Amazon Great Indian Festivalನಲ್ಲಿ 58 ಸಾವಿರ ರೂಪಾಯಿಗಳ ರಿಯಾಯಿತಿ ದರದಲ್ಲಿ ಸಿಗಲಿದೆ 65 ಇಂಚಿನ Smart TV
ಸೇಲ್ ನಲ್ಲಿ ಲಭ್ಯವಿರುವ ರಿಯಾಯಿತಿಗಳ ಹೊರತಾಗಿಯೂ, ನೀವು ಈ ಸ್ಮಾರ್ಟ್ ಟಿವಿಯ ಮೇಲೆ ಡಿಸ್ಕೌಂಟ್ ಪಡೆಯಬಹುದು. ನಿಮ್ಮ ಹಳೆಯ ಟಿವಿಗೆ ಬದಲಾಗಿ ಅದನ್ನು ನೀವು ಖರೀದಿಸಿದರೆ, 3,870 ರೂ.ವರೆಗೆ ಹೆಚ್ಚಿನ ರಿಯಾಯಿತಿ ಸಿಗಲಿದೆ.
ನವದೆಹಲಿ : ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Great Indian Festival sale) ನಲ್ಲಿ , 65 ಇಂಚಿನ Smart TV, 58 ಸಾವಿರ ರೂಪಾಯಿಗಳ ರಿಯಾಯಿತಿ ದರದಲ್ಲಿ ಸಿಗಲಿದೆ. ಅಕ್ಟೋಬರ್ 3 ರಿಂದ sale ಆರಂಭವಾಗಿದೆ. ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಗೃಹೋಪಯೋಗಿ ವಸ್ತುಗಳವರೆಗೆ ಅದ್ಭುತ ರಿಯಾಯಿತಿಗಳು ಮತ್ತು ಕೊಡುಗೆಗಳನ್ನು ಪಡೆಯಬಹುದು. ಈ ಡೀಲ್‌ಗಳಲ್ಲಿ ಬ್ಯಾಂಕ್ ಆಫರ್‌ಗಳು, ಕ್ಯಾಶ್‌ಬ್ಯಾಕ್ ಅವಕಾಶಗಳು(Cashback offer) ಮತ್ತು ನೋ ಕಾಸ್ಟ್ EMI ಆಯ್ಕೆಗಳು ಕೂಡ ಸೇರಿವೆ. ಇಂದು ನಾವು 65 ಇಂಚಿನ ಐಫಾಲ್ಕಾನ್ ಆಂಡ್ರಾಯ್ಡ್ ಸ್ಮಾರ್ಟ್ ಟಿವಿಯಲ್ಲಿ ನಡೆಯುತ್ತಿರುವ ಆಫರ್ ಬಗ್ಗೆ ಹೇಳಲಿದ್ದೇವೆ. ಈ ಆಫರ್ ನಲ್ಲಿ ಟಿವಿ ಮೇಲೆ 58 ಸಾವಿರ ರಿಯಾಯಿತಿ ಸಿಗಲಿದೆ.
IFFALCON ನ 65 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ರಿಯಾಯಿತಿ :
iFFALCON 4K ಅಲ್ಟ್ರಾ ಎಚ್ಡಿ ಸರ್ಟಿಫೈಡ್ ಆಂಡ್ರಾಯ್ಡ್ ಸ್ಮಾರ್ಟ್ ಎಲ್ಇಡಿ ಟಿವಿ 65 ಇಂಚಿನ ಸ್ಕ್ರೀನ್ ನೊಂದಿಗೆ ಬರುತ್ತದೆ . ಅಲ್ಲದೆ ಈ ಟಿವಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್ ಟಿವಿಯ (smart Tv) ನಿಜವಾದ ಬೆಲೆ 1,06,990 ರೂ. ಆದರೆ ಈ ಸ್ಮಾರ್ಟ್ ಟಿವಿಯ ಮೇಲೆ 53,991 ರೂ ರಿಯಾಯಿತಿ ಸಿಗಲಿದೆ. ಈ ರಿಯಾಯಿತಿ ನಂತರ ಟಿವಿಯನ್ನು 52,999ರೂ . ಖರೀದಿಸಬಹುದು.
