ನವದೆಹಲಿ: Moons Long Lost Twin - ಇತ್ತೀಚಿನ ವರದಿಗಳ ಪ್ರಕಾರ, ವಿಜ್ಞಾನಿಗಳು ಚಂದ್ರನ ದೀರ್ಘಕಾಲ ಕಳೆದುಹೋದ ಅವಳಿಯನ್ನು (Twin Moon) ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ. ಅಂದರೆ, ಮಂಗಳ ಗ್ರಹದ ಹಿಂದೆ ಅಡಗಿರುವ ಚಂದ್ರನಂತಹ ಕ್ಷುದ್ರಗ್ರಹವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ ಎಂದು ನಂಬಲಾಗಿದೆ. ಈ ಕ್ಷುದ್ರಗ್ರಹವು ಚಂದ್ರನ ಕಳೆದುಹೋದ ಅವಳಿ ಆಗಿರುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಹೊಸ ಕ್ಷುದ್ರಗ್ರಹವು ಚಂದ್ರನಂತೆ ಕಾಣುತ್ತಿದ್ದರೂ, ಇದು ವಾಸ್ತವದಲಿ ಚಂದ್ರನಲ್ಲ, ಆದರೆ ಇದೊಂದು ಟ್ರೋಜನ್ ಕ್ಷುದ್ರಗ್ರಹ. ಈ ಹೊಸ ಗ್ರಹದ ಬಗ್ಗೆ ತಿಳಿಯೋಣ ಬನ್ನಿ.
ಈ ಕ್ಷುದ್ರಗ್ರಹದ ಹೆಸರೇನು?
ನ್ಯಾಶನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಪ್ರಕಾರ (101429) 1998 VF31 ಹೆಸರಿನ ಈ ಕ್ಷುದ್ರಗ್ರಹವು ಚಂದ್ರನಂತೆಯೇ ಸುಮಾರು 1 ಕಿಮೀ ವ್ಯಾಸವನ್ನು ಹೊಂದಿದೆ ಹಾಗೂ ಇದು ಮಾರ್ಸ್ ಕ್ರಾಸಿಂಗ್ ಅಸ್ಟ್ರಾಯಿಡ್ ಆಗಿದೆ.
ವಿಜ್ಞಾನಿಗಳು ಹೇಳುವುದೇನು?
ಕ್ಷುದ್ರಗ್ರಹ 101429 ರ ಸಂರಚನೆಯನ್ನು ಉತ್ತರ ಐರ್ಲೆಂಡ್‌ನ ಅರ್ಮಾಗ್ ವೀಕ್ಷಣಾಲಯ ಮತ್ತು ತಾರಾಲಯದ ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಪತ್ತೆಹಚ್ಚಿದ್ದಾರೆ. ಇದರ ಫಲಿತಾಂಶಗಳನ್ನು Icarus General ನ ಜನವರಿ 2021 ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.
ಹೊಸ ಸಂಶೋಧನೆಯ ಪ್ರಮುಖ ಲೇಖಕ ಡಾ. ಅಪೊಸ್ಟೋಲೋಸ್ ಕ್ರಿಸ್ಟೋ ಹೇಳುವ ಪ್ರಕಾರ, ಈ ಕ್ಷುದ್ರಗ್ರಹವು ಚಂದ್ರನ (Second Moon) ಬಣ್ಣವನ್ನು ಹೊಂದಿದೆ. ಆಳವಾದ ವಿಶ್ಲೇಷಣೆಯು ಈ ಕ್ಷುದ್ರಗ್ರಹವು ಪೈರೋಕ್ಸೀನ್ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ ಎಂದು ತಿಳಿಸುತ್ತದೆ. ಚಂದ್ರನ ಭಾಗಗಳನ್ನು ಕಂಡುಹಿಡಿಯುವುದು ಅಸಾಧ್ಯವೆಂದು ತೋರುತ್ತಿದ್ದವು, ಆದರೆ ಇದೀಗ ಅದರ ಒಂದು ಆಧಾರವು ಮುನ್ನೆಲೆಗೆ ಬಂದಂತೆ ತೋರುತ್ತಿದೆ ಎಂದು ಅವರು ಹೇಳಿದ್ದಾರೆ.
ನಿಜವಾಗಲು ಇವನು ಎರಡನೇ ಚಂದಿರನೆ?
ಗಾರ್ಡಿಯನ್ ನಲ್ಲಿ ಪಕಟಗೊಂಡ ವರದಿ ಪ್ರಕಾರ ಚಂದ್ರನ ಸಣ್ಣ ಭಾಗ ಒಡೆದು ಮಂಗಳ ಗ್ರಹದಲ್ಲಿ ಸಿಲುಕಿರುವ ಸಾಧ್ಯತೆ ಇದೆ. ಆದರೆ, ಈ ಕ್ಷುದ್ರಗ್ರಹವು ಮಂಗಳದ ತುಂಡು ಆಗಿರುವ ಸಾಧ್ಯತೆಯನ್ನು ಕೂಡ ಕೆಲವರು ವರ್ತಿಸಿದ್ದಾರೆ.
