ನವದೆಹಲಿ: ಡಿಸೆಂಬರ್‌ನಲ್ಲಿ ಚೇತಕ್ ಆರ್ಬನ್ ನ ಅಪ್‌ಗ್ರೇಡ್ ಆವೃತ್ತಿಯನ್ನು ಬಿಡುಗಡೆ ಮಾಡಿದ ನಂತರ, ಬಜಾಜ್ ಆಟೋ ಇದೀಗ 2024 ಚೇತಕ್ ಪ್ರೀಮಿಯಂ ಅನ್ನು ಬಿಡುಗಡೆ ಮಾಡಿದೆ, ಇದು ಮೊದಲಿಗಿಂತ ಹೆಚ್ಚಿನ ಶ್ರೇಣಿಯೊಂದಿಗೆ ಮಾರಾಟವಾಗಲಿದೆ.  ಆದರೆ ಸ್ವಲ್ಪ ಬೆಲೆ ಭಾರವನ್ನು ಕೂಡ ಇದು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ರೆಂಜ್ ಇದೀಗ 127 ಕಿಮೀ ವರೆಗೆ ಇರಲಿದೆ ಎಂದು ಹೇಳಲಾಗುತ್ತಿದೆ, ಇದು ARAI ಪ್ರಮಾಣೀಕೃತ ಶ್ರೇಣಿಯಾಗಿದೆ. ಹೆಚ್ಚುವರಿಯಾಗಿ, TecPac ಮೂಲಕ, ಗ್ರಾಹಕರು ಸರಿಸುಮಾರು 10 Kmph ಹೆಚ್ಚಿದ ವೇಗವನ್ನು ಆನಂದಿಸಬಹುದು, ಅಂದರೆ ಒಟ್ಟು ಗರಿಷ್ಠ ವೇಗ 73 kmph ಇರಲಿದೆ. ಈ ಪ್ಯಾಕ್‌ನಲ್ಲಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಸಂಗೀತ ನಿಯಂತ್ರಣ ಮತ್ತು ಕರೆ ನಿರ್ವಹಣೆಯಂತಹ ಹೆಚ್ಚುವರಿ ವೈಶಿಷ್ಟ್ಯಗಳ ಪ್ರಯೋಜನವನ್ನು ನೀವು ಪಡೆಯುತ್ತೀರಿ. ಹೊಸ ಬಜಾಜ್ ಚೇತಕ್ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.(Technology News In Kannada)


COMMERCIAL BREAK
SCROLL TO CONTINUE READING

2024 ರ ಚೇತಕ್ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ನ ಎಕ್ಸ್ ಶೋ ರೂಂ ಬೆಲೆ 1.35 ಲಕ್ಷ ರೂಪಾಯಿಗಳಾಗಿದ್ದು, ಇದು ಹಿಂದಿನ ಆವೃತ್ತಿಗಿಂತ 15,000 ರೂ. ದುಬಾರಿಯಾಗಿದೆ. ಆದಾಗ್ಯೂ, ಈ ಹೆಚ್ಚಿದ ಬೆಲೆಗೆ ಬದಲಾಗಿ, ಗ್ರಾಹಕರು ಇದೀಗ ಹೆಚ್ಚಿನ ಪ್ರಯೋಜನಗಳನ್ನು ಸಹ ಪಡೆಯಲಿದ್ದಾರೆ.  ಉದಾಹರಣೆಗೆ ಹೆಚ್ಚಿದ ಪೂರ್ಣ ಚಾರ್ಜ್ ಶ್ರೇಣಿ ಮತ್ತು ಅನೇಕ ಸುಧಾರಿತ ವೈಶಿಷ್ಟ್ಯಗಳು. ಚೇತಕ್ ಪ್ರೀಮಿಯಂ 2024 ಅನ್ನು ಹ್ಯಾಝೆಲ್‌ನಟ್, ಇಂಡಿಗೋ ಮೆಟಾಲಿಕ್ ಬ್ಲೂ ಮತ್ತು ಬ್ರೂಕ್ಲಿನ್ ಬ್ಲಾಕ್ ಬಣ್ಣ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ.
 
