Best OTT Recharge Plan: ಈ ಟೆಲಿಕಾಂ ಕಂಪನಿ ಕೇವಲ 148 ರೂ.ಗಳಲ್ಲಿ 12 ಓಟಿಟಿ ವೇದಿಕೆಗಳ ಚಂದದಾರಿಕೆಯನ್ನು ನೀಡುತ್ತಿದೆ!

Best OTT Recharge Plan: ಈ ಪ್ರಿಪೇಯ್ಡ್ ಯೋಜನೆಯು ಬಳಕೆದಾರರಿಗೆ 10 GB ಡೇಟಾವನ್ನು 28 ದಿನಗಳ ಮಾನ್ಯತೆಯೊಂದಿಗೆ ನೀಡಲಾಗುತ್ತದೆ. (Technology News In Kannada)  

Written by - Nitin Tabib | Last Updated : Jan 4, 2024, 08:53 PM IST
  • ಜಿಯೋದ 148 ರೂಗಳ ಪ್ರಿಪೇಯ್ಡ್ ವೋಚರ್ 12 ಓಟಿಟಿ ವೇದಿಕೆಗಳಿಗೆ ಚಂದಾದಾರಿಕೆಯನ್ನು ಒದಗಿಸುತ್ತದೆ.
  • ಜಿಯೋ ಟಿವಿ ಪ್ರೀಮಿಯಂ ಮೂಲಕ ಇದು ಸಾಧ್ಯವಾಗುತ್ತದೆ. ಜಿಯೋ ಟಿವಿ ಪ್ರೀಮಿಯಂ ಕಂಪನಿಯ ಜಿಯೋಟಿವಿ ಪ್ಲಾಟ್‌ಫಾರ್ಮ್‌ನ ಹೊಸ ಆವೃತ್ತಿಯಾಗಿದೆ ಎಂಬುದು ಇಲ್ಲಿ ಗಮನಾರ್ಹ.
  • ಜಿಯೋ ಟಿವಿ ಪ್ರೀಮಿಯಂನೊಂದಿಗೆ, ಬಳಕೆದಾರರು ಒಂದೇ ಸ್ಥಳದಲ್ಲಿ ಅನೇಕ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಕಂಟೆಂಟ್ ವೀಕ್ಷಿಸಲು ಸಾಧ್ಯವಾಗುತ್ತದೆ.
Best OTT Recharge Plan: ಈ ಟೆಲಿಕಾಂ ಕಂಪನಿ ಕೇವಲ 148 ರೂ.ಗಳಲ್ಲಿ 12 ಓಟಿಟಿ ವೇದಿಕೆಗಳ ಚಂದದಾರಿಕೆಯನ್ನು ನೀಡುತ್ತಿದೆ!  title=

ಬೆಂಗಳೂರು: ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಬಳಕೆದಾರರಿಗಾಗಿ 'ಅಗ್ಗದ' ರೀಚಾರ್ಜ್ ಯೋಜನೆಯನ್ನು ಆರಂಭಿಸಿದೆ. ಇದರ ವಿಶೇಷತೆ ಎಂದರೆ ಈ ಯೋಜನೆಯೊಂದಿಗೆ 12 ಓಟಿಟಿ ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆ ಲಭ್ಯವಿದೆ. ಇದು ಈ ಯೋಜನೆಯ ಗುಣಮಟ್ಟ ಮಾತ್ರವಲ್ಲ. ಈ ಪ್ರಿಪೇಯ್ಡ್ ಯೋಜನೆಯು ಬಳಕೆದಾರರಿಗೆ 10 GB ಡೇಟಾವನ್ನು ಮತ್ತು 28 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ. ಆದರೆ ಈ ಪ್ರಿಪೇಯ್ಡ್ ಯೋಜನೆಯಲ್ಲಿ ಕರೆ ಮತ್ತು ಎಸ್ಎಂಎಸ್ ಪ್ರಯೋಜನಗಳು ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು, ನೀವು ಸಂಪೂರ್ಣ ಸುದ್ದಿಯನ್ನು ಓದಬೇಕು. (Technology News In Kannada)

ಪ್ರಸ್ತುತ, ಜಿಯೋ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿದೆ ಮತ್ತು ಕಂಪನಿಯು ತನ್ನ ಬಳಕೆದಾರರಿಗೆ ಎಲ್ಲವನ್ನೂ ಕೈಗೆಟುಕುವ ದರದಲ್ಲಿ ಒದಗಿಸಲು ಬಯಸುತ್ತದೆ. ಜಿಯೋದ ದೊಡ್ಡ ಸ್ಪರ್ಧೆ ಏರ್‌ಟೆಲ್‌ನೊಂದಿಗೆ ಇದೆ. ಏರ್ಟೆಲ್ ಗೆ ಪೈಪೋಟಿ ನೀಡಲು ಕಂಪನಿಯು ರೂ 148 ರ ಪ್ರಿಪೇಯ್ಡ್ ವೋಚರ್ ಅನ್ನು ಪರಿಚಯಿಸಿದೆ.
 