ಇಂತಹ ಬೇರೆ ಯಾವುದೇ ಕ್ಷುದ್ರಗ್ರಹ ಇದೆಯೇ? ಹೌದು, ಆದರೆ ಇದು ವಿಭಿನ್ನವಾಗಿದೆ ಏಕೆಂದರೆ ಇತರ ಕ್ಷುದ್ರಗ್ರಹಗಳು ಪರಸ್ಪರ ಸಂಬಂಧ ಹೊಂದಿರುತವೆ. ಜನವರಿ 2021 ರಲ್ಲಿ ಪ್ರಕಟವಾಗಿರುವ ಈ ಸಂಶೋಧನೆಯು ಇದು ಮಂಗಳನಿಂದ ಹುಟ್ಟಿಕೊಂಡ ಕ್ಷುದ್ರಗ್ರಹ ಎಂದು ಹೇಳುತ್ತದೆ, ಇದು ದೊಡ್ಡ ಪ್ರತ್ಯೇಕ ಕ್ಷುದ್ರಗ್ರಹ ಅಥವಾ ಚಂದ್ರ ಆಗಿರುವ ಸಾಧ್ಯತೆ ಇದೆ.
ಹೇಗೆ ಪತ್ತೆ ಹಚ್ಚಲಾಗಿದೆ? (Asteroid News)
ವರದಿಗಳ ಪ್ರಕಾರ, ಚಿಲಿಯಲ್ಲಿರುವ ಯುರೋಪಿಯನ್ ಸದರ್ನ್ ಅಬ್ಸರ್ವೇಟರಿಯಲ್ಲಿ (ESA) ವಿಜ್ಞಾನಿಗಳು ಇದನ್ನು ಪತ್ತೆಹಚ್ಚಲು ಬಹುದೊಡ್ಡ ಸ್ಪೆಕ್ಟ್ರೋಗ್ರಾಫ್ ಅನ್ನು ಬಳಸಿದ್ದಾರೆ. ಕ್ಷುದ್ರಗ್ರಹದ ಮೇಲ್ಮೈ ಬಣ್ಣಗಳನ್ನು ಹೇಗೆ ಪ್ರತಿಬಿಂಬಿಸುತ್ತದೆ ಎಂಬುದನ್ನು ನೋಡಲು ಈ ಸ್ಪೆಕ್ಟ್ರೋಗ್ರಾಫ್ ಬಳಸಲಾಗಿದೆ. ಸ್ಪೆಕ್ಟ್ರೋಗ್ರಾಫ್ ಸಂಗ್ರಹಿಸಿದ ಮಾಹಿತಿಯೊಂದಿಗೆ, ಸಂಶೋಧಕರು ದತ್ತಾಂಶಗಳನ್ನೂ ವಿಶ್ಲೇಷಿಸಿದ್ದಾರೆ ಮತ್ತು ಅದನ್ನು ಇತರ ಬಾಹ್ಯಾಕಾಶ ಕಾಯಗಳೊಂದಿಗೆ ಹೋಲಿಸಿದ್ದಾರೆ.
ಕ್ಷುದ್ರಗ್ರಹದ ರಚನೆಯು ಸಾಮಾನ್ಯ ಉಲ್ಕಾಶಿಲೆಯಂತೆಯೇ ಇರಬಹುದೆಂದು ತಂಡವು ಮೊದಲೇ ನಂಬಿತ್ತು. ಈ ಕ್ಷುದ್ರಗ್ರಹವು ಇತರ ಸಣ್ಣ ಕಾಯಗಳೊಂದಿಗೆ ಅಲ್ಲ ಆದರೆ ಚಂದ್ರನೊಂದಿಗೆ ಇದೆ ಎಂದು ವಿಶ್ಲೇಷಣೆಯ ಸಮಯದಲ್ಲಿ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಇದನ್ನೂ ಓದಿ-NASA Video: ಚಂದ್ರನ ದಕ್ಷಿಣ ಧ್ರುವದಿಂದ ಭೂಮಿ ಹೇಗೆ ಕಾಣಿಸುತ್ತೆ ಗೊತ್ತಾ? ವಿಡಿಯೋ ನೋಡಿ
ಟ್ರೋಜನ್ ಕ್ಷುದ್ರಗ್ರಹಗಳು (Trojan Asteroids)ಸಾಮಾನ್ಯವಾಗಿ ಚಂದ್ರ ಅಥವಾ ಗ್ರಹಗಳಂತಹ ದೊಡ್ಡ ಆಕಾಶಕಾಯಗಳೊಂದಿಗೆ ಚಲಿಸುವ ಸಣ್ಣ ಆಕಾಶಕಾಯಗಳಾಗಿವೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-Moon Latest News: ಭೂವಿಯಿಂದ ಮುನಿಸಿಕೊಳ್ಳುತ್ತಿದ್ದಾನೆಯೇ ಚಂದಿರ? ಹೌದು ಎನ್ನುತ್ತೆ ಈ ವರದಿ
(Disclaimer: ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಧ್ಯಮಗಳಲ್ಲಿ ಪ್ರಕಟಗೊಂಡ ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಝೀ ಹಿಂದುಸ್ತಾನ್ ಕನ್ನಡ ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರನ್ನು ಸಂಪರ್ಕಿಸಲು ವಿನಂತಿ)
ಇದನ್ನೂ ಓದಿ-Harvest Moon : ಆಗಸದಲ್ಲಿಕಾಣಿಸಲಿದೆ ಚಂದ್ರನ ಅದ್ಭುತ ನೋಟ , ಇನ್ನೂ ಎರಡು ದಿನಗಳವರೆಗೆ ಕಾಣಬಹುದು ಈ ಅಮೋಘ ದೃಶ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