Permanent Ban On Chinese Apps: 59 ಚೀನಾ ಆಪ್ ಗಳ ಮೇಲೆ Modi ಸರ್ಕಾರದ ಶಾಶ್ವತ ನಿಷೇಧ!

Permanent Ban On Chinese Apps - ಭಾರತದಲ್ಲಿ ತಾತ್ಕಾಲಿಕ ನಿಷೇಧಕ್ಕೊಳಗಾಗಿರುವ 59 ಚೀನೀ ಆಪ್ ಗಳನ್ನು (Chinese Apps) ಸರ್ಕಾರ ಶಾಶ್ವತವಾಗಿ ನಿಷೇಧಿಸಲು ಸಿದ್ಧತೆ ನಡೆಸುತ್ತಿದೆ. 

Written by - Nitin Tabib | Last Updated : Jan 26, 2021, 01:59 PM IST
  • 59 ಚೀನಾ ಆಪ್ ಗಳನ್ನು ಶಾಶ್ವತವಾಗಿ ಬ್ಯಾನ್ ಮಾಡಲು ಮುಂದಾದ ಮೋದಿ ಸರ್ಕಾರ,
  • ಈಗಾಗಲೇ ಈ ಕುರಿತು ಡೆವಲಪರ್ ಗಳಿಗೆ ಪತ್ರ ಬರೆದ ಸರ್ಕಾರ,
  • ಈ ಆಪ್ ಮಾಲೀಕರ ಉತ್ತರಕ್ಕೆ ಅಸಂತುಷ್ಟಿ ವ್ಯಕ್ತಪಡಿಸಿದೆ ಸರ್ಕಾರ
Permanent Ban On Chinese Apps: 59 ಚೀನಾ ಆಪ್ ಗಳ ಮೇಲೆ  Modi ಸರ್ಕಾರದ ಶಾಶ್ವತ ನಿಷೇಧ! title=
Permanent Ban On Chinese Apps (File Photo)

Permanent Ban On Chinese Apps - ನವದೆಹಲಿ: ಭಾರತದಲ್ಲಿ ತಾತ್ಕಾಲಿಕ ನಿಷೇಧಕ್ಕೊಳಗಾಗಿರುವ 59 ಚೀನೀ ಆಪ್ ಗಳನ್ನು ಸರ್ಕಾರ ಶಾಶ್ವತವಾಗಿ ನಿಷೇಧಿಸಲು ಸಿದ್ಧತೆ ನಡೆಸುತ್ತಿದೆ. 2020ರ ಜೂನ್ ನಲ್ಲಿ ನಿಷೇಧಕ್ಕೆ ಒಳಗಾಗಿರುವ ಈ 59 ಆಪ್ ಗಳಲ್ಲಿ ಟಿಕ್ ಟಾಕ್ (TikTok), ಯುಸಿ ಬ್ರೌಸರ್ (UC Browser) ನಂತಹ ಆಪ್ ಗಳು ಶಾಮೀಲಾಗಿವೆ.   ಗಲ್ವಾನ್‌ನಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ, ಭಾರತ ಸರ್ಕಾರ ಈ ಆಪ್ ಗಳು ಭಾರತದ ಸಾರ್ವಭೌಮತ್ವ , ಅಖಂಡತೆ, ರಕ್ಷಣೆ, ರಾಜ್ಯಗಳ ರಕ್ಷಣೆ ಹಾಗೂ ಸಾರ್ವಜನಿಕ ವ್ಯವಸ್ಥೆಗೆ ಹಾನಿಕಾರಕ ಎಂದು ಹೇಳಿ ಅವುಗಳ ಮೇಲೆ ತಾತ್ಕಾಲಿಕ ನಿಷೇಧ ವಿಧಿಸಿದೆ.

