ನವದೆಹಲಿ : ದೇಶದಲ್ಲಿ ಹೆಚ್ಚುತ್ತಿರುವ ಕರೋನಾ ಸೋಂಕಿನಿಂದಾಗಿ ಅಮೆಜಾನ್ ಇಂಡಿಯಾ ಅಮೆಜಾನ್ ಪ್ರೈಮ್ ಡೇ ಸೇಲ್ (Amazon Prime Day) ಅನ್ನು  ರದ್ದುಗೊಳಿಸಿದೆ. ಅಮೆಜಾನ್ ಪ್ರೈಮ್ ಡೇ ಸೇಲ್ ಅನ್ನು  ಪ್ರತಿ ವರ್ಷ ಜುಲೈನಲ್ಲಿ ನಡೆಸಲಾಗುತ್ತದೆ. ಈ ಸೇಲ್ ನಲ್ಲಿ ಪ್ರೈಮ್ ಸದಸ್ಯರಿಗೆ ಮಾತ್ರ ಶಾಪಿಂಗ್ ಮಾಡಲು ಅವಕಾಶವಿರುತ್ತದೆ. ಇದರಲ್ಲಿ ಅನೇಕ ಆಫರ್ ಗಳನ್ನು ನೀಡಲಾಗುತ್ತದೆ.  ಇದರಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ಫಾಸ್ಟ್ ಶಿಪಿಂಗ್ ಮೂಲಕ ವಸ್ತುಗಳನ್ನು ಬಹು ಬೇಗ ಡೆಲಿವೆರಿ ಮಾಡಲಾಗುತ್ತದೆ. 


COMMERCIAL BREAK
SCROLL TO CONTINUE READING

 ಪ್ರಸ್ತುತ ಕರೋನಾ ವೈರಸ್‌ನ (Coronavirus) ಎರಡನೇ ಅಲೆ ಭಾರತವನ್ನು ಬೆಚ್ಚಿ ಬೀಳಿಸಿದೆ. ದಾಖಲೆಯ ಮಟ್ಟದಲ್ಲಿ ಹೊಸ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ.  Amazon, Google ಸೇರಿದಂತೆ, ಅನೇಕ ಕಂಪನಿಗಳು ಸರ್ಕಾರಕ್ಕೆ ಸಹಾಯ ಮಾಡಲು ಮುಂದೆ ಬಂದಿವೆ. ದೇಶದಲ್ಲಿ ICU,  ಹಾಸಿಗೆಗಳು, ಆಮ್ಲಜನಕ ಮತ್ತು ಔಷಧಿ ನೆರವು ನೀಡಲು ಅನೇಕ ದೇಶಗಳು ಮುಂದೆ ಬಂದಿವೆ.


ಇದನ್ನೂ ಓದಿ : WhatsApp New Privacy Policy Latest News:ನೂತನ ಗೌಪ್ಯತಾ ನೀತಿ ಒಪ್ಪಿಕೊಳ್ಳದಿದ್ದರೂ ಕೆಲಸ ಮಾಡುತ್ತಾ WhatsApp? ಇಲ್ಲಿದೆ ಕಂಪನಿಯ ಅಧಿಕೃತ ಹೇಳಿಕೆ


Amazon ಪ್ರೈಮ್ ಡೇ ಸೇಲ್ ರದ್ದಾಗಿರುವ ಬಗ್ಗೆ ಮೊದಲು  CNBC ಮಾಹಿತಿ ನೀಡಿತ್ತು. ಇದಾದ ನಂತರ ಅಮೆಜಾನ್ ಕೂಡಾ ಈ ಸುದ್ದಿಯನ್ನು ದೃಢಪಡಿಸಿತು.


ಮತ್ತೊಂದೆಡೆ, ಕರೋನಾ ರೋಗಿಗಳನ್ನು (Corona Patients)  ಆಸ್ಪತ್ರೆಗೆ ದಾಖಲು ಮಾಡುವ ನಿಯಮಗಳಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಬದಲಾವಣೆ ತಂದಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಹೊಸ ಮಾರ್ಗಸೂಚಿಗಳ ಪ್ರಕಾರ, COVID ರೋಗಿಗಳಿಗೆ ಕರೋನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲು, COVID-19 ಪಾಸಿಟಿವ್ ರಿಪೋರ್ಟ್ ಹೊಂದಿರುವ ಅಗತ್ಯವಿಲ್ಲ.  


ಇದನ್ನೂ ಓದಿ : Mother's Day 2021: ನೂತನ ವೈಶಿಷ್ಟ್ಯ ಪರಿಚಯಿಸಿದ Google, ಮಕ್ಕಳಿಗೂ ಕೂಡ ಇಷ್ಟವಾಗಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.