ಒಮ್ಮೆ ಚಾರ್ಜ್ ಮಾಡಿದರೆ ಏಳು ದಿನ ನಡೆಯುತ್ತದೆ ಈ Smartphone, ಅದ್ಭುತ ಕ್ಯಾಮರಾದೊಂದಿಗೆ ತೆಗೆಯಬಹುದು HD photo

Ulefone Power Armor 13 Rugged Smartphone ಅನ್ನು ಉತ್ತಮ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಬ್ಯಾಟರಿ ಡ್ರೈನ್ ಪರೀಕ್ಷೆ, ಕಾರ್ಯಕ್ಷಮತೆ ಪರೀಕ್ಷೆ ಮತ್ತು ಗುಣಮಟ್ಟ ಪರೀಕ್ಷೆಯ ನಂತರ, ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಾಗಿದೆ.

Written by - Ranjitha R K | Last Updated : Oct 11, 2021, 04:44 PM IST
  • Ulefone Power Armor 13, 13200mAH ಬ್ಯಾಟರಿಯನ್ನು ಹೊಂದಿದೆ.
  • ಈ ಸ್ಮಾರ್ಟ್ ಫೋನ್ ಕೇವಲ 3 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.
  • ಒಂದು ವಾರದ ಬ್ಯಾಟರಿ ಸ್ಟ್ಯಾಂಡ್‌ಬೈ ಪೂರ್ಣ ಚಾರ್ಜ್‌ನಲ್ಲಿ ಲಭ್ಯವಿರುತ್ತದೆ.
ಒಮ್ಮೆ ಚಾರ್ಜ್ ಮಾಡಿದರೆ ಏಳು ದಿನ ನಡೆಯುತ್ತದೆ ಈ Smartphone, ಅದ್ಭುತ ಕ್ಯಾಮರಾದೊಂದಿಗೆ ತೆಗೆಯಬಹುದು HD photo  title=
ಈ ಸ್ಮಾರ್ಟ್ ಫೋನ್ ಕೇವಲ 3 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. (file photo)

ನವದೆಹಲಿ : Ulefone Power Armor 13 Rugged Smartphone ಅನ್ನು ಉತ್ತಮ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಬ್ಯಾಟರಿ ಡ್ರೈನ್ ಪರೀಕ್ಷೆ, ಕಾರ್ಯಕ್ಷಮತೆ ಪರೀಕ್ಷೆ ಮತ್ತು ಗುಣಮಟ್ಟ ಪರೀಕ್ಷೆಯ ನಂತರ, ಸ್ಮಾರ್ಟ್‌ಫೋನ್‌ (Smartphone) ಅನ್ನು ಬಿಡುಗಡೆ ಮಾಡಲಾಗಿದೆ. ಈ ಫೋನ್ ನ ಹೊಸ ವೀಡಿಯೊವನ್ನು ಕೂಡಾ ಬಿಡುಗಡೆ ಮಾಡಲಾಗಿದೆ. ವಿಡಿಯೋದಲ್ಲಿ ಅದರ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ತೋರಿಸುತ್ತದೆ. Ulefone Power Armor 13 , 13200mAH ಬ್ಯಾಟರಿಯನ್ನು ಹೊಂದಿದ್ದು,  ಕೇವಲ 3 ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಆಗಲಿದೆ ಎನ್ನುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. 

