ಶೀಘ್ರದಲ್ಲೇ ಭಾರತಕ್ಕೆ PUBG ಗೇಮ್ ರೀ ಎಂಟ್ರಿ..!.

ಭಾರತದಲ್ಲಿ ಮರು ಪ್ರವೇಶಕ್ಕಾಗಿ ಲಕ್ಷಾಂತರ PUBG ಮೊಬೈಲ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವುದರಿಂದ, ಮುಂದಿನ ದಿನಗಳಲ್ಲಿ PUBG ಮೊಬೈಲ್ ಇಂಡಿಯಾ ದೇಶದಲ್ಲಿ ಮತ್ತೆ ಪ್ರವೇಶಿಸಲಿದೆ ಎಂಬ ವದಂತಿಗಳು ಬಲವಾಗಿವೆ.

Last Updated : Jan 17, 2021, 11:45 PM IST
  • ಜನವರಿ ಎರಡನೇ ಮತ್ತು ಮೂರನೇ ವಾರದ ನಡುವೆ PUBG (PUBG Relaunch) ಅನ್ನು ಮರು ಪ್ರಾರಂಭಿಸಬಹುದು ಎನ್ನಲಾಗಿದೆ.
  • ಆದಾಗ್ಯೂ, ಮತ್ತೊಂದು ಮಾಧ್ಯಮ ವರದಿಯು ಮಾರ್ಚ್ ಗೂ ಮೊದಲು ದೇಶದಲ್ಲಿ ಆಟವನ್ನು ಪ್ರಾರಂಭಿಸುವ ಸಾಧ್ಯತೆಯಿಲ್ಲ ಎಂದು ಹೇಳಿದೆ.
ಶೀಘ್ರದಲ್ಲೇ ಭಾರತಕ್ಕೆ PUBG ಗೇಮ್ ರೀ ಎಂಟ್ರಿ..!.

ನವದೆಹಲಿ: ಭಾರತದಲ್ಲಿ ಮರು ಪ್ರವೇಶಕ್ಕಾಗಿ ಲಕ್ಷಾಂತರ PUBG ಮೊಬೈಲ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವುದರಿಂದ, ಮುಂದಿನ ದಿನಗಳಲ್ಲಿ PUBG ಮೊಬೈಲ್ ಇಂಡಿಯಾ ದೇಶದಲ್ಲಿ ಮತ್ತೆ ಪ್ರವೇಶಿಸಲಿದೆ ಎಂಬ ವದಂತಿಗಳು ಬಲವಾಗಿವೆ.

ಕೆಲವು ಮಾಧ್ಯಮ ವರದಿಗಳ ಪ್ರಕಾರ, ಜನವರಿ ಎರಡನೇ ಮತ್ತು ಮೂರನೇ ವಾರದ ನಡುವೆ PUBG (PUBG Relaunch) ಅನ್ನು ಮರು ಪ್ರಾರಂಭಿಸಬಹುದು ಎನ್ನಲಾಗಿದೆ. ಆದಾಗ್ಯೂ, ಮತ್ತೊಂದು ಮಾಧ್ಯಮ ವರದಿಯು ಮಾರ್ಚ್ ಗೂ ಮೊದಲು ದೇಶದಲ್ಲಿ ಆಟವನ್ನು ಪ್ರಾರಂಭಿಸುವ ಸಾಧ್ಯತೆಯಿಲ್ಲ ಎಂದು ಹೇಳಿದೆ.

ಇದನ್ನು ಓದಿ- ಭಾರತದಲ್ಲಿನ PUBG ಪ್ರಿಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್..! ಇಂದಿನಿಂದಲೇ ಈ ನಿಯಮ ಜಾರಿ..!

