ವಾಷಿಂಗ್ಟನ್: Third Asteroid Pass Near By Earth - ಭೂಮಿಯ ಸಮೀಪವಿರುವ ವಸ್ತುಗಳ ಅಪಾಯವನ್ನು ಕಂಡುಹಿಡಿಯಲು ವಿಜ್ಞಾನಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ರೆಫ್ರಿಜರೇಟರ್ ಗಾತ್ರದ ಕ್ಷುದ್ರಗ್ರಹವು (Asteroid) ಭೂಮಿಯ 3000 ಕಿಮೀ ಒಳಗೆ ಬಂದಿತ್ತು ಮತ್ತು ವಿಜ್ಞಾನಿಗಳಿಗೆ ಅದರ ಬಗ್ಗೆ ಗೊತ್ತೇ ಆಗಿಲ್ಲ. ಕ್ಷುದ್ರಗ್ರಹ 2021 UA1 ಭೂಮಿಯ (Earth) ಅತ್ಯಂತ ಸನೀಹದಿಂದ ಹಾದುಹೋಗುವ  ಮೂರನೇ ಅತಿ ಸಮೀಪ ಕ್ಷುದ್ರಗ್ರಹವಾಗಿದೆ.


COMMERCIAL BREAK
SCROLL TO CONTINUE READING

ಈ ಕಾರಣದಿಂದಾಗಿ ವಿಜ್ಞಾನಿಗಳು ಕ್ಷುದ್ರಗ್ರಹದ ಬಗ್ಗೆ ತಿಳಿದಿಲ್ಲ
ಭಾನುವಾರ, ಈ ಕ್ಷುದ್ರಗ್ರಹವು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕಿಂತ ಹೆಚ್ಚಿನ ಎತ್ತರದಲ್ಲಿ ಅಂಟಾರ್ಕ್ಟಿಕಾದ (Antarctica) ಮೇಲೆ ಹಾದುಹೋಗಿದೆ. ವಿಜ್ಞಾನಿಗಳು ಅದರ ಎತ್ತರವು ಭೂಮಿಯ ಸುತ್ತ ಸುತ್ತುವ ಸಂವಹನ ಉಪಗ್ರಹಗಳಿಗಿಂತ ಕಡಿಮೆ ಇತ್ತು ಎಂದು ಅಂದಾಜಿಸಿದ್ದಾರೆ. 


ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಖಗೋಳಶಾಸ್ತ್ರಜ್ಞ ಟೋನಿ ಡನ್, ಈ ಕ್ಷುದ್ರಗ್ರಹದ ವ್ಯಾಸ ಕೇವಲ ಎರಡು ಮೀಟರ್, ಅಂದರೆ ಅದು ನಮ್ಮ ಗ್ರಹದ ಹತ್ತಿರ ಬಂದಿದ್ದರೆ, ಅದು ನಮ್ಮ ವಾತಾವರಣದಲ್ಲಿ ಸುಟ್ಟುಹೋಗುತ್ತಿತ್ತು ಎಂದು ಹೇಳಿದ್ದಾರೆ. ಈ ಕ್ಷುದ್ರಗ್ರಹ ಆಶ್ಚರ್ಯ ಹುಟ್ಟಿಸಲು ಕಾರಣ ಎಂದರೆ, ಅದು ಸೂರ್ಯನ ಹಿಂದೆ ಇತ್ತು. ಹಗಲಿನಲ್ಲಿ ಅದು ಭೂಮಿಯತ್ತ ಬರುತ್ತಿತ್ತು. 2021 UA1 (Asteroid 2021 UA1) ಹೆಸರಿನ ಈ ಕ್ಷುದ್ರಗ್ರಹ  ಭೂಮಿಯ ಅಂತ್ಯಂತ ಸನೀಹದಿಂದ ಹಾದು ಹೋಗುವ ಮೂರನೇ  ಕ್ಷುದ್ರಗ್ರಹವಾಗಿದೆ.


