World's First Trillionaire! ವಿಶ್ವದ ಮೊದಲ Trillionaire ಆಗಲಿದ್ದಾರೆಯೇ SpaceX ಸಂಸ್ಥಾಪಕ Elon Musk?

World's First Trillionaire! ಈ ಕುರಿತು "SpaceX Escape Velocity" ನೋಟ್ ನಲ್ಲಿ ಬರೆದಿರುವ ಮಾರ್ಗನ್ ಸ್ಟಾನ್ಲಿಯ ಆಡಮ್ ಜೋನಾಸ್, ಖಾಸಗಿ ಸ್ಪೇಸ್ ಎಕ್ಸ್ ಪ್ಲೋರೇಶನ್ ಕಂಪನಿ ತನ್ನ ರಾಕೆಟ್, ಉಡಾವಣಾ ವೆಹಿಕಲ್ ಹಾಗೂ ಸಹಾಯಕ ಮೂಲ ಸೌಕರ್ಯ ಚೌಕಟ್ಟಿನ ಸಹಾಯದಿಂದ ಪೂರ್ವಾಗ್ರಹಕ್ಕೆ ಸವಾಲೆಸಗಲಿದೆ ಎಂದು ಹೇಳಿದ್ದಾರೆ. 

Written by - Nitin Tabib | Last Updated : Oct 20, 2021, 03:19 PM IST
  • ವಿಶ್ವದ ಮೊದಲ ಟ್ರಿಲಿಯನೆರ್ ಆಗಲಿದ್ದಾರೆಯೇ ಎಲಾನ್ ಮಸ್ಕ್
  • Morgan Stanley ತಜ್ಞರು ನುಡಿದ ಭವಿಷ್ಯವೇನು?
  • ತಿಳಿಯಲು ಸಂಪೂರ್ಣ ವರದಿಯನ್ನು ಓದಿ.
World's First Trillionaire! ವಿಶ್ವದ ಮೊದಲ Trillionaire ಆಗಲಿದ್ದಾರೆಯೇ SpaceX ಸಂಸ್ಥಾಪಕ Elon Musk? title=
World's First Trillionaire! (File Photo)

ನ್ಯೂಯಾರ್ಕ್:  World's First Trillionaire! -  ಟೆಸ್ಲಾ(Tesla)  ಸಹ-ಸಂಸ್ಥಾಪಕ ಮತ್ತು ಬಿಲಿಯನೇರ್ ಎಲಾನ್ ಮಸ್ಕ್  (Elon Musk) ಈಗಾಗಲೇ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಆದರೆ ಇದೀಗ ಅವರು ವಿಶ್ವದ ಮೊದಲ ಟ್ರಿಲಿಯನೇರ್ ಆಗುವತ್ತ ವೇಗವಾಗಿ ಸಾಗುತ್ತಿದ್ದಾರೆ ಎನ್ನಲಾಗಿದೆ. ಮೋರ್ಗನ್ ಸ್ಟಾನ್ಲಿ (Morgan Stanley) ತಜ್ಞರು ಅವರ ಸ್ಪೇಸ್‌ಎಕ್ಸ್  (SpaceX) ಕಂಪನಿಯು ಮುಂದಿನ ದಿನಗಳಲ್ಲಿ ಬಹುದೊಡ್ಡ ಪ್ರಗತಿಯನ್ನು ಸಾಧಿಸಲಿದೆ  ಎಂದು ಭವಿಷ್ಯ ನುಡಿದಿದ್ದಾರೆ.

ಈ ಕುರಿತು "SpaceX Escape Velocity" ನೋಟ್ ನಲ್ಲಿ ಬರೆದಿರುವ ಮಾರ್ಗನ್ ಸ್ಟಾನ್ಲಿಯ ಆಡಮ್ ಜೋನಾಸ್, ಖಾಸಗಿ ಸ್ಪೇಸ್ ಎಕ್ಸ್ ಪ್ಲೋರೇಶನ್ ಕಂಪನಿ ತನ್ನ ರಾಕೆಟ್ ಗಳು, ಉಡಾವಣಾ ವೆಹಿಕಲ್ ಹಾಗೂ ಸಹಾಯಕ ಮೂಲ ಸೌಕರ್ಯ ಚೌಕಟ್ಟಿನ ಸಹಾಯದಿಂದ ಪೂರ್ವಾಗ್ರಹಕ್ಕೆ ಸವಾಲೆಸಗುತ್ತಿದೆ ಎಂದು ಹೇಳಿದ್ದಾರೆ. ಸ್ಪೇಸ್ ಎಕ್ಸ್ ಗತಿಗಿಂತಲೂ ವೇಗವಾಗಿ ಸಾಗುತ್ತಿದೆ ಮತ್ತು ಅದನ್ನು ಹಿಡಿಯುವುದು ಅಸಾಧ್ಯ ಎಂದು ಅವರು ಹೇಳಿದ್ದಾರೆ. 