ಕಂಪನಿಯು ಡಿಸೆಂಬರ್ 2020 ರಲ್ಲಿ ಎರಡು ದೊಡ್ಡ ಪ್ರಕಟಣೆಗಳನ್ನು ಮಾಡಿದ್ದು, ಇದು ಪಬ್ಜಿ ಇಂಡಿಯಾ ಅಭಿಮಾನಿಗಳ ಭರವಸೆಯನ್ನು ಹೆಚ್ಚಿಸಲು ಕಾರಣವಾಗಿದೆ. ಪೋಷಕ ಕಂಪನಿ ಕ್ರಾಫ್ಟನ್ ಇಂಕ್ ಇತ್ತೀಚೆಗೆ ಅನೀಶ್ ಅರವಿಂದ್ ಅವರನ್ನು ಭಾರತದ ಹೊಸ ಕಂಟ್ರಿ ಮ್ಯಾನೇಜರ್ ಆಗಿ ನೇಮಿಸಿತ್ತು. ವರದಿಯ ಪ್ರಕಾರ, ಕ್ರಾಫ್ಟನ್ ಇಂಕ್ ತಂಡಕ್ಕೆ ಇನ್ನೂ ನಾಲ್ಕು ಜನರನ್ನು ಸೇರಿಸುವ ಮೂಲಕ ಹೆಚ್ಚಿನ ಜನರನ್ನು ಪಡೆದುಕೊಂಡಿದೆ. ಗಮನಾರ್ಹವಾಗಿ, ಈ ನಾಲ್ಕು ಜನರು ಟೆನ್ಸೆಂಟ್‌ನ ಭಾಗವಾಗಿದ್ದರು, ಇದು PUBG (PUBG) ಮೊಬೈಲ್‌ನ ಜಾಗತಿಕ ಆವೃತ್ತಿಯ ಹಕ್ಕುಗಳ ಜವಾಬ್ದಾರಿಯನ್ನು ಹೊಂದಿದೆ.

ಇದನ್ನು ಓದಿ- ಮಧ್ಯಪ್ರದೇಶ: ಮೊಬೈಲ್ ನಲ್ಲಿ ಆರು ಗಂಟೆ PUBG ಗೇಮ್ ಆಡಿ ಮೃತಪಟ್ಟ ಬಾಲಕ

ಏತನ್ಮಧ್ಯೆ, ಆರಂಭದಲ್ಲಿ 2020 ರ ಡಿಸೆಂಬರ್‌ನಲ್ಲಿ ಪ್ರಾರಂಭವಾಗಬೇಕಿದ್ದ ಎಫ್‌ಎಯು-ಜಿ (ಫಿಯರ್‌ಲೆಸ್ ಮತ್ತು ಯುನೈಟೆಡ್ ಗಾರ್ಡ್ಸ್) ಈಗ ಭಾರತದಲ್ಲಿ ಜನವರಿ 26 ರಂದು ಬಿಡುಗಡೆಯಾಗಲಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಎಫ್‌ಎಯು-ಜಿ ಗೀತೆಯನ್ನು ನೋಂದಣಿ ಪೂರ್ವ ಲಿಂಕ್‌ನೊಂದಿಗೆ ಹಂಚಿಕೊಂಡಿದ್ದಾರೆ.ವರದಿಗಳ ಪ್ರಕಾರ, ಎಫ್‌ಎಯು-ಜಿ 2020 ರಲ್ಲಿ ಭಾರತ ಮತ್ತು ಚೀನಾ ಸೈನ್ಯಗಳ ನಡುವೆ ಪೂರ್ವ ಲಡಾಕ್‌ನ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ನಡೆದ ಗಾಲ್ವಾನ್ ವ್ಯಾಲಿ ಮುಖಾಮುಖಿಯನ್ನು ಆಧರಿಸಿದೆ ಎನ್ನಲಾಗಿದೆ.

ಇದನ್ನು ಓದಿ- ಮಧ್ಯಪ್ರದೇಶ: ಮೊಬೈಲ್ ನಲ್ಲಿ ಆರು ಗಂಟೆ PUBG ಗೇಮ್ ಆಡಿ ಮೃತಪಟ್ಟ ಬಾಲಕ

FAU-G ಅನ್ನು ಎನ್ಕೋರ್ ಗೇಮ್ಸ್ ರಚಿಸಿದೆ ಮತ್ತು ಅಕ್ಷಯ್ ಅವರ ಮತ್ತೊಂದು ಉಪಕ್ರಮ ಬಹಾರತ್ ಕೆ ವೀರ್ ಗೆ ಸಂಬಂಧಿಸಿದೆ, ಇದು ಹುತಾತ್ಮ ಸೈನಿಕರ ಕುಟುಂಬಗಳಿಗೆ ನಿಧಿಸಂಗ್ರಹ ಇದರ ಪ್ರಮುಖ ಉದ್ದೇಶವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News