ಈ ಫೋನ್ 13200mAh ಬ್ಯಾಟರಿಯನ್ನು ಹೊಂದಿದ್ದು, 33W PD ಚಾರ್ಜರ್ 3 ಗಂಟೆಗಳ ಒಳಗೆ ಫುಲ್ ಚಾರ್ಜ್ ಮಾಡುತ್ತದೆ. ವೀಡಿಯೋ (Video) ಪ್ರಕಾರ, ಮೊದಲ 10 ನಿಮಿಷಗಳಲ್ಲಿ ಸ್ಮಾರ್ಟ್ಫೋನ್ (Smartphone) 10% ಮತ್ತು ಮುಂದಿನ 30 ನಿಮಿಷಗಳಲ್ಲಿ 20% ಚಾರ್ಜ್ ಮಾಡುತ್ತದೆ. ಇದು ಒಂದು ಗಂಟೆಯಲ್ಲಿ 55 ಪ್ರತಿಶತವನ್ನು ಚಾರ್ಜ್ ಮಾಡುವಲ್ಲಿ ಯಶಸ್ವಿಯಾಗುತ್ತದೆ. ವೇಗದ ಚಾರ್ಜಿಂಗ್ ವೈಶಿಷ್ಟ್ಯವು ಸಾಕಷ್ಟು ಸಮಯವನ್ನು ಉಳಿಸುತ್ತದೆ ಎಂಬ ಪ್ರಶಂಸೆಗೆ ಪಾತ್ರವಾಗಿದೆ. 

ಇದನ್ನೂ ಓದಿ Fraud Alert! Gmail-Outlook ಬಳಕೆದಾರರೇ ಎಚ್ಚರ! ಈ ಖತರ್ನಾಕ್ ಲಿಂಕ್ ಮೇಲೆ ಕ್ಲಿಕ್ಕಿಸಿದರೆ...!

Ulefone Power Armor 13 ವಿಶೇಷತೆಗಳು :
ಆದರೂ, ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಒಂದು ವಾರದ ಬ್ಯಾಟರಿ ಸ್ಟ್ಯಾಂಡ್‌ಬೈ ಪಡೆಯಬಹುದು. ಆದ್ದರಿಂದ, ನೀವು ಗ್ರಾಮೀಣ ಪ್ರದೇಶಗಳಲ್ಲಿ ಪದೇ ಪದೇ ಪ್ರಯಾಣಿಸುತ್ತಿದ್ದರೆ, ಈ  ಸ್ಮಾರ್ಟ್ ಫೋನ್  (Smartphone) ಪರಿಗಣನೆಗೆ ಯೋಗ್ಯವಾಗಿದೆ. ಉಲೆಫೋನ್ ಪವರ್ ಆರ್ಮರ್ 13, 6.81 ಇಂಚಿನ FHD + ಡಿಸ್ಪ್ಲೇ ಹೊಂದಿದೆ. ಇದು  1080 X 2400 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿದೆ.  ಉಲೆಫೋನ್ ಪವರ್ ಆರ್ಮರ್ 13 ಹೆಲಿಯೋ ಜಿ 95 ಪ್ರೊಸೆಸರ್ ನಲ್ಲಿ ಕೆಲಸ ಮಾಡುತ್ತದೆ. ಇದರಲ್ಲಿ ನೀವು 8 GB RAM ಮತ್ತು 256 GB ಸ್ಟೋರೇಜ್ ಇರಲಿದೆ. ಸ್ಟೋರೇಜ್ ಹೆಚ್ಚಿಸಲು 1 TB SD ಕಾರ್ಡ್ ಅನ್ನು ಬಳಸಬಹುದು.

ಉಲೆಫೋನ್ ಪವರ್ ಆರ್ಮರ್ 13 ಕ್ಯಾಮೆರಾ :
ಈ ಫೋನಿನ ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾಗಳಿವೆ. ಪ್ರಾಥಮಿಕ 48 ಮೆಗಾಪಿಕ್ಸೆಲ್ ಆಗಿದೆ. ದ್ವಿತೀಯ 8 ಮೆಗಾಪಿಕ್ಸೆಲ್ ಆಗಿರುತ್ತದೆ. ಇನ್ನು ಉಳಿದ ಎರಡು ಕ್ಯಾಮೆರಾಗಳು 2-2 ಮೆಗಾಪಿಕ್ಸೆಲ್‌ಗಳಾಗಿರುತ್ತವೆ. ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಈ ಫೋನ್‌ನಲ್ಲಿ ನೀವು 4K ಫೋಟೋಗಳು ಅಥವಾ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು. 

ಇದನ್ನೂ ಓದಿ : BSNL 4G Network: BSNLನಿಂದ ಮೊಟ್ಟಮೊದಲ 4G ಕರೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News