ಇದನ್ನೂ ಓದಿ : ಒಮ್ಮೆ ಚಾರ್ಜ್ ಮಾಡಿದರೆ ಏಳು ದಿನ ನಡೆಯುತ್ತದೆ ಈ Smartphone, ಅದ್ಭುತ ಕ್ಯಾಮರಾದೊಂದಿಗೆ ತೆಗೆಯಬಹುದು HD photo
ಡೀಲ್ ನಲ್ಲಿರಲಿದೆ ಸಿಗಲಿದೆ ಹೆಚ್ಚುವರಿ ಆಫರ್ :
ಸೇಲ್ ನಲ್ಲಿ (sale) ಲಭ್ಯವಿರುವ ರಿಯಾಯಿತಿಗಳ ಹೊರತಾಗಿಯೂ, ನೀವು ಈ ಸ್ಮಾರ್ಟ್ ಟಿವಿಯ ಮೇಲೆ ಡಿಸ್ಕೌಂಟ್ (Discount) ಪಡೆಯಬಹುದು. ನಿಮ್ಮ ಹಳೆಯ ಟಿವಿಗೆ ಬದಲಾಗಿ ಅದನ್ನು ನೀವು ಖರೀದಿಸಿದರೆ, 3,870 ರೂ.ವರೆಗೆ ಹೆಚ್ಚಿನ ರಿಯಾಯಿತಿ ಸಿಗಲಿದೆ.
ಹಾಗೆಯೇ, ನೀವು ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ (Credit card) ಅಥವಾ ಅಮೆರಿಕನ್ ಎಕ್ಸ್ ಪ್ರೆಸ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ (Debit card) ಬಳಸಿದರೆ, ಹೆಚ್ಚುವರಿ 10% ತ್ವರಿತ ರಿಯಾಯಿತಿ ಸಿಗುತ್ತದೆ. ಈ ರಿಯಾಯಿತಿಯ ಮೇಲಿನ ಮಿತಿ 1750 ರೂ. ಅಮೆರಿಕನ್ ಎಕ್ಸ್‌ಪ್ರೆಸ್ ಕಾರ್ಡ್ ಹೊಂದಿರುವವರಿಗೆ ಮತ್ತು ಸಿಟಿ ಬ್ಯಾಂಕ್ ಬಳಕೆದಾರರು ಗರಿಷ್ಠ 1500 ರೂ . ರಿಯಾಯಿತಿ ಸಿಗಲಿದೆ.
ಇದನ್ನೂ ಓದಿ : Fraud Alert! Gmail-Outlook ಬಳಕೆದಾರರೇ ಎಚ್ಚರ! ಈ ಖತರ್ನಾಕ್ ಲಿಂಕ್ ಮೇಲೆ ಕ್ಲಿಕ್ಕಿಸಿದರೆ...!
ಇನ್ನು ನಿಮಗೆ ಬೇಕಾದರೆ ಈ ಟಿವಿಯನ್ನು ನೋ-ಕಾಸ್ಟ್ ಇಎಂಐನಲ್ಲಿ (No cost EMI) ಖರೀದಿಸಬಹುದು. ಸರಳ ಇಎಂಐ ಬಗ್ಗೆ ಹೇಳುವುದಾದರೆ, ಇದು 2,495 ರೂ. ಯಿಂದ ಆರಂಭವಾಗುತ್ತದೆ. ಬ್ಯಾಂಕ್ ಕೊಡುಗೆಗಳು (Bank offer) ಮತ್ತು ಕ್ಯಾಶ್‌ಬ್ಯಾಕ್ ಅವಕಾಶಗಳನ್ನು ಸಹ ಇಲ್ಲಿ ಕಾಣಬಹುದು.
ಅಮೆಜಾನ್‌ನ ಸೇಲ್ (Amazon sale) ಇಡೀ ತಿಂಗಳು ನಡೆಯುವುದರಿಂದ, ಈ ಇಡೀ ತಿಂಗಳು ಇಂಥಹ ಹಲವು ಡೀಲ್‌ಗಳ ಲಾಭ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