ಕ್ಷುದ್ರಗ್ರಹಗಳು ಎರಡು ಬಾರಿ ಬಹಳ ಹತ್ತಿರ ಬಂದಿವೆ 
ಭೂಮಿಯ ಇತಿಹಾಸದಲ್ಲಿ ಕೇವಲ ಎರಡು ಕ್ಷುದ್ರಗ್ರಹಗಳು ಭೂಮಿಯ ಅತ್ಯಂತ ಹತ್ತಿರಕ್ಕೆ ಬಂದಿವೆ. ಈ ಕ್ಷುದ್ರಗ್ರಹಗಳಲ್ಲಿ ಒಂದು 2020 ಕ್ಯೂಜಿ ದಕ್ಷಿಣ ಹಿಂದೂ ಮಹಾಸಾಗರದ ಮೇಲೆ ಭೂಮಿಯಿಂದ ಕೇವಲ 1,830 ಮೈಲುಗಳಷ್ಟು ದೂರದಿಂದ ಹಾದುಹೋಗಿದೆ.  ಅದರ ಗಾತ್ರವು ತುಂಬಾ ಚಿಕ್ಕದಾಗಿದ್ದರೂ ಅದು ಭೂಮಿಗೆ ಯಾವುದೇ ಅಪಾಯವನ್ನುಂಟು ಮಾಡಿರಲಿಲ್ಲ. ಎರಡನೇ ಕ್ಷುದ್ರಗ್ರಹ 2020 VT4 ಕಳೆದ ವರ್ಷ ನವೆಂಬರ್‌ನಲ್ಲಿ ಭೂಮಿಯಿಂದ ಕೆಲವು ನೂರು ಮೈಲುಗಳಷ್ಟು ದೂರದಿಂದ ಹಾದುಹೋಗಿತ್ತು.


ಇದನ್ನೂ ಓದಿ-Moons Long Lost Twin: ಸಿಕ್ಬಿಟ್ಟ ಚಂದಿರನ ಕಳೆದುಹೋದ ಅವಳಿ ಸಹೋದರ! ವಿಜ್ಞಾನಿಗಳು ಹೇಳಿದ್ದೇನು?


ವಿಜ್ಞಾನಿಗಳ ಪ್ರಕಾರ, ಕ್ಷುದ್ರಗ್ರಹಗಳು ಭೂಮಿಗೆ ಹಾನಿ ಮಾಡಲು ತುಂಬಾ ಚಿಕ್ಕದಾಗಿದ್ದವು.  ಆದರೆ, ವಿಜ್ಞಾನಿಗಳು ದೊಡ್ಡ ಕ್ಷುದ್ರಗ್ರಹದ ಬೆದರಿಕೆಯನ್ನು ಎದುರಿಸಲು ತಮ್ಮ ಸಿದ್ಧತೆಯನ್ನು ಈಗಾಗಲೇ ಆರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ. 


ಇದನ್ನೂ ಓದಿ-World's First Trillionaire! ವಿಶ್ವದ ಮೊದಲ Trillionaire ಆಗಲಿದ್ದಾರೆಯೇ SpaceX ಸಂಸ್ಥಾಪಕ Elon Musk?


ನಾಸಾದ (NASA) ಮಿಷನ್
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಕ್ಷುದ್ರಗ್ರಹವನ್ನು ಅರ್ಥಮಾಡಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ನಾಸಾದ 'ಸೈಕಿ ಮಿಷನ್' ಮತ್ತು 'ಡಾರ್ಟ್ ಮಿಷನ್' ಈ ಬಗ್ಗೆ ಕಾರ್ಯನಿರ್ವಹಿಸುತ್ತಿವೆ. ನಾಸಾದ ಡಾರ್ಟ್ ಮಿಷನ್ ಅಡಿಯಲ್ಲಿ, ಬಾಹ್ಯಾಕಾಶ ನೌಕೆಯು ಕ್ಷುದ್ರಗ್ರಹದೊಂದಿಗೆ ವೇಗವಾಗಿ ಡಿಕ್ಕಿ ಹೊಡೆಯಲಿದೆ ಮತ್ತು ಅದನ್ನು ಪ್ರಭಾವಿತಗೊಳಿಸಲಿದೆ.  NASA ದ ಈ ಕಾರ್ಯಾಚರಣೆಯ ಹೆಸರು DART ಅಂದರೆ Double Asteroid Redirection Test ಆಗಿದೆ.


ಇದನ್ನೂ ಓದಿ-Mystery Island: ಎಲ್ಲಿದೆ ಈ ಭಯಾನಕ ನಡುಗಡ್ಡೆ, Google Mapನಲ್ಲಿ ನೋಡಿದ ಜನರು ಭಯಬೀತರಾಗಿ ಹೇಳಿದ್ದೇನು ಗೊತ್ತಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.