2024 ರ ಚೇತಕ್ ಪ್ರೀಮಿಯಂ ಇದೀಗ ಸುಧಾರಿತ 3.2 kWh ಪ್ಯಾಕ್‌ನೊಂದಿಗೆ ಸುಸಜ್ಜಿತವಾಗಿದೆ, ಕಂಪನಿ ಮಂಡಿಸಿರುವ ಹಕ್ಕುಗಳ ಪ್ರಕಾರ, 127 ಕಿಮೀಗಳ ARAI ಪ್ರಮಾಣೀಕೃತ ಶ್ರೇಣಿಯನ್ನು ತಲುಪಿಸುವ ಸಾಮರ್ಥ್ಯ ಇದು ಹೊಂದಿದೆ. ಹಿಂದಿನ ಆವೃತ್ತಿಯು 2.9 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿತ್ತು, ಇದು 108 ಕಿಮೀ ರೆಂಜ್ ನೀಡುತ್ತಿತ್ತು. ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ, ಚಾರ್ಜಿಂಗ್ ಸಮಯವು ಇದೀಗ 4 ಗಂಟೆ 30 ನಿಮಿಷಗಳಾಗಲಿದೆ.


ವೈಶಿಷ್ಟ್ಯಗಳನ್ನು ಸಹ ಸಾಕಷ್ಟು ಪ್ರಮಾಣದಲ್ಲಿ ನೀಡಲಾಗಿದೆ, ಹೊಸ 2024 ಮಾದರಿಯು ಇದೀಗ 5-ಇಂಚಿನ TFT ಡಿಸ್ಪ್ಲೇಯೊಂದಿಗೆ ಬರುತ್ತದೆ. ಚೇತಕ್ ಪ್ರೀಮಿಯಂ ಇತ್ತೀಚೆಗೆ ಪರಿಚಯಿಸಲಾದ TecPac ಮೂಲಕ TBT ನ್ಯಾವಿಗೇಶನ್ ಅನ್ನು ಹೊಂದಿದೆ. ಇದಲ್ಲದೆ, ಸಂಗೀತವನ್ನು ಸ್ಕೂಟರ್‌ನಿಂದಲೇ ನಿಯಂತ್ರಿಸಬಹುದು. ಒಂದು ಸ್ಮಾರ್ಟ್‌ಫೋನ್ ಜೋಡಿಯಾದರೆ, ಅದು ಕರೆ ನಿರ್ವಹಣೆ ಸೌಲಭ್ಯವನ್ನೂ ನೀಡುತ್ತದೆ.


ಇದನ್ನೂ ಓದಿ-Best OTT Recharge Plan: ಈ ಟೆಲಿಕಾಂ ಕಂಪನಿ ಕೇವಲ 148 ರೂ.ಗಳಲ್ಲಿ 12 ಓಟಿಟಿ ವೇದಿಕೆಗಳ ಚಂದದಾರಿಕೆಯನ್ನು ನೀಡುತ್ತಿದೆ!


ಹೊಸ ಸ್ಕೂಟರ್ ನೊಂದಿಗೆ ಇನ್ಮುಂದೆ ಸವಾರನು ತನ್ನ ಆಯ್ಕೆಯ ಪ್ರಕಾರ ಸ್ಕೂಟರ್‌ನ ಡಿಸ್ಪ್ಲೇ ಥೀಮ್ ಅನ್ನು ಬದಲಾಯಿಸಬಹುದು. ಪ್ಯಾಕ್ ಗರಿಷ್ಠ ವೇಗವನ್ನು 10 kmph ರಷ್ಟು ಹೆಚ್ಚಿಸುತ್ತದೆ, ಅಂದರೆ ಇದು ಈಗ 73 kmph ವೇಗವನ್ನು ತಲುಪಬಹುದು.


ಇದನ್ನೂ ಓದಿ-WhatsApp ನ ಈ ಸಿಕ್ರೆಟ್ ವೈಶಿಷ್ಟ್ಯಗಳನ್ನು ನೀವು ಎಂದಾದರೂ ಬಳಸಿದ್ದೀರಾ? ಅದ್ಭುತವಾಗಿವೆ!


ಆದಾಗ್ಯೂ, ಸೀಕ್ವೆನ್ಷಿಯಲ್ ಇಂಡಿಕೇಟರ್ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ನಂತಹ ಮೇಲೆ ತಿಳಿಸಲಾದ TecPac ವೈಶಿಷ್ಟ್ಯಗಳಿಗಾಗಿ, ನೀವು 9,000 ರೂಪಾಯಿಗಳ ಹೆಚ್ಚುವರಿ ಬೆಲೆಯನ್ನು ಪಾವತಿಸಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.



ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