ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ಪ್ರವೃತ್ತಿ ಹೆಚ್ಚಾಗಿದೆ.ಹೆಚ್ಚಿನ ಜನರು ತಮ್ಮ ಫೋನ್ ಅನ್ನು ಒಂದು ಅಥವಾ ಎರಡು ವರ್ಷಗಳ ಕಾಲ ಬಳಸಿ ನಂತರ ಹೊಸ ಫೋನ್ ಖರೀದಿಸುತ್ತಾರೆ.ಆಗ ಹಳೆಯ ಫೋನ್ ಅನ್ನು ಸ್ನೇಹಿತರು ಅಥವಾ ಕುಟುಂಬ ಸದಸ್ಯರಿಗೆ ನೀಡುತ್ತಾರೆ ಅಥವಾ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.ಕೆಲವು ಸಂದರ್ಭಗಳಲ್ಲಿ,ಹಳೆಯ ಫೋನ್ ಅನ್ನು ಮಾರಾಟ ಮಾಡುವಾಗ, ಖರೀದಿಸುವ ವ್ಯಕ್ತಿ ಏನು ಮಾಡುತ್ತಿದ್ದಾನೆ,ಅವನು ಆ ಫೋನ್ ಮೂಲಕ ಏನು ಮಾಡಬಹುದು ಎನ್ನುವ ಯೋಚನೆಗೂ ನಾವು ಹೋಗುವುದಿಲ್ಲ.


COMMERCIAL BREAK
SCROLL TO CONTINUE READING

ಜೈಲು ಪಾಲಾಗಬಹುದು :
ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಯಾರಿಗಾದರೂ ಮಾರಾಟ ಮಾಡಿದ್ದೀರಿ ಮತ್ತು ಆ ಫೋನ್ ಅನ್ನು ಯಾವುದೋ ತಪ್ಪು ಕೆಲಸಕ್ಕೆ ಬಳಸಲಾಗಿದೆ ಎಂದು ಭಾವಿಸೋಣ. ಆ ಫೋನ್‌ನಿಂದ ಯಾರಿಗಾದರೂ ಬೆದರಿಕೆ ಸಂದೇಶಗಳು ರವಾನೆಯಾಗಿರಬಹುದು ಅಥವಾ ಯಾವುದಾದರೂ ಪ್ರಮುಖ ವಂಚನೆಯಲ್ಲಿ ಬಳಸಿರಬಹುದು.ಅಂಥಹ ಪರಿಸ್ಥಿತಿಯಲ್ಲಿ, ಪೊಲೀಸರು ನೇರವಾಗಿ ಆ ಫೋನ್‌ನ IMEI ಸಂಖ್ಯೆಯನ್ನು ಟ್ರ್ಯಾಕ್ ಮಾಡುವ ಮೂಲಕ  ನಿಮ್ಮ ಮನೆಗೆ ತಲುಪುತ್ತಾರೆ. 


ಇದನ್ನೂ ಓದಿ : ಸೆಟ್ಟಿಂಗ್ ನಲ್ಲಿ ಈ ಬಟನ್ ಆನ್ ಮಾಡಿದರೆ ಸಾಕು ರಾಕೆಟ್ ನಂತೆ ಸ್ಪೀಡ್ ಆಗುವುದು BSNL ಇಂಟರ್ ನೆಟ್ !


ಫೋನ್ ಇನ್ನೂ ನಿಮ್ಮ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿರುವುದರಿಂದ, ಪೊಲೀಸರು ಈ ಅಪರಾಧದಲ್ಲಿ ನಿಮ್ಮನ್ನು ತಪ್ಪಿತಸ್ಥರೆಂದು ಪರಿಗಣಿಸಬಹುದು.ನೀವು ಫೋನ್ ಮಾರಾಟ ಮಾಡಿದ್ದರೂ ಮತ್ತು ನೀವು ಫೋನ್ ಮಾರಾಟ ಮಾಡಿದ್ದೀರಿ ಎಂದು ಸಾಬೀತುಪಡಿಸಲು ನಿಮ್ಮ ಬಳಿ ಯಾವುದೇ ಕಾನೂನು ಪುರಾವೆಗಳಿಲ್ಲದೇ ಇರುವುದರಿಂದ ನಿರಪರಾಧಿ ಎಂದು ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ.ಅಂತಹ ಪರಿಸ್ಥಿತಿಯಲ್ಲಿ ನೀವು ಜೈಲಿಗೆ ಹೋಗಬೇಕಾಗಬಹುದು.


ಕಾನೂನು ಪುರಾವೆ ಇಟ್ಟುಕೊಳ್ಳಿ : 
ನಿಮ್ಮ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಮುನ್ನ ಸ್ಟಾಂಪ್ ಪೇಪರ್‌ನಲ್ಲಿ 'ಸೇಲ್ ಆಫ್ ಅಗ್ರಿಮೆಂಟ್' ಸಿದ್ಧಪಡಿಸುವುದು ಬಹಳ ಮುಖ್ಯ.ಈ ಡಾಕ್ಯುಮೆಂಟ್‌ನಲ್ಲಿ, ನಿಮ್ಮ ಮತ್ತು ಖರೀದಿದಾರರ ಸಂಪೂರ್ಣ ಮಾಹಿತಿ, ಫೋನ್‌ನ IMEI ಸಂಖ್ಯೆ, ಮಾದರಿ ಸಂಖ್ಯೆ, ಮಾರಾಟದ ದಿನಾಂಕ ಮತ್ತು ಪಾವತಿಯ ವಿಧಾನವನ್ನು ಸ್ಪಷ್ಟವಾಗಿ ಬರೆಯಬೇಕು.ಈ ಡಾಕ್ಯುಮೆಂಟ್ ಯಾವುದೇ ಕಾನೂನು ಸಮಸ್ಯೆಗಳಿಂದ ನಿಮ್ಮನ್ನು ಕಾಪಾಡುತ್ತದೆ. 


ಇದನ್ನೂ ಓದಿ : Diwali saleನಲ್ಲಿ ಅತ್ಯಂತ ಅಗ್ಗದ ಬೆಲೆಗೆ ಸಿಗಲಿದೆ OnePlus 12!ಜೊತೆಗೆ ಉಚಿತವಾಗಿ ಸಿಗಲಿದೆ Buds Pro 2 !


ನಿಮ್ಮ ಬಳಿ ಕಾನೂನು ಪುರಾವೆ ಇದ್ದರೆ ನೀವು ಚಿಂತಿಸಬೇಕಾಗಿಲ್ಲ.ಸುಖಾಸುಮ್ಮನೆ ಕೋರ್ಟ್ ಕಾನೂನು ಎಂದು ಅಲೆಯುವುದನ್ನು ತಪ್ಪಿಸಬೇಕಾದರೆ  ಮಾರಾಟಗಾರ ಮತ್ತು  ಖರೀದಿದಾರರ ಒಪ್ಪಂದವನ್ನು ಮಾಡಿಕೊಳ್ಳಲೇ ಬೇಕು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