ನವದೆಹಲಿ: ಐಫೋನ್ ಖರೀದಿಸಬೇಕು ಎನ್ನುವುದು ಪ್ರತಿಯೊಬ್ಬನ ಬಯಕೆಯಾಗಿರುತ್ತದೆ. ಆದರೆ ಐ ಫೋನ್ (iPhone) ದುಬಾರಿಯಾದ ಕಾರಣ ಎಲ್ಲರಿಗೂ ಅದರ ವೆಚ್ಚವನ್ನು ಭರಿಸುವುದು ಸಾಧ್ಯವಾಗುವುದಿಲ್ಲ. ಆದರೆ ಈ ಬಾರಿ ಐ ಫೋನ್ ಖರೀದಿಸಬೇಕೆಂಬ ಆಸೆ ಈಡೇರಬಹುದು. ಯಾಕೆಂದರೆ ಈ ವರ್ಷ apple ಅತ್ಯಂತ ಅಗ್ಗದ  ಫೋನ್ ಬಿಡುಗಡೆಗೆ ಸಿದ್ದತೆ ಮಾಡಿಕೊಂಡಿದೆ.    


COMMERCIAL BREAK
SCROLL TO CONTINUE READING

Apple ಕಂಪನಿಯು iPhone SE Plus ಅನ್ನು ಲಾಂಚ್ ಮಾಡುವ ಸಿದ್ದತೆ ನಡೆಸಿದೆ. ಈ ಹೊಸ ಫೋನಿನಲ್ಲಿ 6.1 ಇಂಚಿನ ಡಿಸ್ ಪ್ಲೆ ಇರಲಿದೆ. ಏಪ್ರಿಲ್ ತಿಂಗಳಲ್ಲಿ ಈ iPhone SE Plus ಲಾಂಚ್ ಆಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ.  


ಇದನ್ನೂ ಓದಿ : Samsung Galaxy M02 : ಸ್ಯಾಮ್ ಸಂಗ್ ತರುತ್ತಿದೆ ಅತ್ಯಂತ ಅಗ್ಗದ ಸ್ಮಾರ್ಟ್ ಫೋನ್..! ಅದರ ಫೀಚರ್ ಮತ್ತು ಬೆಲೆ ಎಷ್ಟಿರಬಹುದು ಗೊತ್ತಾ..?
 


ಇದಕ್ಕೂ ಮೊದಲು ಬಿಡುಗಡೆಯಾದ SE ಸೀರಿಸ್ ಐ ಪೋನಿನಂತೆಯೇ ಇದರಲ್ಲೂ ಹೋಮ್ ಬಟನ್ ಇರುವುದಿಲ್ಲ ಎನ್ನಲಾಗಿದೆ. ಈ ಫೋನ್ ಮೂರು ಬಣ್ಭಗಳಲ್ಲಿ ಲಭ್ಯವಿರಲಿದೆ. ಕಪ್ಪು, ಕೆಂಪು, ಮತ್ತು ಬಿಳಿ ಬಣ್ಣಗಳಲ್ಲಿ ಹೊಸ  ಫೋನ್ ಸಿಗಲಿದೆ. 
 


ಮೂಲಗಳ ಪ್ರಕಾರ,  iPhone SE Plus, ಬೆಲೆ 36 ಸಾವಿರ ರೂಗಳ ಆಸುಪಾಸಿನಲ್ಲಿರಲ್ಲಿದೆ. ಈಗಿರುವ ಮಾಡೆಲ್ ಗಳಿಗೆ (Model) ಹೋಲಿಸಿದರೆ ಇದರ ಬೆಲೆ 7 ಸಾವಿರಗಳಷ್ಟು ಹೆಚ್ಚಿದೆ. ಆದರೆ ಹೊಸದಾಗಿ ಬಿಡುಗಡೆಯಾಗುವ iPhone ಮಾಡೆಲ್ ಎಂದು ನೋಡಿದರೆ ಈ ಬೆಲೆ ಕಡಿಮೆ ಎಂದೇ ಹೇಳಬಹುದು.  


ಇದನ್ನೂ ಓದಿ : Permanent Ban On Chinese Apps: 59 ಚೀನಾ ಆಪ್ ಗಳ ಮೇಲೆ Modi ಸರ್ಕಾರದ ಶಾಶ್ವತ ನಿಷೇಧ!


iPhone SE Plusನಲ್ಲಿ 12 ಮೆಗಾಫಿಕ್ಸಲ್ ನ ರಿಯರ್ ಕ್ಯಾಮರಾ (Camera) ಇರಲಿದೆ ಎನ್ನಲಾಗಿದೆ.  ಈ ರಿಯರ್ ಕ್ಯಾಮರಾದಲ್ಲಿ ಆಪ್ಟಕಲ್ ಇಮೇಜ್ ಸ್ಟೆಬಿಲೈಸೇಶನ್ ಮತ್ತು 6 ಪೋಟ್ರೇಟ್ ಲೈಟ್ ಇರುವ ಇಫೆಕ್ಟ್ ಇರಲಿದೆ. ಇದಲ್ಲದೆ ಸೆಲ್ಫಿಗಾಗಿ 7 ಮನೆಗಾಫಿಕ್ಸಲ್ ನ ಫ್ರಂಟ್ ಕ್ಯಾಮರಾ ಕೂಡಾ ಇರಲಿದೆ. ಈ ಫೋನ್ ನೀರು ಮತ್ತು ಧೂಳಿನಿಂದ ಹಾಳಾಗುವುದಿಲ್ಲ  ಎಂದು ಹೇಳಲಾಗಿದೆ. Appleನ  ಈ ಹೊಸ ಫೋನಿನ ಬದಿಯಲ್ಲಿ ಪವರ್ ಬಟನ್ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಕೂಡಾ  ಅಳವಡಿಸಲಾಗಿದೆ. 


https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.