ಫ್ರಿಡ್ಜ್ನಲ್ಲಿರುವ ಈ ಬಟನ್ ಒತ್ತಲು ನೀವೂ ಭಯ ಪಡುತ್ತೀರಾ? ಈ ಸುದ್ದಿಯನ್ನೊಮ್ಮೆ ಓದಿ
Defrosting Button In Fridge: ಸಾಮಾನ್ಯವಾಗಿ ಸಿಂಗಲ್ ಡೋರ್ ಫ್ರಿಡ್ಜ್‌ನಲ್ಲಿ ಫ್ರೀಜರ್ ಪಕ್ಕದಲ್ಲಿ ಒಂದು ಬಟನ್ ಇರುವುದನ್ನು ನೀವು ನೋಡಿರಬಹುದು. ಕೆಲವರು ಈ ಬಟನ್ ಪ್ರೆಸ್ ಮಾಡಿದರೆ ಏನಾಗಿಬಿಡುತ್ತೋ ಎಂದು ಹೆದರುತ್ತಾರೆ. ಆದರೆ, ಇದು ಎಷ್ಟು ಪ್ರಯೋಯನಕಾರಿ ಎಂದು ನಿಮಗೆ ತಿಳಿದಿದೆಯೇ?
Benefits Of Defrosting Button In Fridge: ಇತ್ತೀಚಿನ ದಿನಗಳಲ್ಲಿ ರೆಫ್ರಿಜರೇಟರ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಹಾಗಾಗಿ ಪ್ರಸ್ತುತ, ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ, ಗ್ರಾಮೀಣ ಭಾಗಗಳಲ್ಲೂ ಕೂಡ ಬಹುತೇಕ ಎಲ್ಲರ ಮನೆಯಲ್ಲಿಯೂ ಫ್ರಿಡ್ಜ್ ಇದ್ದೇ ಇರುತ್ತದೆ. ಮನೆಯಲ್ಲಿ ಹಣ್ಣು ತರಕಾರಿಗಳನ್ನು, ಆಹಾರವನ್ನು ತಾಜಾವಾಗಿಡಲು ಫ್ರಿಡ್ಜ್ ತುಂಬಾ ಪ್ರಯೋಜನಕಾರಿ.
ಸಾಮಾನ್ಯವಾಗಿ, ಡಬಲ್ ಡೋರ್ ಫ್ರಿಡ್ಜ್ ಕೊಳ್ಳುವವರಿಗಿಂತ ಸಿಂಗಲ್ ಡೋರ್ ಫ್ರಿಡ್ಜ್ ಕೊಳ್ಳುವವರೇ ಹೆಚ್ಚು. ಇದಕ್ಕೆ ಪ್ರಮುಖ ಕಾರಣ ಇದು ಬಜೆಟ್ ಸ್ನೇಹಿ. ಸಿಂಗಲ್ ಡೋರ್ ಫ್ರಿಡ್ಜ್‌ನಲ್ಲಿ ಫ್ರೀಜರ್ ಪಕ್ಕದಲ್ಲಿ ಒಂದು ಬಟನ್ ಇರುವುದನ್ನು ನೀವು ನೋಡಿರಬಹುದು. ಇದನ್ನು ಡಿಫ್ರಾಸ್ಟಿಂಗ್ ಬಟನ್ ಎಂತಲೂ ಕರೆಯುತ್ತಾರೆ. ಕೆಲವರು ಈ ಬಟನ್ ಪ್ರೆಸ್ ಮಾಡಿದರೆ ಏನಾಗಿಬಿಡುತ್ತೋ ಎಂದು ಹೆದರುತ್ತಾರೆ. ಆದರೆ, ಇದು ಎಷ್ಟು ಪ್ರಯೋಯನಕಾರಿ ಎಂದು ನಿಮಗೆ ತಿಳಿದಿದೆಯೇ?
