Young Sun Like Star: ಸೂರ್ಯನ ರೀತಿ ಇರುವ ಯುವ ತಾರೆಯ ಮೇಲ್ಮೈ ಮೇಲೆ ಭಾರಿ ಸ್ಫೋಟ, ಇದು ಭೂಮಿಗೆ ಎಚ್ಚರಿಕೆಯ ಕರೆಗಂಟೆಯೇ?

Young Sun Like Star - ವಿಜ್ಞಾನಿಗಳು ಹೇಳುವ ಪ್ರಕಾರ EK Draconis ಹೆಸರಿನ ಈ ತಾರೆ ಕೇವಲ 100 ಮಿಲಿಯನ್ ವರ್ಷಗಳಷ್ಟು ಹಳೆಯದಾಗಿದೆ. ಯುವ ಸೂರ್ಯನ (Sun) ರೀತಿಯಾಗಿರುವ ಈ ನಕ್ಷತ್ರಗಳು ಸಾಪ್ತಾಹಿಕ ಆಧಾರದ ಮೇಲೆ ಸೂಪರ್ ಫ್ಲೆಯರ್ ಹೊರಸೂಸುತ್ತವೆ.

Written by - Nitin Tabib | Last Updated : Dec 13, 2021, 06:04 PM IST
  • ಸೂರ್ಯನಂತಹ ನಕ್ಷತ್ರಗಳು ವಿದ್ಯುತ್ಕಾಂತೀಯ ವಿಕಿರಣದ ದೊಡ್ಡ ಸ್ಫೋಟಗಳನ್ನು ನಡೆಸುವ ಸಾಮರ್ಥ್ಯ ಹೊಂದಿವೆ.
  • ನಕ್ಷತ್ರಗಳು ವಾರಕ್ಕೊಮ್ಮೆ ಸೂಪರ್‌ಫ್ಲೇರ್‌ಗಳನ್ನು ಉತ್ಪಾದಿಸುತ್ತವೆ.
  • EK Draconis ಹೆಸರಿನ ನಕ್ಷತ್ರವು 100 ಮಿಲಿಯನ್ ವರ್ಷಗಳಷ್ಟು ಹಳೆಯದಾಗಿದೆ.
Young Sun Like Star: ಸೂರ್ಯನ ರೀತಿ ಇರುವ ಯುವ ತಾರೆಯ ಮೇಲ್ಮೈ ಮೇಲೆ ಭಾರಿ ಸ್ಫೋಟ, ಇದು ಭೂಮಿಗೆ ಎಚ್ಚರಿಕೆಯ ಕರೆಗಂಟೆಯೇ? title=
Young Sun Like Stars (Representational Image)

ವಾಷಿಂಗ್ಟನ್:  Young Sun Like Stars -  ಸೂರ್ಯನ ಸಣ್ಣ ಸ್ವರೂಪವು ಇತ್ತೀಚೆಗೆ ಇತರ ಯಾವುದೇ ಸೂರ್ಯನಂತಹ ನಕ್ಷತ್ರಕ್ಕಿಂತ 10 ಪಟ್ಟು ದೊಡ್ಡದಾದ ಮ್ಯಾಗ್ನೆಟಿಕ್ ಪ್ಲಾಸ್ಮಾ ಅನಿಲವನ್ನು ಸ್ಫೋಟಿಸಿದೆ ಎಂದು ಹೊಸ ಸಂಶೋಧನೆಯೊಂದು ಬಹಿರಂಗಪಡಿಸಿದೆ. EK Draconis ಹೆಸರಿನ ನಕ್ಷತ್ರವು ಕೇವಲ 100 ಮಿಲಿಯನ್  ವರ್ಷಗಳಷ್ಟು ಹಳೆಯದಾಗಿದೆ ಮತ್ತು ಇದು ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಭೂಮಿಯ (Earth) ಸೂರ್ಯನಂತೆ (Sun) ಇದ್ದಿರಬಹ್ದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬೌಲ್ಡರ್‌ನಲ್ಲಿರುವ ಕೊಲೊರಾಡೋ ವಿಶ್ವವಿದ್ಯಾಲಯದ ಮುಖ್ಯ ಸಂಶೋಧಕ ಯುಟಾ ನಟ್ಸು ಈ ಮಾಹಿತಿಯನ್ನು ನೀಡಿದ್ದಾರೆ.