ಇದನ್ನು ಓದಿ- Budget 2021: ಕೇಂದ್ರ ‌ಬಜೆಟ್‌ನಲ್ಲಿ 'ಪ್ರತ್ಯೇಕ ಬ್ಯಾಂಕ್' ಘೋಷಣೆ ಸಾಧ್ಯತೆ

ಇದಾದ ಕೆಲ ದಿನಗಳ ಬಳಿಕ Modi ಸರ್ಕಾರ (Modi Government) ಈ ಆಪ್ ಅಭಿವೃದ್ಧಿಗೊಳಿಸಿದವರಿಗೆ ತಮ್ಮ ಪಕ್ಷವನ್ನು ಮಂಡಿಸಲು ಕಾಲಾವಕಾಶ ನೀಡಿತ್ತು. ಮಾಧ್ಯಮ ವರದಿಗಳ ಪ್ರಕಾರ ಈ ಆಪ್ ಅಭಿವೃದ್ಧಿಗೊಳಿಸಿದವರ ಪ್ರತಿಕ್ರಿಯೆಯಿಂದ ಸರ್ಕಾರ ಸಂತುಷ್ಟವಾಗಿಲ್ಲ ಹಾಗೂ ಸಮೀಕ್ಷೆಯ ಬಳಿಕ ಎಲ್ಲಾ 59 ಆಪ್ ಗಳನ್ನು ಶಾಶ್ವತವಾಗಿ ನಿಷೇಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಟಿಕ್ ಟಾಕ್ ಸೇರಿದಂತೆ 59 ಆಪ್ ಮಾಲೀಕರಿಗೆ ಈ ಹೊಸ ಸೂಚನೆಯ ನೋಟಿಸ್ ಕೂಡ ಕಳುಹಿಸಿದೆ ಎನ್ನಲಾಗುತ್ತಿದೆ. ಐಟಿ ಕಾಯ್ದೆಯ ಸೆಕ್ಷನ್ 69 A ನಿಯಮಗಳ ಅಡಿ ತನ್ನ ಸಾಮರ್ಥ್ಯವನ್ನು ಉಪಯೋಗಿಸಿ 59 ಆಪ್ ಗಳನ್ನು ಶಾಶ್ವತವಾಗಿ ನಿಷೇಧಿಸಿದೆ ಎನ್ನಲಾಗಿದೆ.

ಇದನ್ನು ಓದಿ-PMKVY : ನಿಮ್ಮ ಕನಸಿನ ಬಿಸಿನೆಸ್ ಆರಂಭಿಸಲು ಸರ್ಕಾರದಿಂದ ಪಡೆಯಿರಿ 1.5 ಲಕ್ಷ ರೂ.ವರೆಗೆ ಸಾಲ ಸೌಲಭ್ಯ

ಇದುವರೆಗೆ ಸುಮಾರು 267 ಆಪ್ ಗಳನ್ನು ನಿಷೇಧಿಸಲಾಗಿದೆ
ಸರ್ಕಾರದ ನಿಷೇಧವನ್ನು ಮೊದಲು ಘೋಷಣೆ ಮಾಡಿದವರಲ್ಲಿ ಟಿಕ್ ಟಾಕ್ ಶಾಮೀಲಾಗಿದೆ. ಈ 59 ಆಪ್ ಗಳ ಮೇಲೆ ನಿಷೇಧ ವಿಧಿಸಿದ ಒಂದು ತಿಂಗಳ ಒಳಗೆ ಸರ್ಕಾರ ಮತ್ತೆ 47 ಆಪ್ ಗಳನ್ನು ನಿಷೇಧಿಸಿತ್ತು. ಈ 47 ಆಪ್ ಗಳು ಮೊದಲು ನಿರ್ಬಂಧಿಸದ ಆಪ್ ಗಳ ಕ್ಲೋನ್ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಇದಾದ ಬಳಿಕ ಸೆಪ್ಟೆಂಬರ್ 2020 ರಲ್ಲಿ PUBG ಸೇರಿದಂತೆ 118 ಹಾಗೂ ನವೆಂಬರ್ 2020ರಲ್ಲಿ ಮತ್ತೆ 43 ಆಪ್ ಗಳನ್ನು ನಿಷೇಧಿಸಲಾಗಿತ್ತು.

ಇದನ್ನು ಓದಿ-7th Pay Commission: ಇನ್ಮುಂದೆ ನಿಂತುಹೊಗಲ್ಲ ನಿಮ್ಮ ಬಡ್ತಿ, ಸರ್ಕಾರದ ಸಿದ್ಧತೆ ಏನು ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News