ಇದನ್ನೂ ಓದಿ- ಬದಲಾಗಲಿದೆ ಸಿಮ್ ಕಾರ್ಡ್‌ನ ನಿಯಮ: ಈ ಕೆಲಸ ಮಾಡದಿದ್ರೆ ಬೀಳುತ್ತೇ 10 ಲಕ್ಷ ರೂ. ದಂಡ
ಫ್ರಿಡ್ಜ್ ಚಾಲನೆಯಲ್ಲಿರುವಾಗ ಅದು ಕೂಲ್ ಆಗಿರುತ್ತದೆ. ಈ ರೀತಿ ಕೂಲ್ ಆಗಲು ರೆಫ್ರಿಜರೇಟರ್ ಒಳಗೆ ಮಂಜುಗಡ್ಡೆ ಶೇಖರಣೆ ಆಗುತ್ತದೆ. ಆದರೆ, ಸಿಂಗಲ್ ಡೋರ್ ಫ್ರಿಡ್ಜ್‌ನಲ್ಲಿ ಹೆಚ್ಚು ಮಂಜುಗಡ್ಡೆಯು ನಿರ್ಮಾಣವಾದಾಗ ಫ್ರಿಜ್ ಅನ್ನು ಡಿಫ್ರಾಸ್ಟ್ ಮಾಡುವುದು ಮುಖ್ಯವಾಗಿದೆ. ಏಕೆಂದರೆ, ಫ್ರಿಡ್ಜ್‌ನ ಕಾರ್ಯ ಸುಗಮವಾಗಿ ಮುಂದುವರೆಯಲು ಮಂಜುಗಡ್ಡೆಯನ್ನು ಕ್ಲಿಯರ್ ಮಾಡುವುದು ಅತ್ಯಗತ್ಯ. ಇಲ್ಲದಿದ್ದರೆ ಫ್ರಾಸ್ಟ್ ಶೇಖರಣೆಯು ರೆಫ್ರಿಜರೇಟರ್‌ನ ತಂಪಾಗಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ ಇದು ಹೆಚ್ಚಿನ ವಿದ್ಯುತ್ ಅನ್ನು ಬಳಸುವುದರ ಜೊತೆಗೆ ಆಹಾರವು ತಾಜಾವಾಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಜನರು ಐಸ್ ಕರಗಲೆಂದು ಬಟನ್ ಒತ್ತುವ ಬದಲಿಗೆ ನೇರವಾಗಿ ಫ್ರಿಡ್ಜ್ ಅನ್ನೇ ಸ್ವಿಚ್ ಆಫ್ ಮಾಡುತ್ತಾರೆ. ಆದರೆ, ಪದೇ ಪದೇ ಈ ರೀತಿ ಮಾಡುವುದರಿಂದ ಇದು ನಿಮ್ಮ ಫ್ರಿಡ್ಜ್ ಸಾಮರ್ಥ್ಯವನ್ನೇ ಕುಗ್ಗಿಸುತ್ತದೆ. ಇದನ್ನು ತಪ್ಪಿಸಲು ರೆಫ್ರಿಜರೇಟರ್‌ಗಳಲ್ಲಿ ನೀಡಲಾಗಿರುವ ಡಿಫ್ರಾಸ್ಟ್ ಬಟನ್ ಅನ್ನು ಬಳಸಿ.
ಇದನ್ನೂ ಓದಿ- ನಿಮಗೂ ಪದೇ ಪದೇ ಫೋನ್‌ನ ನೆಟ್‌ವರ್ಕ್ ಸಮಸ್ಯೆ ಬಾಧಿಸುತ್ತಿದೆಯೇ? ಇಲ್ಲಿವೆ ಸುಲಭ ಪರಿಹಾರ
ರೆಫ್ರಿಜರೇಟರ್‌ನಲ್ಲಿರುವ ಡಿಫ್ರಾಸ್ಟ್ ಬಟನ್ ನ ಪ್ರಯೋಜನಗಳೇನು?
>> ರೆಫ್ರಿಜರೇಟರ್‌ಗಳಲ್ಲಿ ನೀಡಲಾಗಿರುವ ಡಿಫ್ರಾಸ್ಟ್ ಬಟನ್ ರೆಫ್ರಿಜರೇಟರ್ ನಲ್ಲಿ ಶೇಖರಣೆ ಆಗಿರುವ ಮಂಜುಗೆಡ್ಡೆಯನ್ನು ಕರಗಿಸಲು, ಡಿಫ್ರಾಸ್ಟಿಂಗ್ ಪ್ರಕ್ರಿಯೆಯನ್ನು ಸುಲಭಗೊಳಿಸಲು ತುಂಬಾ ಪ್ರಯೋಜನಕಾರಿ.
>> ಈ ಬಟನ್ ಅನ್ನು ಒಮ್ಮೆ ಪ್ರೆಸ್ ಮಾಡಿದರೆ ಫ್ರಿಜ್ ಅಗತ್ಯವಿರುವ ಸಮಯದಲ್ಲಿ ಡಿಫ್ರಾಸ್ಟ್ ಆಗುತ್ತದೆ ಮತ್ತು ಅದರ ನಂತರ ಫ್ರಿಜ್ ಮತ್ತೆ ಮೊದಲಿನಂತೆ ಕಾರ್ಯನಿರ್ವಹಿಸುತ್ತದೆ.
>> ನೀವು ಕನಿಷ್ಠ 10 ದಿನಗಳಿಗೊಮ್ಮೆ ಫ್ರಿಜ್ ಅನ್ನು ಡಿಫ್ರಾಸ್ಟ್ ಮಾಡುವುದರಿಂದ ರೆಫ್ರಿಜರೇಟರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
>> ಅಷ್ಟೇ ಅಲ್ಲ, ಇದು ರೆಫ್ರಿಜರೇಟರ್‌ನ ದಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ರೆಫ್ರಿಜರೇಟರ್ ದೀರ್ಘ ಸಮಯ ಬಾಳಿಕೆ ಬರಲು ಕೂಡ ಸಹಕಾರಿ ಆಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.