ಇದನ್ನೂ ಓದಿ-Hidden River Found Under Sangam: ಗಂಗೆ-ಯಮುನೆಯ ಪವಿತ್ರ ಸಂಗಮದ ಕೆಳಗೆ ಮೂರನೇ ನದಿ, ನಿಬ್ಬೇರಗಾದ ವಿಜ್ಞಾನಿಗಳು

ಸೂರ್ಯನ ಮೇಲ್ಮೈ ಮೇಲೆ ಸಂಭವಿಸುವ ಸ್ಫೋಟಗಳು
ಸಂಶೋಧನೆಯ ಫಲಿತಾಂಶಗಳು ಸೂರ್ಯನು Coronal Mass Ejection (CME - ಪ್ಲಾಸ್ಮಾ ಅನಿಲದ ಬಬಲ್) ಅನ್ನು ಹೊರಹಾಕಲು ಸಮರ್ಥವಾಗಿದೆ ಎಂದು ಸೂಚಿಸುತ್ತದೆ, ಇದು ಇಲ್ಲಿಯವರೆಗೆ ನೇರವಾಗಿ ಗಮನಿಸಿದ ಯಾವುದೇ ಸ್ಫೋಟಕ್ಕಿಂತ ದೊಡ್ಡದಾಗಿದೆ. ಸೂರ್ಯನು  EK Draconis ಗಿಂತ ಹಳೆಯದಾಗಿರುವ ಕಾರಣ, ಅದು ತುಲನಾತ್ಮಕವಾಗಿ ಶಾಂತವಾಗಿರುತ್ತದೆ. ಸೂರ್ಯನ ಮೇಲೆ ಅಂತಹ ದೊಡ್ಡ ಎಜೆಕ್ಷನ್ಗಳು ಕಡಿಮೆಯಾಗುತ್ತಿವೆ. ಸೂರ್ಯನ ಮೇಲ್ಮೈಯಿಂದ ಏಳುವ ಈ ಸ್ಫೋಟಗಳು ಸಂಭಾವ್ಯವಾಗಿ ಭೂಕಾಂತೀಯ ಬಿರುಗಾಳಿಗಳನ್ನು ಉಂಟುಮಾಡಬಹುದು ಮತ್ತು ಅದು ಉಪಗ್ರಹಗಳನ್ನು ಅಡ್ಡಿಪಡಿಸುತ್ತದೆ. ಇವುಗಳು ಬ್ಲ್ಯಾಕ್‌ಔಟ್‌ಗಳಿಗೆ ಕಾರಣವಾಗಬಹುದು ಮತ್ತು ಇಂಟರ್ನೆಟ್ ಮತ್ತು ಇತರ ಸಂವಹನಗಳನ್ನು ಅಡ್ಡಿಪಡಿಸಬಹುದು.

ಇದನ್ನೂ ಓದಿ-Comet Leonard: ಭೂಮಿಯ ಅತ್ಯಂತ ಸನೀಹದಿಂದ ಹಾದುಹೋಗಲಿದೆ ಈ ಧೂಮಕೇತು

ಇಂತಹನ ನಕ್ಷತ್ರಗಳು ಸೂಪರ್ಫ್ಲೇರ್ಗಳನ್ನು ಉತ್ಪಾದಿಸುತ್ತವೆ
ನಟ್ಸು ಮತ್ತು ಅವರ ಸಹೋದ್ಯೋಗಿಗಳು 2019 ರಲ್ಲಿ ಸೂರ್ಯನಂತಹ ನಕ್ಷತ್ರಗಳು ಸೂಪರ್‌ಫ್ಲೇರ್‌ಗಳು ಎಂದು ಕರೆಯಲ್ಪಡುವ ವಿದ್ಯುತ್ಕಾಂತೀಯ ವಿಕಿರಣದ ದೊಡ್ಡ ಸ್ಫೋಟಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ವರದಿ ಮಾಡಿದ್ದಾರೆ. ಯುವ ಸೂರ್ಯನಂತಹ ನಕ್ಷತ್ರಗಳು ವಾರಕ್ಕೊಮ್ಮೆ ಸೂಪರ್‌ಫ್ಲೇರ್‌ಗಳನ್ನು ಉತ್ಪಾದಿಸುತ್ತವೆ ಎಂದು ಅವರು ತಮ್ಮ ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ. 

ಇದನ್ನೂ ಓದಿ-ಬಾಹ್ಯಾಕಾಶದಲ್ಲಿ ದೈತ್ಯ ಗ್ರಹ ಪತ್ತೆ, ಗಾತ್ರದಲ್ಲಿ ಗುರುಗ್ರಹಕ್ಕಿಂತ 11 ಪಟ್ಟು ದೊಡ್ಡದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News