ನವದೆಹಲಿ : ಯುಎಸ್ ನ  ಐಫೋನ್ (iPhone) ತಯಾರಕ ಕಂಪನಿ ಆಪಲ್ ಇತ್ತೀಚೆಗೆ ದೊಡ್ಡ ಪ್ರಕಟಣೆಯನ್ನು ಹೊರಡಿಸಿದೆ. ಇದರ ಪ್ರಕಾರ, ಕೆಲವು ಐಫೋನಿನ  ಬ್ಯಾಟರಿಗಳನ್ನು ಉಚಿತವಾಗಿ ಬದಲಾಯಿಸಲಾಗುವುದು. ಆದರೆ, ಬ್ಯಾಟರಿ ಬದಲಾಯಿಸುವ ಮೊದಲು, ನಿಜವಾಗಿಯೂ ಫೊನಿನ ಬ್ಯಾಟರಿಯಲ್ಲಿ ಸಮಸ್ಯೆ ಇದೆಯೇ ಎಂದು ಪರೀಕ್ಷಿಸಲಾಗುವುದು. ಈ ವೇಳೆ ಬ್ಯಾಟರಿಯಲ್ಲಿ (Battery) ಏನಾದರೂ ಸಮಸ್ಯೆ ಕಂಡು ಬಂದರೆ ತಕ್ಷಣ ಫೋನ್ ಬ್ಯಾಟರಿ ಬದಲಾಯಿಸಲಾಗುವುದು. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಫೋನ್‌  ಬ್ಯಾಟರಿ ಲೈಫ್ ಬಗ್ಗೆ ಸುಳ್ಳು ಮಾಹಿತಿ ನೀಡಲಾಗುತ್ತಿದೆ ಎಂದು ಅನೇಕ iPhone 11  ಬಳಕೆದಾರರು,   ಸಾಮಾಜಿಕ ಮಾಧ್ಯಮ (Social media) ಮತ್ತು ಇಮೇಲ್ ಮೂಲಕ Apple ಕಂಪನಿಗೆ ದೂರು ನೀಡಿದ್ದರು. ಈ ದೂರಿನ ನಂತರ ಕಂಪನಿ, ಆಪಲ್ ಬ್ಯಾಟರಿಯನ್ನು ಉಚಿತವಾಗಿ ಬದಲಾಯಿಸುವ ನಿರ್ಧಾರಕ್ಕೆ ಬಂದಿದೆ.  ಕೆಲ  'ದೋಷದಿಂದಾಗಿ ಐಫೋನ್ 11 ರ ಕೆಲವು ಮಾಡೆಲ್ ಗಳ ಮೇಲೆ ಪರಿಣಾಮ ಬೀರಿವೆ. ಹೀಗಾಗಿ, ಚಾರ್ಜ್(Charge)  ಬೇಗನೇ ಖಾಲಿಯಾಗುತ್ತಿದೆ. ಹೀಗಾಗಿ ಬ್ಯಾಟರಿ ಲೈಫ್ ಮತ್ತು ಕಾರ್ಯಕ್ಷಮತೆ ಕೂಡ ಕ್ಷೀಣಿಸುತ್ತಿದೆ ಎಂದು ಕಂಪನಿ ಹೇಳಿದೆ. 


ಇದನ್ನೂ ಓದಿ: WhatsAppನಿಂದ ಹೊಸ ವೈಶಿಷ್ಟ್ಯ ಪರಿಚಯ, ಬಳಕೆದಾರರಿಗೇನು ಲಾಭ?


ಎಲ್ಲಾ 11 ಸರಣಿ ಫೋನ್‌ಗಳಲ್ಲಿ ಕಂಡುಬರುತ್ತಿರುವ ದೋಷ :  
ಮಾಧ್ಯಮ ವರದಿಗಳ ಪ್ರಕಾರ, iPhone 11 ಸರಣಿಯ ಎಲ್ಲಾ ಮಾದರಿಯಲ್ಲೂ ಸಮಸ್ಯೆಗಳು  ಕಂಡುಬರುತ್ತಿವೆ. ಆದರೂ Phone 11, iPhone 11 Pro  ಮತ್ತು iPhone 11 Pro Max ಗಳನ್ನು ಪರೀಕ್ಷೆಗೆ ಒಳಪಡಿಸಿದೆ ನಂತರವೇ ಬ್ಯಾಟರಿ ಬದಲಾಯಿಸಲಾಗುವುದು ಎಂದು ಕಂಪನಿ ಹೇಳಿದೆ.  ios 14.5 ಬಿಡುಗಡೆಯೊಂದಿಗೆ ಆಪಲ್ ಈ ದೋಷವನ್ನು ಸರಿಪಡಿಸಿದೆ ಎನ್ನಲಾಗಿದೆ. ಒಂದು ವೇಳೆ ನೀವು ಇನ್ನೂ ಸಾಫ್ಟ್ ವೇರ್ (Software) ಅಪ್ ಡೇಟ್ ಮಾಡಿಲ್ಲ ಎಂದಾದರೆ, ನಿಮ್ಮ ಫೋನಿನಲ್ಲಿಯೂ ಈ ಸಮಸ್ಯೆ ಇರಬಹುದು. 


ಮೊಬೈಲ್ ಸ್ಕ್ರೀನ್ ಮೇಲೆ ಈ ಮೆಸೇಜ್ ಕಾಣಿಸುತ್ತದೆ : 
iPhone 11 ಸೀರಿಸ್ ನ ಬಳಕೆದಾರರಲ್ಲಿ ಯಾರ ಫೋನ್ ಬ್ಯಾಟರಿಯಲ್ಲಿ ಸಮಸ್ಯೆ ಇರುತ್ತದೆಯೋ ಅವರಿಗೆ Recalibration of the battery health reporting system was not successful. An Apple Authorized Service Provider can replace the battery free of charge to restore full performance and capacity' ಎನ್ನುವ ಮೆಸೇಜ್ ಸ್ಕ್ರೀನ್ ನಲ್ಲಿ ಕಾಣಿಸುತ್ತದೆ ಎಂದು ಕಂಪನಿ ಹೇಳಿದೆ. ಅಂದರೆ ನಿಮ್ಮ ಫೋನ್ ಸ್ಕ್ರೀನ್ ಮೇಲೆ ಈ ಮೆಸೇಜ್ ಕಾಣಿಸಿಕೊಂಡರೆ, ನಿಮ್ಮ ಪೋನ್ ಬ್ಯಾಟರಿಯನ್ನು ಕೂಡಾ ಉಚಿತವಾಗಿ ಬದಲಾಯಿಸಲಾಗುವುದು. 


ಇದನ್ನೂ ಓದಿ: Prepaid Plans: ಕೈಗೆಟುಕುವ ದರದಲ್ಲಿ ಉತ್ತಮ ಪ್ರಿಪೇಯ್ಡ್ ಯೋಜನೆಗಳು, ಪ್ರತಿದಿನ 1.5GB ಗಿಂತ ಹೆಚ್ಚಿನ ಡೇಟಾ ಲಭ್ಯ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.