನಲ್ಲಿ ಪ್ರದರ್ಶವವಾಗಲಿದೆ. ಅದರ ಮೂಲಕ ಬೇಕಾದ ವಸ್ತುಗಳನ್ನು ಗ್ರಾಹಕರು ಖರೀದಿಸಲು ಅನುವು ಮಾಡಿಕೊಡಲಿದೆ. ಹಾಗಾಗಿ ಶಾಪಿಂಗ್​ ಚಟುವಟಿಕೆಯ ಡೇಟಾವನ್ನು ಫೇಸ್​ಬುಕ್​ ಹಂಚಿಕೊಳ್ಳಲಿದೆ. ಜೊತೆಗೆ ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಜಾಹೀರಾತು ಮೂಡಲು ಅನುವು ಮಾಡಿಕೊಡುತ್ತದೆ.  

ಈ ದೇಶದಲ್ಲಿ ಈಗ ಗೊರಿಲ್ಲಾಗಳಿಗೂ ಬಂತೂ ಕೊರೊನಾ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News