ಬ್ಲೂಮ್ ಬರ್ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ, ಪ್ರಸ್ತುತ ಸ್ಪೇಸ್ ಎಕ್ಸ್, ಎಲಾನ್ ಮಾಸ್ಕ ಅವರ ಒಟ್ಟು ಆಸ್ತಿಯಾಗಿರುವ 241.4 ಬಿಲಿಯನ್ ಡಾಲರ್ ಗಳ ಶೇ.17ಕ್ಕಿಂತ ಕಡಿಮೆ ಭಾಗ ಹೊಂದಿದೆ. ಹಾಗೂ ಈ ತಿಂಗಳು ಷೇರಿನಲ್ಲಾದ  ಜಂಪ್ ನಿಂದ ಕಂಪನಿಯ ಒಟ್ಟು ಮೌಲ್ಯ 100 ಬಿಲಿಯನ್ ಡಾಲರ್ ಗೆ ತಲುಪಿದೆ.

ಇದನ್ನೂ ಓದಿ-SpaceX Tour: ಕಕ್ಷೆಯಲ್ಲಿ ಯಶಸ್ವಿಯಾಗಿ 3 ದಿನ ಕಳೆದು ಭೂಮಿಗೆ ಮರಳಿದ ಪ್ರವಾಸಿಗರು..!

ಸ್ಪೇಸ್‌ಎಕ್ಸ್‌ಗಾಗಿ $ 200 ಬಿಲಿಯನ್ ಬುಲ್-ಕೇಸ್ ಮೌಲ್ಯಮಾಪನವನ್ನು ಹೊಂದಿರುವ ಜೊನಸ್ ಅವರು ಸ್ಪೇಸ್‌ಎಕ್ಸ್ ಅನ್ನು ಒಂದಕ್ಕಿಂತ ಹೆಚ್ಚಾಗಿ ಕಂಪನಿಗಳ ಗುಂಪು ಎಂದು ಪರಿಗಣಿಸುವುದಾಗಿ ಬರೆದಿದ್ದಾರೆ. ಇದು ಬಾಹ್ಯಾಕಾಶ ಮೂಲಸೌಕರ್ಯ, ಭೂಮಿಯ ವೀಕ್ಷಣೆ, ಆಳವಾದ ಬಾಹ್ಯಾಕಾಶ ಪರಿಶೋಧನೆ ಮತ್ತು ಇತರ ವ್ಯವಹಾರಗಳನ್ನು ಒಳಗೊಂಡಿದೆ. ಅದರ ಸ್ಟಾರ್‌ಲಿಂಕ್ ಉಪಗ್ರಹ-ಸಂವಹನ ವ್ಯವಹಾರವು ಇಡೀ ಕಂಪನಿಗೆ ಅಪಾರ ಕೊಡುಗೆ ನೀಡಿದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-Back-Up Of Brain: ಕಂಪ್ಯೂಟರ್ ನಂತೆ ಮಾನವನ ಮೆದುಳಿನ ಬ್ಯಾಕ್ ಅಪ್ ಕೂಡ ಪಡೆಯಬಹುದು ನಿಮಗೆ ಗೊತ್ತಾ?

ಟೆಸ್ಲಾ ಕಂಪನಿಯ ಅಂದಾಜು ಷೇರುಗಳ ಪರ್ಫಾರ್ಮೆನ್ಸ್ ಹಿನ್ನೆಲೆ ಮಸ್ಕ (Elon Musk) ಅವರನ್ನು ಈ ಮೊದಲು ಕೂಡ ವಿಶ್ವದ ಮೊದಲ ಟ್ರಿಲಿಯನೆರ್ ಎಂದು ನೋಡಲಾಗಿದೆ. ಟೆಸ್ಲಾ ಕಂಪನಿಯ ಈ ರೆಡ್ ಹಾಟ್ ರನ್ ಕಳೆದ ವರ್ಷವೇ ಆರಂಭಗೊಂಡಿದ್ದು, ಮಸ್ಕ್ ಅವರ ನಿವ್ವಳ ಮೌಲ್ಯವನ್ನು ಹೆಚ್ಚಿಸಿದೆ. ಆದರೆ, ಕಥೆ ಇನ್ನೂ ಮುಗಿದಿಲ್ಲ. ಏಕೆಂದರೆ ಕಳೆದ ಸೋಮವಾರ ಒಂದೇ ದಿನದಲ್ಲಿ ಮಸ್ಕ್ ಅವರ ನೆಟ್ ವರ್ತ್ ನಲ್ಲಿ 6.6 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ. 

ಇದನ್ನೂ ಓದಿ-ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು 100 ಮಿಲಿಯನ್ ಡಾಲರ್ ಬಹುಮಾನ ಘೋಷಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News