ಜಿಯೋದ ರೂ 148 ವೋಚರ್‌ನ ವೈಶಿಷ್ಟ್ಯಗಳು
ಜಿಯೋದ 148 ರೂಗಳ ಪ್ರಿಪೇಯ್ಡ್ ವೋಚರ್ 12 ಓಟಿಟಿ ವೇದಿಕೆಗಳಿಗೆ ಚಂದಾದಾರಿಕೆಯನ್ನು ಒದಗಿಸುತ್ತದೆ. ಜಿಯೋ ಟಿವಿ ಪ್ರೀಮಿಯಂ ಮೂಲಕ ಇದು ಸಾಧ್ಯವಾಗುತ್ತದೆ. ಜಿಯೋ ಟಿವಿ ಪ್ರೀಮಿಯಂ ಕಂಪನಿಯ ಜಿಯೋಟಿವಿ ಪ್ಲಾಟ್‌ಫಾರ್ಮ್‌ನ ಹೊಸ ಆವೃತ್ತಿಯಾಗಿದೆ ಎಂಬುದು ಇಲ್ಲಿ ಗಮನಾರ್ಹ. ಜಿಯೋ ಟಿವಿ ಪ್ರೀಮಿಯಂನೊಂದಿಗೆ, ಬಳಕೆದಾರರು ಒಂದೇ ಸ್ಥಳದಲ್ಲಿ ಅನೇಕ ಓಟಿಟಿ  ಪ್ಲಾಟ್‌ಫಾರ್ಮ್‌ಗಳ ಕಂಟೆಂಟ್ ವೀಕ್ಷಿಸಲು ಸಾಧ್ಯವಾಗುತ್ತದೆ. ಆದಾಗ್ಯೂ, ರೂ 148 ರ ಪ್ರಿಪೇಯ್ಡ್ ವೋಚರ್‌ನಲ್ಲಿ ಒಂದೇ ಲಾಗಿನ್ ಸೌಲಭ್ಯ ಮಾತ್ರ ಲಭ್ಯವಿರುತ್ತದೆ.

ಇದನ್ನೂ ಓದಿ-WhatsApp ನ ಈ ಸಿಕ್ರೆಟ್ ವೈಶಿಷ್ಟ್ಯಗಳನ್ನು ನೀವು ಎಂದಾದರೂ ಬಳಸಿದ್ದೀರಾ? ಅದ್ಭುತವಾಗಿವೆ!

ಇದರ ಹೊರತಾಗಿ, ಬಳಕೆದಾರರಿಗೆ 10 GB ಡೇಟಾವನ್ನು ನೀಡಲಾಗುತ್ತಿದೆ ಮತ್ತು ಈ ಡೇಟಾ ವೋಚರ್‌ನ ಒಟ್ಟು ಮಾನ್ಯತೆಯು 28 ದಿನಗಳವರೆಗೆ ಇರುತ್ತದೆ, ಅಂದರೆ, ನೀವು ಸುಮಾರು ಒಂದು ತಿಂಗಳವರೆಗೆ 12 ಓಟಿಟಿ ಪ್ಲಾಟ್‌ಫಾರ್ಮ್‌ಗಳ ಕಂಟೆಂಟ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ-ಹೊಸ ವರ್ಷದಲ್ಲಿ ಜಿಯೋ ಕಂಪನಿಯ ಈ ರೀಚಾರ್ಜ್ ಪ್ಲಾನ್ ನಲ್ಲಿ ಸಿಗುತ್ತಿದೆ 24 ದಿನಗಳ ಹೆಚ್ಚುವರಿ ವ್ಯಾಲಿಡಿಟಿ!
 
ಯಾವ ಯಾವ ಓಟಿಟಿ ವೇಡಿಕೆಗಳನ್ನು ಶಾಮೀಲುಗೊಳಿಸಲಾಗಿದೆ
ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರು ಜಿಯೋದ ರೂ 148 ಪ್ರಿಪೇಯ್ಡ್ ವೋಚರ್‌ನೊಂದಿಗೆ ಕಟೆಂಟ್ ಪ್ರವೇಶಿಸಲು ಸಾಧ್ಯವಾಗುತ್ತದೆ SonyLIV, ZEE5, JioCinema Premium, Lionsgate Play, Discovery+, SunNXT, Kanchha Lanka, Planet Marathi, Chaupal, DocuBay, EPIC On ಮತ್ತು Hoichoi. ಜಿಯೋ ಸಿನಿಮಾ ಪ್ರೀಮಿಯಂಗಾಗಿ ಬಳಕೆದಾರರಿಗೆ ಪ್ರತ್ಯೇಕ ಕೂಪನ್ ಅನ್ನು ನೀಡಲಾಗುತ್ತದೆ, ಅದು ಅವರ ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ಸಿಗಲಿದೆ. ಇದರ ನಂತರ ಬಳಕೆದಾರರು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಅದರ ಪ್ರೀಮಿಯಂ ವಿಷಯವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಉಳಿದಿರುವ ಎಲ್ಲಾ ವಿಷಯವನ್ನು ಜಿಯೋ ಟಿವಿ ಪ್ರೀಮಿಯಂನಲ್ಲಿ ನೋಡಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News