ದುಬಾರಿಯಾಯಿತು Amazon Prime ಚಂದಾದಾರಿಕೆ, ಹೊಸ ಪ್ಲಾನ್ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ
ಕಂಪನಿಯು ಅಮೆಜಾನ್ ಪ್ರೈಮ್‌ನ ಮಾಸಿಕ ಯೋಜನೆ ಮತ್ತು ಅಮೆಜಾನ್ ಪ್ರೈಮ್‌ನ ತ್ರೈಮಾಸಿಕ ಯೋಜನೆಯ ಬೆಲೆಯನ್ನು ಸಹ ಬದಲಾಯಿಸಿದೆ.
ನವದೆಹಲಿ : ಭಾರತದಲ್ಲಿ ಅಮೆಜಾನ್ ಪ್ರೈಮ್ (Amazon Prime) ಬೆಲೆಯನ್ನು ಬದಲಾಯಿಸಲಾಗಿದೆ. ಭಾರತದಲ್ಲಿನ ಎಲ್ಲಾ ಪ್ಲಾನ್ ನಲ್ಲಿ ಶೇಕಡಾ 50 ರಷ್ಟು ಹೆಚ್ಚಳವಾಗಿದೆ. ಭಾರತದಲ್ಲಿ ಅಮೆಜಾನ್ ಪ್ರೈಮ್ ಸದಸ್ಯತ್ವವು (Amazon prime membership) ಮೊದಲು ಒಂದು ವರ್ಷಕ್ಕೆ 999 ರೂ. ಆಗಿತ್ತು. ಈಗ ಅಮೆಜಾನ್ ಪ್ರೈಮ್ ವಾರ್ಷಿಕ ಪ್ಲಾನ್ ಬೆಲೆ 1,499 ರೂ. ಆಗಿದೆ.
129 ರೂ. ಯ ಮಾಸಿಕ ಯೋಜನೆಗೆ ನೀಡಬೇಕು 179 ರೂ. :
ಕಂಪನಿಯು ಅಮೆಜಾನ್ ಪ್ರೈಮ್‌ನ (Amazon prime) ಮಾಸಿಕ ಯೋಜನೆ ಮತ್ತು ಅಮೆಜಾನ್ ಪ್ರೈಮ್‌ನ ತ್ರೈಮಾಸಿಕ ಯೋಜನೆಯ ಬೆಲೆಯನ್ನು ಸಹ ಬದಲಾಯಿಸಿದೆ. ಮೂಲ ಮಾಸಿಕ ಚಂದಾದಾರಿಕೆ ಯೋಜನೆಯು, ಡಿಸೆಂಬರ್ 14 ರಿಂದ 129 ರೂ. ಯಿಂದ 179 ರೂ.ಗೆ ಹೆಚ್ಚಳವಾಗಿದೆ.
ಇದನ್ನೂ ಓದಿ : ಉಚಿತವಾಗಿ Netflix, Amazon Prime, Disney+Hotstar ಬೇಕೇ?: ಹಾಗಾದರೆ ಈ ಕೆಲಸ ಮಾಡಿ
ತ್ರೈಮಾಸಿಕ ಪ್ಯಾಕ್ ಬೆಲೆಯಲ್ಲಿಯೂ ಹೆಚ್ಚಳ :
ಅದೇ ರೀತಿ, ಈ ಹಿಂದೆ ಇದ್ದ 329 ರೂ. ಬೆಲೆಯ ತ್ರೈಮಾಸಿಕ ಪ್ಯಾಕ್ ಈಗ ಭಾರತದಲ್ಲಿ 459 ರೂ ಗೆ ಲಭ್ಯವಿರುತ್ತದೆ. ಬೆಲೆ ಬದಲಾವಣೆಯು ಪ್ರಸ್ತುತ ಸಕ್ರಿಯ ಸದಸ್ಯತ್ವವನ್ನು ಹೊಂದಿರುವವರ ಮೇಲೆ ಪರಿಣಾಮ ಬೀರುವುದಿಲ್ಲ. Amazon Prime ಸದಸ್ಯತ್ವ ಹೊಂದಿರುವ ಗ್ರಾಹಕರಿಗೆ ಈ ಮೊದಲಿನ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಾರೆ. ಇವುಗಳು ಯೋಗ್ಯ ಪಿನ್ ಕೋಡ್‌ಗಳಿಗೆ ಒಂದು-ದಿನ/ಎರಡು-ದಿನದ ಡೆಲಿವೆರಿ , Amazon Prime ವೀಡಿಯೊ ಸದಸ್ಯತ್ವ, Amazon Prime Music ಚಂದಾದಾರಿಕೆ ಇತ್ಯಾದಿಗಳನ್ನು ಒಳಗೊಂಡಿವೆ. ವಾರ್ಷಿಕ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon great Indian festival sale) ಮತ್ತು ದೈನಂದಿನ ಲೈಟ್ನಿಂಗ್ ಡೀಲ್‌ಗಳಿಗೆ ಗ್ರಾಹಕರು ಆರಂಭಿಕ ಅಕ್ಸೆಸ್ ಪಡೆಯುತ್ತಾರೆ.
4 ವರ್ಷಗಳ ನಂತರ ಬೆಲೆ ಏರಿಕೆ :
ಅಮೆಜಾನ್ 2017 ರಿಂದ ಮೊದಲ ಬಾರಿಗೆ ಭಾರತದಲ್ಲಿ ತನ್ನ ಪ್ರೈಮ್ ಚಂದಾದಾರಿಕೆ ಬೆಲೆಯನ್ನು ಹೆಚ್ಚಿಸಿದೆ. ಈ ಸೇವೆಯನ್ನು 2016 ರಲ್ಲಿ ವರ್ಷಕ್ಕೆ 499 ರೂ. ಗಳ ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಯಿತು. ನಂತರ ಅದನ್ನು 2017 ರಲ್ಲಿ 999 ರೂ.ಗೆ ಪರಿಷ್ಕರಿಸಲಾಯಿತು.
ಇದನ್ನೂ ಓದಿ : Young Sun Like Star: ಸೂರ್ಯನ ರೀತಿ ಇರುವ ಯುವ ತಾರೆಯ ಮೇಲ್ಮೈ ಮೇಲೆ ಭಾರಿ ಸ್ಫೋಟ, ಇದು ಭೂಮಿಗೆ ಎಚ್ಚರಿಕೆಯ ಕರೆಗಂಟೆಯೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.