Amazon Great Indian Festival Sale 2021: ಶಾಪಿಂಗ್ ಮಾಡುವವರಿಗೆ HDFC Bank ನೀಡುತ್ತಿದೆ Good News, ಏನದು ಗೊತ್ತಾ ?
ಈ ಸೇಲ್ ಪ್ರೈಮ್ ಸದಸ್ಯರಿಗೆ ಅಕ್ಟೋಬರ್ 2 ರಂದು ಮತ್ತು ಉಳಿದವರಿಗೆ ಅಕ್ಟೋಬರ್ 3 ರಂದು ಪ್ರಾರಂಭವಾಯಿತು. ಇಂದು ಅಮೆಜಾನ್ ಸೇಲ್ ನ ಮೂರನೇ ದಿನ, ಮತ್ತು ಅನೇಕ ಬಳಕೆದಾರರು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿಗಳನ್ನು ಮಾಡಿದ್ದಾರೆ.
ನವದೆಹಲಿ : Amazon Great Indian Festival Sale 2021: HDFC ಬ್ಯಾಂಕ್ ತನ್ನ ಅಮೆಜಾನ್ ಸೇಲ್ ಡಿಸ್ಕೌಂಟ್ ಆಫರ್ ಅನ್ನುರಿಸೆಟ್ ಮಾಡಿದೆ. ಇದರರ್ಥ ಬಳಕೆದಾರರು ಅಮೆಜಾನ್‌ನಲ್ಲಿ (Amazon) 10% ತ್ವರಿತ ರಿಯಾಯಿತಿ ಬ್ಯಾಂಕ್ ಆಫರ್ ಪಡೆಯದಿದ್ದರೆ, ಇಂದಿನಿಂದ ಮತ್ತೊಮ್ಮೆ ಈ ಆಫರ್ ಅನ್ನು ಪಡೆಯಬಹುದು. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಸಮಯದಲ್ಲಿ ಉತ್ಪನ್ನಗಳನ್ನು ಖರೀದಿಸುವಾಗ HDFC ಬ್ಯಾಂಕ್ ಕಾರ್ಡ್ ಹೊಂದಿರುವವರು 10% ತ್ವರಿತ ರಿಯಾಯಿತಿ ಪಡೆಯಬಹುದು.
ಆಫರ್ ರಿಸೆಟ್ ಮಾಡಿದೆ HDFC ಬ್ಯಾಂಕ್ :
ಈ ಸೇಲ್ ಪ್ರೈಮ್ ಸದಸ್ಯರಿಗೆ ಅಕ್ಟೋಬರ್ 2 ರಂದು ಮತ್ತು ಉಳಿದವರಿಗೆ ಅಕ್ಟೋಬರ್ 3 ರಂದು ಪ್ರಾರಂಭವಾಯಿತು. ಇಂದು ಅಮೆಜಾನ್ ಸೇಲ್ ನ (Amazon sale) ಮೂರನೇ ದಿನ, ಮತ್ತು ಅನೇಕ ಬಳಕೆದಾರರು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳನ್ನು (HDFC Bank card) ಬಳಸಿಕೊಂಡು ಖರೀದಿಗಳನ್ನು ಮಾಡಿದ್ದಾರೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ 10% ರಿಯಾಯಿತಿ ಕೊಡುಗೆ ಕೊನೆಗೊಂಡಿದೆ. ಬ್ಯಾಂಕ್ ಆಫರ್ (Bank offer) ಅನ್ನು ರಿಸೆಟ್ ಮಾಡುವ ಹೊಸ ಪ್ರಕಟಣೆಯು ಈ ಬಳಕೆದಾರರಿಗೆ ಎರಡನೇ ಬಾರಿಗೆ ರಿಯಾಯಿತಿ ಪಡೆಯಲು ಸಹಾಯ ಮಾಡುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕಿನ ಈ ಕೊಡುಗೆ 7 ಅಕ್ಟೋಬರ್ ವರೆಗೆ ಮಾತ್ರ ಇರಲಿದೆ.
ಇದನ್ನೂ ಓದಿ : Nobel Prize 2021: ವರ್ಷ 2021ನೇ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಕಟ
ಕನಿಷ್ಠ 5 ಸಾವಿರ ರೂಪಾಯಿಗಳ ಆರ್ಡರ್ ನೀಡಬೇಕು :
ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು 10% ತ್ವರಿತ ರಿಯಾಯಿತಿಯನ್ನು ಪಡೆಯಬೇಕಾದರೆ, ಕನಿಷ್ಠ 5 ಸಾವಿರ ರೂ. ಯಷ್ಟು ಮೌಲ್ಯದ ಆರ್ಡರ್ ಅನ್ನು ನೀಡಬೇಕಾಗುತ್ತದೆ. ಸೇಲ್ ಸಮಯದಲ್ಲಿ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ (Debit card) ಹೊಂದಿರುವವರು ಇಎಂಐ ಅಲ್ಲದ ಆರ್ಡರ್ ಗಳ ಮೇಲೆ, 1,500 ರೂ .ವರೆಗೆ ರಿಯಾಯಿತಿ ಪಡೆಯುತ್ತಾರೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಇಎಂಐ ಖರೀದಿಯಲ್ಲಿ 1,750 ರೂ. ವರೆಗೆ ರಿಯಾಯಿತಿ ಇರಲಿದೆ.
ಈ ಆಫರ್ 7 ಅಕ್ಟೋಬರ್ ವರೆಗೆ ಇರಲಿದೆ :
ಈಗ, ಬ್ಯಾಂಕ್ ಆಫರ್ (Bank offer) ಅನ್ನು ರಿಸೆಟ್ ಮಾಡಿರುವುದರಿಂದ, ಬಳಕೆದಾರರು ಮತ್ತೆ ರಿಯಾಯಿತಿ ಪಡೆಯುವ ಅವಕಾಶವನ್ನು ಪಡೆಯುತ್ತಾರೆ. ಇಂದಿನಿಂದ, ರಿಯಾಯಿತಿ ಮೌಲ್ಯವು ಇಎಂಐ ಅಲ್ಲದ ಆರ್ಡರ್ ಗಳಿಗೆ 1,250 ರೂ ಮತ್ತು ಇಎಂಐ (EMI) ಆರ್ಡರ್‌ಗಳಿಗೆ 1,500 ರೂ. ವರೆಗೆ ಇರುತ್ತದೆ. ಇದು ಇಂದಿನಿಂದ ಅಂದರೆ ಅಕ್ಟೋಬರ್ 5 ರಿಂದ ಅಕ್ಟೋಬರ್ 7 ರವರೆಗೆ ಮಾನ್ಯವಾಗಿರುತ್ತದೆ.
ಇದನ್ನೂ ಓದಿ : WhatsApp ನಲ್ಲಿ ಬರುತ್ತಿದೆ ಈ ಜಬರ್ದಸ್ತ್ ವೈಶಿಷ್ಟ್ಯ, ಧ್ವನಿ ಸಂದೇಶಗಳ ಜೊತೆಗೆ ಈ ಎಲ್ಲಾ ಕೆಲಸಗಳನ್ನು ನೀವು ಮಾಡಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.