ನವದೆಹಲಿ: ಪ್ರತಿ ವರ್ಷದಂತೆ ಅಮೆಜಾನ್ ರಿಪಬ್ಲಿಕ್ ಡೇ  ಸೇಲ್  (Amazon Republic Day Sale) ಪ್ರಾರಂಭವಾಗಿದೆ. ಈ ಬಾರಿ  ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್‌ಟಿವಿಯಲ್ಲಿ ಭಾರೀ ಆಫರ್ ಗಳನ್ನು ನೀಡಲಾಗಿದೆ. ಅಮೆಜಾನ್ ಪ್ರೈಮ್ ಸದಸ್ಯರಿಗಾಗಿ (Amazon  Prime Members) ಜನವರಿ 19 ರಿಂದ ಸೇಲ್ ತೆರೆದಿರುತ್ತದೆ.  ಜನವರಿ 20 ರಿಂದ, ಎಲ್ಲಾ ಬಳಕೆದಾರರು ಈ ಮಾರಾಟದ ಲಾಭವನ್ನು ಪಡೆಯಬಹುದು.


COMMERCIAL BREAK
SCROLL TO CONTINUE READING

ಶೇ. 70 ರಷ್ಟು ರಿಯಾಯಿತಿ :
ಸೇಲ್ ನಲ್ಲಿ, ಮೊಬೈಲ್ ಮಾತ್ರವಲ್ಲದೆ ಇತರ ಉತ್ಪನನಗಳ ಮೇಲೂ  ಶೇಕಡಾ 70 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.  ಹೋಮ್ ಸ್ಟೋರೆಜ್ ಪ್ರಾಡೆಕ್ಟ್ ಗಳ (Home storage product)ಮೇಲೆ  ಶೇ 70 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇನ್ನು, ಮಹಿಳೆಯರ ನೈಟ್ ಸೂಟ್‌ಗಳಲ್ಲಿ 60 ಪ್ರತಿಶತದಷ್ಟು ರಿಯಾಯಿತಿ ಪಡೆಯಬಹುದು.


ಇದನ್ನೂ ಓದಿ : 'ಪ್ರೈವಸಿ ಪಾಲಿಸಿ ಇಷ್ಟವಿಲ್ಲದಿದ್ದರೆ WhatsApp‌ ಬಳಸಬೇಡಿ'- ದಿಲ್ಲಿ ಹೈಕೋರ್ಟ್‌ ಸಲಹೆ


ಮೊಬೈಲ್ ಫೋನ್‌ಗಳಲ್ಲಿ 40% ರಿಯಾಯಿತಿ:
ಲಭ್ಯ ಮಾಹಿತಿಯ ಪ್ರಕಾರ, ಅಮೆಜಾನ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಮೊಬೈಲ್ ಫೋನ್‌ಗಳ  (Mobile) ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡಲಾಗತ್ತಿದೆ. . 40 ಪ್ರತಿಶತದಷ್ಟು ರಿಯಾಯಿತಿಯೊಂದಿಗೆ  ಅನೇಕ ಉತ್ತಮ ಫೋನ್‌ಗಳನ್ನು ಖರೀದಿಸಬಹುದು.


ಗೃಹೋಪಯೋಗಿ ಉಪಕರಣಗಳ ಮೇಲೂ ಭಾರೀ  ಡಿಸ್ಕೌಂಟ್:
ಗೃಹೋಪಯೋಗಿ ಉಪಕರಣಗಳು ಕೂಡಾ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಇದಲ್ಲದೆ,  ಮೈಕ್ರೊವೇವ್ (Microwave) ಉತ್ಪನ್ನಗಳಲ್ಲಿ ನೀವು ಶೇಕಡಾ 50 ರಷ್ಟು ರಿಯಾಯಿತಿ ನೀಡಲಾಗಿದೆ.


ಇದನ್ನೂ ಓದಿ :ಶೀಘ್ರದಲ್ಲೇ ಭಾರತಕ್ಕೆ PUBG ಗೇಮ್ ರೀ ಎಂಟ್ರಿ..!.


ಇನ್ನು ಎಸ್‌ಬಿಐ (SBI) ಕಾರ್ಡ್‌ಗಳಲ್ಲಿ ಹೆಚ್ಚುವರಿ ರಿಯಾಯಿತಿ ಲಭ್ಯವಿರುತ್ತದೆ. ಎಸ್‌ಬಿಐ ಕಾರ್ಡ್‌ಗಳಲ್ಲಿ ಶೇಕಡಾ 10 ರಷ್ಟು ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತಿದೆ ಎಂಬ ಮಾಹಿತಿಯೂ  ಇದೆ.


ಅಮೆರಿಕದ (America) ಕಂಪನಿ ಆ್ಯಪಲ್ ಇತ್ತೀಚೆಗೆ ಐಫೋನ್ (i Phone)ಸರಣಿಯ ಐಫೋನ್ 12 ಮಿನಿ ಹೊಸ ಮತ್ತು ಅಗ್ಗದ ರೂಪಾಂತರವನ್ನು ಬಿಡುಗಡೆ ಮಾಡಿದೆ. ಈ ಫೋನ್ ಬಗ್ಗೆ ಜನರಲ್ಲಿ ಸಾಕಷ್ಟು ಕ್ರೇಜ್ ಇದೆ. ಈ ಕಾರಣಕ್ಕಾಗಿ, ಅಮೆಜಾನ್ (Amazon) ಈ ಫೋನ್ ಅನ್ನು ತನ್ನ ಸೇಲ್‌ನಲ್ಲಿ ಸೇರಿಸಲು ನಿರ್ಧರಿಸಿದೆ. ಆಪಲ್ ಐಫೋನ್ 12 ಮಿನಿ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ಸುಮಾರು 10 ಸಾವಿರ ರೂಪಾಯಿಗಳ ರಿಯಾಯಿತಿ ಪಡೆಯಲಿದೆ. ಈ ಫೋನ್‌ನ ನಿಜವಾದ ಬೆಲೆ 69,990 ರೂ. ಆದರೆ ಸೇಲ್‌ನಲ್ಲಿ ಈ ಫೋನ್ 59,990 ರೂಗಳಿಗೆ ಲಭ್ಯವಿರುತ್ತದೆ. ಈ ಫೋನ್ 5.4-ಇಂಚಿನ ಎಕ್ಸ್‌ಡಿಆರ್ ಸೂಪರ್ ರೆಟಿನಾ ಡಿಸ್ಪ್ಲೇ ಟೆಸ್ಟ್ ಹೊಂದಿದೆ. ಫೋನ್‌ನಲ್ಲಿ 12 ಎಂಪಿ +12 ಎಂಪಿ ಡ್ಯುಯಲ್ ರಿಯರ್ ಕ್ಯಾಮೆರಾ (camera) ಸೆಟಪ್ ಜೊತೆಗೆ,  ಎ 14 ಬಯೋನಿಕ್ ಚಿಪ್‌ಸೆಟ್ ಮತ್ತು 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಒಳಗೊಂಡಿದೆ. ಈ ಫೋನಿನಲ್ಲಿ ವೈರ್‌ಲೆಸ್ ಚಾರ್ಜಿಂಗ್ ಇರುತ್ತದೆ.


ಇದನ್ನೂ ಓದಿ : Whatsapp Privacy Policy: ಕೆಟ್ಟ ಮೇಲೆ ಬುದ್ದಿ ಕಲಿತ ವಾಟ್ಸ್ ಆಪ್, ಸದ್ಯಕ್ಕಿಲ್ಲ ಗೌಪ್ಯತಾ ನೀತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.